'ನಾನು ಸಂಸತ್ತಿನಲ್ಲಿರಬೇಕಿತ್ತು' ರಾಜಕೀಯ ಸೇರುವ ಬಯಕೆ ಬಿಚ್ಚಿಟ್ಟ ಸೋನಿಯಾ ಗಾಂಧಿ ಅಳಿಯ

robert
Published on

ನವದೆಹಲಿ: ಇಂದಿರಾ ಗಾಂಧಿ ಅವರ ಕುಟುಂಬವೇ ರಾಜಕೀಯದಲ್ಲಿ ಮಿಂದೆದ್ದಿರುವ ಕುಟುಂಬವೆಂದರೆ ತಪ್ಪಾಗಲಾರದು. ಮೂರು ತಲೆಮಾರಿನವರು ಕಾಂಗ್ರೆಸ್​ನಲ್ಲಿ ಪ್ರಮುಖ ಸ್ಥಾನಗಳನ್ನು ವಹಿಸಿಕೊಂಡು ಅಧಿಕಾರ ನಿರ್ವಹಿಸಿದ್ದಾರೆ. ಇದೀಗ ಅದೇ ಕುಟುಂಬದ ಮತ್ತೊಬ್ಬ ವ್ಯಕ್ತಿ ರಾಜಕೀಯ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬೇನಾಮಿ ಆಸ್ತಿ ಪ್ರಕರಣದಲ್ಲಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್​ ವಾದ್ರಾರನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಳಪಡಿಸಿದೆ. ಪ್ರಕರಣದಲ್ಲಿ ಸಿಲುಕಿಕೊಂಡು, ವಿಚಾರಣೆಗಳಿಂದ ಬೇಸತ್ತಿರುವ ರಾಬರ್ಟ್​ ವಾದ್ರಾ ತಮ್ಮ ಮನದ ಮಾತನ್ನು ಹೊರ ಹಾಕಿದ್ದಾರೆ. ಸಾಕಷ್ಟು ವರ್ಷ ಜನರ ಸೇವೆಯಲ್ಲಿ ತೊಡಗಿಸಿಕೊಂಡು, ಸೇವೆಗಾಗಿಯೇ ಪ್ರಾಣ ತ್ಯಾಗ ಮಾಡಿದ ಕುಟುಂಬಕ್ಕೆ ನಾನು ಸೇರಿದ್ದೇನೆ ಎನ್ನುವ ಕಾರಣಕ್ಕೆ ನನ್ನ ಮೇಲೆ ಇಂತಹ ಪ್ರಕರಣಗಳು ದಾಖಲಾಗಿವೆ. ಈ ಸಮಯದಲ್ಲಿ ನಾನು ಸಂಸತ್ತಿನಲ್ಲಿರಬೇಕಿತ್ತು. ಇಂತಹ ಸಮಸ್ಯೆಗಳ ವಿರುದ್ಧ ಅಲ್ಲಿಂದಲೇ ಹೋರಾಡಬೇಕಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್‌ಸಿಆರ್), ಲಂಡನ್ ಮತ್ತು ಇತರ ನಗರಗಳಲ್ಲಿನ ಬೆನಾಮಿ ಆಸ್ತಿಗಳ ಬಗ್ಗೆ ಈ ವಾರದ ಆರಂಭದಲ್ಲಿ ರಾಬರ್ಟ್​ ವಾದ್ರಾ ಅವರನ್ನು ಇಡಿ ತನಿಖೆ ನಡೆಸಿದೆ. ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿರುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net