More

    ಚಾಲೆಂಜಿಂಗ್​ ಸ್ಟಾರ್ ದರ್ಶನ್ ‘ರಾಬರ್ಟ್’​ ತಂಡದಿಂದ ಬಂತು ಹೊಸ ಪೋಸ್ಟರ್

    ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ರಾಬರ್ಟ್’ ಸಿನಿಮಾ ಏ. 9ಕ್ಕೆ ತೆರೆಕಾಣಬೇಕಿತ್ತು. ಕರೊನಾ ಹಾವಳಿಯಿಂದಾಗಿ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿತ್ತು. ಚಿತ್ರತಂಡದ ಈ ನಿರ್ಧಾರಕ್ಕೆ ಅಭಿಮಾನಿಗಳೂ ಖುಷ್ ಆದರು. ಆದರೆ, ಇನ್ನೊಂದು ಕಡೆ ಅಷ್ಟೇ ಬೇಸರವೂ ಆಗಿತ್ತು. ಮತ್ತೊಂದು ಟೀಸರ್ ಅಥವಾ ಹಾಡನ್ನು ಬಿಡುವಂತೆ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದರು. ಅಭಿಮಾನಿಗಳ ಕೋರಿಕೆಯಂತೆ ಹಾಡು, ಪೋಸ್ಟರ್​ಗಳು ಬಿಡುಗಡೆ ಆದವು. ಇದೀಗ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಕೆಜಿಎಫ್​ ಖಳನ ಕ್ರೌರ್ಯ ಕೌತುಕ!; ದತ್​ ಜನ್ಮದಿನಕ್ಕೆ ವಿಶೇಷ ಗಿಫ್ಟ್

    ಹೌದು, ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಅವರ ಜನ್ಮದಿನದ ಪ್ರಯುಕ್ತ ರಾಬರ್ಟ್​ ತಂಡದಿಂದ ಹೊಸ ಪೊಸ್ಟರ್ ಬಿಡುಗಡೆಯಾಗಿದ್ದು, ಮಾಸ್​ ಅವತಾರದಲ್ಲಿ ದರ್ಶನ್​ ಎದುರಾಗಿದ್ದಾರೆ. ಕೈಯಲ್ಲಿ ಗಿಟಾರ್​ ಹಿಡಿದ ಭಂಗಿಯಲ್ಲಿ ದರ್ಶನ್​ ಕಾಣಿಸಿಕೊಂಡು, ಪೋಸ್ಟರ್ ಮೂಲಕವೇ ನಿರ್ಮಾಪಕರಿಗೆ ಶುಭಾಶಯ ಕೋರಿದೆ ಚಿತ್ರತಂಡ.

    ಇದನ್ನೂ ಓದಿ: ರಚಿತಾ ಹೆಗಲ ಮೇಲೆ ಏಪ್ರಿಲ್ ಜವಾಬ್ದಾರಿ…!

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಚಿತ್ರತಂಡಕ್ಕಿಂತ ಹೆಚ್ಚಾಗಿ ಅಭಿಮಾನಿಗಳೇ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ದರ್ಶನ್​ ಫ್ಯಾನ್ಸ್ ರಾಬರ್ಟ್​ ಸಿನಿಮಾ ಪೋಸ್ಟರ್ ಇರುವ ಮಾಸ್ಕ್​ಗಳನ್ನು ಸಿದ್ಧಪಡಿಸಿದ್ದಾರೆ. ಈ ಮಾಸ್ಕ್​ಗಳನ್ನು ಮಾರಾಟ ಮಾಡಲಾಗುತ್ತಿದೆಯಾ ಅಥವಾ ಕೇವಲ ಫ್ರೀಯಾಗಿ ಹಂಚಲಾಗುತ್ತಿದೆಯಾ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

    ಬಿಗ್​ಬಾಸ್​ ಶೋ ವಿರುದ್ಧ ಗಂಭೀರ ಆರೋಪ ಮಾಡಿದ ಕಿರಾತಕ ಬೆಡಗಿ ಓವಿಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts