Bihar Election | ಹಣ ಕೊಟ್ಟರೆ ಮಾತ್ರ ಆರ್​ಜೆಡಿ ಟಿಕೆಟ್​...ಮೈ ಮೇಲಿನ ಕುರ್ತಾ ಹರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಆಕಾಂಕ್ಷಿ ಮದನ್ ಶಾ

Untitled design - 2025-10-19T165749.077
Published on

Patna: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ( Bihar Election) ಸ್ಪರ್ಧೆ ಮಾಡಲು ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ಆರ್​ಜೆಡಿ ನನಗೆ ಟಿಕೆಟ್​ ನಿರಾಕರಿಸಿದ್ದು, ರಾಜ್ಯಸಭಾ ಸದಸ್ಯ ಸಂಜಯ್ ಯಾದವ್​, ಹಣಕ್ಕಾಗಿ ದಲ್ಲಾಳಿ ಮಾಡುತ್ತಿದ್ದಾರೆ ಎಂದು ಮಧುಬನ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮದನ್ ಶಾ ಆರೋಪಿಸಿದ್ದಾರೆ.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನಿವಾಸದ ಹೊರಗೆ ಭಾನುವಾರ (ಅ 19) ಹೈಡ್ರಾಮಾ ನಡೆದಿದ್ದು, ಪಕ್ಷದ ಟಿಕೆಟ್ ನಿರಾಕರಿಸಲ್ಪಟ್ಟ ಬಳಿಕ ಆಕ್ರೋಶಗೊಂಡ ಶಾ, ಸಾರ್ವಜನಿಕವಾಗಿ ಕೋಪ ಮತ್ತು ಹತಾಶೆ ವ್ಯಕ್ತಪಡಿಸುತ್ತಾ, ತಮ್ಮ ಕುರ್ತಾ ಹರಿದು, ರಸ್ತೆಯಲ್ಲಿ ಮಲಗಿ, ಪಕ್ಷದ ನಾಯಕನ ಮನೆಯ ಮುಂದೆ ಜೋರಾಗಿ ಅಳುತ್ತಾ ತಮ್ಮ ಭಾವುಕತೆ ವ್ಯಕ್ತಪಡಿಸಿದರು. ಈ ಬೆಳವಣಿಗೆಯಿಂದ ಕೆಲ ಹೊತ್ತು ಲಾಲೂ ಮನೆ ಮುಂದೆ ಜನಸಮೂಹವೇ ನೆರೆದಿತ್ತು.

ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಟಿಕೆಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಆರ್​ಜೆಡಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.ಈ ವಿಷಯ ಸದ್ಯ ರಾಜ್ಯಾದ್ಯಂತ ಚರ್ಚೆಯಲ್ಲಿದೆ. ಪಕ್ಷವು ನನ್ನಂತಹ ಪ್ರಾಮಾಣಿಕ ಮತ್ತು ಶ್ರಮಶೀಲ ಕಾರ್ಯಕರ್ತರನ್ನು ನಿರ್ಲಕ್ಷಿಸಿದೆ. ಈಗ ಅವರು ಹಣವಂತರಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಶಾ ಕಣ್ಣೀರು ಹಾಕಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net