ಯೂಟ್ಯೂಬ್ ವಿಡಿಯೋ ನೋಡಿ ತೂಕ ಇಳಿಸಲು ಹೋಗಿ ಮೃತಪಟ್ಟ ಬಾಲಕ!| Death

juice
Published on

Death: ಯೂಟ್ಯೂಬ್​ನಲ್ಲಿನ ಡಯಟ್ ವಿಡಿಯೋ ನೋಡಿ ತೂಕ ಇಳಿಸಿಕೊಳ್ಳಲು 3 ತಿಂಗಳ ಕಾಲ ಆಹಾರ ಬಿಟ್ಟು ಹಣ್ಣಿನ ಜ್ಯೂಸ್ ಸೇವಿಸಿದ 17 ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕೊಳಚೆಲ್​ನಲ್ಲಿ ನಡೆದಿದೆ.

ಕೊಳಚೆಲ್ ಗ್ರಾಮದ ಶಕ್ತೀಶ್ವರನ್, ಯೂಟ್ಯೂಬ್​ನಲ್ಲಿ ತೂಕ ಇಳಿಸುವ ಡಯಟ್ ಸಲಹೆಯ ವಿಡಿಯೋ ಅನುಸರಿಸಿ ಮೃತಪಟ್ಟ ಬಾಲಕ.

ತಮ್ಮ ಮಗ ತುಂಬಾ ಆರೋಗ್ಯವಾಗಿದ್ದ ಮತ್ತು ಕ್ರಿಯಾಶೀಲನಾಗಿದ್ದನು. ಆದರೆ, ತೂಕ ಇಳಿಸಿಕೊಳ್ಳಲು ಯೂಟ್ಯೂಬ್‌ನಲ್ಲಿನ ಡಯಟ್ ಸಲಹೆಯ ವೀಡಿಯೊ ನೋಡಿದ ಬಳಿಕ ಬರೀ ಹಣ್ಣಿನ ಜ್ಯೂಸ್​ ಅನ್ನು ಮಾತ್ರ ಕುಡಿಯುತ್ತಿದ್ದ. ವೈದ್ಯರನ್ನ ಸಂಪರ್ಕ ಮಾಡದೇ, ಆರೋಗ್ಯದ ಸಲಹೆ ಪಡೆಯದೇ ಊಟ ಬಿಟ್ಟಿದ್ದನು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಗುರುವಾರ ಮನೆಯಲ್ಲಿ ಆಹಾರ ಸೇವಿಸಿದ ಬಳಿಕ ಬಾಲಕ ವಾಂತಿ ಮಾಡಿದ್ದು, ನಂತರ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಬಾಲಕನ ಸಾವಿಗೆ ಕಾರಣ ಕಂಡು ಹಿಡಿಯಲು ಮರಣೋತ್ತರ ಪರೀಕ್ಷೆ ಮಾಡಿದ್ದು, ವರದಿಯನ್ನ ಪರಿಶೀಲಿಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net