ಕೆಜಿಎಫ್​ ಖಳನ ಕ್ರೌರ್ಯ ಕೌತುಕ!; ದತ್​ ಜನ್ಮದಿನಕ್ಕೆ ವಿಶೇಷ ಗಿಫ್ಟ್

kgf
Published on

ಪ್ರಶಾಂತ್​ ನೀಲ್ ನಿರ್ದೇಶನದ, ಯಶ್ ಅಭಿನಯದ ಕೆಜಿಎಫ್​ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡು, ಚಿತ್ರೀಕರಣೋತ್ತರ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಕರೊನಾ ಹಾವಳಿ ತಗ್ಗುತ್ತಿದ್ದಂತೆ ಬಾಕಿ ಉಳಿದ ಚಿತ್ರೀಕರಣ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​ ಮಾಹಿತಿಯೊಂದು ಹೊರಬಂದಿದೆ.

ಕೆಜಿಎಫ್​​ ಚಾಪ್ಟರ್​ 2 ನಲ್ಲಿ ಸಂಜಯ್​ ದತ್​ ಖಳನಾಯಕನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಕಳೆದ ವರ್ಷವೇ ಸಂಜಯ್​ ದತ್​ ಹುಟ್ಟು ಹಬ್ಬದ ನಿಮಿತ್ತ ಅವರ ಲುಕ್​ ರಿವೀಲ್​ ಮಾಡಿ ಅಭಿಮಾನಿಗಳಿಗೆ ಸಪ್ರೈಸ್​ ನೀಡಿದ್ದರು. ನಿರ್ದೇಶಕ ಪ್ರಶಾಂತ್. ಇದೀಗ ಮತ್ತೊಂದು ವರ್ಷ ಕಳೆದಿದೆ. ಜುಲೈ 29ಕ್ಕೆ ದತ್ 60ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆವತ್ತು ಕೆಜಿಎಫ್​ ಕಡೆಯಿಂದ ವಿಶೇಷ ಉಡುಗೊರೆಯೊಂದು ಬಿಡುಗಡೆ ಆಗಲಿದೆ.

ಅಂದಹಾಗೆ, 29ಕ್ಕೆ ಟೀಸರ್ ರಿಲೀಸ್ ಆಗಬಹುದಾ ಅಥವಾ ಸಂಜಯ್​ ದತ್​ ಅವರ ಲುಕ್ ಬಿಡುಗಡೆ ಆಗಬಹುದು? ಇದೀಗ ಈ ಎರಡು ಪ್ರಶ್ನೆಗೆ ಉತ್ತರ ಸಿಕ್ಕಿದೆ. ಖಳನಾಯಕನ ಕ್ರೌರ್ಯತೆಗೆ ಸಂಬಂಧಪಟ್ಟ ಲುಕ್​ವೊಂದು ಬಿಡುಗಡೆ ಆಗುವ ಸಾಧ್ಯತೆಗಳಿವೆ. ಈಗಾಗಲೇ ಆ ಲುಕ್​ನಲ್ಲಿ ಏನಿರಲಿದೆ ಎಂಬುದನ್ನು ಹೇಳಿಕೊಳ್ಳುವುದಕ್ಕೆ ಕೆಜಿಎಫ್​ ತಂಡ ಹೊಸ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಿದೆ. ​ಆ ಕುತುಹಲಕ್ಕೆ ಕೇವಲ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ಹೊಂಬಾಳೆ ಫಿಲಂಸ್​ ಬ್ಯಾನರ್​ನಲ್ಲಿ ವಿಜಯ್​ ಕಿರಗಂದೂರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net