ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಚಿನ್ನದಂಗಡಿ ಮಾಲೀಕನಿಗೆ ಗನ್ ತೋರಿಸಿ ದರೋಡೆ| Robbery

cctv drasya
Published on

Robbery: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್​ವೊಂದರಲ್ಲಿ ಮೂವರು ವ್ಯಕ್ತಿಗಳು ನುಗ್ಗಿ ಸಿನಿಮೀಯ ರೀತಿಯಲ್ಲಿ ಅಂಗಡಿ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಜು. 24ರಂದು ನಡೆದಿದೆ.

ಮಾಗಡಿ ರಸ್ತೆಯ ಭೈರವೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ರಾಮ್ ಜ್ಯುವೆಲ್ಲರ್ಸ್​​ನಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ದರೋಡೆ ನಡೆದಿದ್ದು, ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ.

ಅಂಗಡಿ ಮುಚ್ಚುವ ಸಮಯಕ್ಕೆ ಕೈಯಲ್ಲಿ ಗನ್ ಹಿಡಿದು ನುಗ್ಗಿದ ಮಾಸ್ಕ್ ಧರಿಸಿದ ಮೂವರು ದುಷ್ಕರ್ಮಿಗಳು, ಮಾಲೀಕ ಕನ್ಹಯ್ಯ ಲಾಲ್​ ಮತ್ತು ಸಹಾಯಕನನ್ನ ಹೆದರಿಸಿ, ಎದುರಿಗೆ ಸಿಕ್ಕ 186 ಗ್ರಾಂ ಚಿನ್ನಾಭರಣವನ್ನ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ಪೊಲೀಸರು ಕೆಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net