

ಬೆಳ್ತಂಗಡಿ: ನೆರಿಯ ಗ್ರಾಮದ ಬಯಲು ಬಸ್ತಿ ಪೆರಿಯಡ್ಕ ಮೂಲಕ ಧರ್ಮಸ್ಥಳಕ್ಕೆ ಸಾಗುವ ಡಾಂಬರು ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ತೀವ್ರ ಸಮಸ್ಯೆ ತಂದೊಡ್ಡಿದ್ದ ರಸ್ತೆಯನ್ನು ಎನ್ನೆಸ್ಸೆಸ್ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಮುಂಡಾಜೆ ಪಿ.ಯು. ಕಾಲೇಜಿನ ಎನ್ನೆಸ್ಸೆಸ್ ಟಕದ ವಿದ್ಯಾರ್ಥಿಗಳು ನೆರಿಯದಲ್ಲಿ ನಡೆಯುತ್ತಿರುವ ವಾರ್ಷಿಕ ಶಿಬಿರದ ಒಂದು ದಿನ ಈ ರಸ್ತೆಗೆ ಸುವಾರು 20 ಲೋಡ್ ಕಲ್ಲು-ಮಣ್ಣು ಹಾಕುವ ಮೂಲಕ ರಸ್ತೆಯ ನಾಲ್ಕು ಕಿ.ಮೀ. ಪ್ರದೇಶವನ್ನು ದುರಸ್ತಿಗೊಳಿಸಿದರು ಪ್ರಮುಖರಾದ ಸೋಮನಾಥ ಗೌಡ ವಾಕಳ, ರಾವ ಗೌಡ ಕುಡುಮಡ್ಕ, ವೆಂಕಟರಮಣ ಗೌಡ ಕೆಮ್ಮಟೆ, ಪುಷ್ಪಾಕರ, ಸಂತೋಷ್, ಯಶ್ವಿನ್, ಪವನ್, ದಯಾಕರ ಗೌಡ ಮತ್ತಿತರರು ಇದ್ದರು.