ನವದೆಹಲಿ: 17ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಬಿಸಿಸಿಐ ಹಾಗೂ ತಂಡಗಳು ಟೂರ್ನಿಗೆ ಸಿದ್ದತೆಗಳನ್ನು ಆರಂಭಿಸಿವೆ. ಈಗಾಗಲೇ ಆಟಗಾರರ ಗಾಯದ ಸಮಸ್ಯೆ ಸೇರಿದಂತೆ ಹಲವು ವಿಚಾರಗಳಿಗೆ ಸದ್ದು ಮಾಡಿರುವ ಐಪಿಎಲ್ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಆದರೆ, ಈ ಬಾರಿ ಬೇರೆಯದ್ದೆ ವಿಚಾರಕ್ಕೆ.
ಮಾರ್ಚ್ 22ರಂದು ಆರಂಭವಾಗಲಿರುವ ಟೂರ್ನಿಯು ಈಗಾಗಲೇ ಆಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದು, ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಒಂದು ವೈರಲ್ ಆಗಿದೆ. ಆದರೆ, ಈ ಟ್ವೀಟ್ ಈಗ ವಿವಾದಕ್ಕೆ ನಾಂದಿ ಹಾಡಿದ್ದು ಟೀಮ್ ಇಂಡಿಯಾದಲ್ಲಿ ಲೈಕ್ವಾರ್ಗೆ ಎಡೆ ಮಾಡಿಕೊಟ್ಟಿದೆ.
ಈ ಹಿಂದೆ ಗುಜರಾತ್ ಟೈಟಾನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಕಾರಣಾಂತರಗಳಿಂದ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ಕೂಡಿಕೊಂಡಿದ್ದರು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು ಮತ್ತು ರೋಹಿತ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಹಾರ್ದಿಕ್ ತಂಡ ಬಿಟ್ಟರೂ ದೊಡ್ಡ ಸಮಸ್ಯೆ ಇಲ್ಲ ಎಂದು ತಂಡದ ವೇಗಿ ಶಮಿ ಹೇಳಿದ್ದರು. ಇದೀಗ ಶಮಿ ಅವರ ವಿಚಾರದಲ್ಲಿ ಮತ್ತೊಮ್ಮೆ ಹೈಲೈಟ್ ಆಗಿದ್ದಾರೆ.
Shami bhai gave his 100 percent even when he was in pain during worldcup, then there is one chapri kalu who shown fake injury to keep himself available for IPL
— Ctrl C Ctrl Memes (@Ctrlmemes_) March 13, 2024
ಇದನ್ನೂ ಓದಿ: ಜಾಕಿ ರೀರಿಲೀಸ್ ಬೆನ್ನಲ್ಲೇ ತಾರಕಕ್ಕೇರಿದ ಸ್ಟಂಟ್ ಮಾಸ್ಟರ್ಗಳ ಫೈರ್ ಫೈಟಿಂಗ್
ಮೊಹಮ್ಮದ್ ಶಮಿಗೆ ರೋಹಿತ್ ಪದಚ್ಯುತಿ ಮತ್ತು ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ ಹಠಾತ್ ನಿರ್ಗಮನವನ್ನು ಇಷ್ಟಪಡಲಿಲ್ಲ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಸದ್ಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಈ ಸ್ಟಾರ್ ವೇಗಿ ಗುಜರಾತ್ ಟೈಟಾನ್ಸ್ ತಂಡದ ಮಾಜಿ ನಾಯಕನ ವಿರುದ್ಧದ ಅವಹೇಳನಕಾರಿ ಪೋಸ್ಟ್ ಒಂದನ್ನು ಲೈಕ್ ಮಾಡಿದ್ದಾರೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶ್ವಕಪ್ ಸಮಯದಲ್ಲಿ ನೋವಿದ್ದರೂ ಸಹ ಮೊಹಮ್ಮದ್ ಶಮಿ ತಂಡಕ್ಕಾಗಿ ಆಡಿದರು. ಆದರೆ, ಇನ್ನೊಬ್ಬರು ಐಪಿಎಲ್ ಆಡುವುದಕ್ಕಾಗಿಯೇ ಗಾಯದ ಕಾರಣ ನೀಡಿ ಅಂತರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಂಡರು ಎಂದು ಹಾರ್ದಿಕ್ ಪಾಂಡ್ಉ ಹೆಸರು ಉಲ್ಲೇಖಿಸದೆ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಮೊಹಮ್ಮದ್ ಶಮಿ ಲೈಕ್ ಮಾಡಿದ್ದು ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಲೀಗ್‌ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಹಾಲಿ ಚಾಂಪಿಯನ್ ಚೆನ್ನೈ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದ್ದು, ಕ್ರೀಡಾಭಿಮಾನಿಗಳು ಈ ಪಂದ್ಯ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.