ಸುಳ್ಯ: ಭಜನೆ ಎಲ್ಲರನ್ನೂ ಒಗ್ಗೂಡಿಸಿ ಐಕ್ಯತಾ ಮನೋಭಾವದಿಂದಿರಲು ಪ್ರೇರಣೆ ಒದಗಿಸುತ್ತದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅಜ್ಜಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ಮತ್ತು ಮಾತೃಶಕ್ತಿ ದುರ್ಗಾವಾಹಿನಿ ಶಿವಾಜಿ ಶಾಖೆ ಅಜ್ಜಾವರ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಎಂಟು ದಿನದ ಭಜನಾ ತರಬೇತಿ ಶಿಬಿರಕ್ಕೆ ಬುಧವಾರ ಆಗಮಿಸಿ ಮಾತನಾಡಿದರು.
ಶಿಬಿರದಲ್ಲಿ 1ರಿಂದ 10ನೇ ತರಗತಿಯ 156 ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ತಾಲೂಕಿನ ಸಂಪನ್ಮೂಲ ವ್ಯಕ್ತಿಗಳು ಬಂದು ಕುಳಿತು ಮತ್ತು ಕುಣಿತ ಎರಡು ವಿಧದ ಭಜನೆಯ ತರಬೇತಿ ನೀಡುತ್ತಿದ್ದಾರೆ.
ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯೆ ಶಿಲ್ಪಾ ಸುದೇವ್, ಶಾಸ್ತಾವೇಶ್ವರ ದೇವಸ್ಥಾನದ ಗೌರವ ಸಲಹೆಗಾರ ಕರುಣಾಕರ ಕೊಡಂಕಿರಿ ಕರ್ಲಪ್ಪಾಡಿ, ಸಿ.ಎ. ಬ್ಯಾಂಕ್ ನಿರ್ದೇಶಕ ಪ್ರಭೋದ್ ಶೆಟ್ಟಿ ಮೇನಾಲ, ಭಜನಾ ತರಬೇತುದಾರ ಶಿವಪ್ರಸಾದ್ ಆಲೆಟ್ಟಿ, ಆನಂದ ಬಳ್ಪ, ಪ್ರತಾಪ ಯು.ಮಂ. ಅಧ್ಯಕ್ಷ ಗುರುರಾಜ್ ಅಜ್ಜಾವರ, ಶಿವಾಜಿ ಶಾಖೆಯ ಪ್ರಮುಖ್ ನಾರಾಯಣ ಬಂಟರಬೈಲು, ವಿನಯ್ ಹಾಗೂ ದುರ್ಗಾವಾಹಿನಿ ಪ್ರಮುಖರು, ಮಾತೃ ಶಕ್ತಿ ಪ್ರಮುಖರು ಉಪಸ್ಥಿತರಿದರು.
ಚೈತ್ರ ಯುವತಿ ಮಂಡಲದ ಅಧ್ಯಕ್ಷ ಶಶ್ಮಿ ಭಟ್ ಸ್ವಾಗತಿಸಿದರು. ದುರ್ಗಾವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ ಕರ್ಲಪಾಡಿ ವಂದಿಸಿದರು.