

ಪಲ್ಲೆಕೆಲೆ: ಇಲ್ಲಿನ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದ್ದು, ಆತಿಥೇಯರಿಗೆ ಶಾಕ್ ನೀಡಿದೆ. ಈ ಮೂಲಕ ನೂತನ ಕೋಚ್ ಗೌತಮ್ ಗಂಭೀರ್, ಚುಟುಕು ಮಾದರಿಗೆ ಪೂರ್ಣಪ್ರಮಾಣದ ನಾಯಕನಾಗಿ ಅಧಿಕಾರ ವಹಿಸಿಕೊಂಡ ಸೂರ್ಯಕುಮಾರ್ ಯಾದವ್ಗೆ ಗೆಲುವಿನ ಆರಂಭ ಸಿಕ್ಕಿದ್ದು, ವಿನ್ನಿಂಗ್ ಸ್ಟ್ರೀಕ್ ಮುಂದುವರೆಸಲು ಈ ಜೋಡಿ ಸಜ್ಜಾಗಿದೆ.
ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಆಯ್ಕೆಗಾರರ ಗಮನ ಸೆಳೆದಿದ್ದ ಟೀಮ್ ಇಂಡಿಯಾದ ಯುವ ಆಟಗಾರ ರಿಯಾನ್ ಪರಾಗ್ ತಂಡ ಗೆದದ್ರೂ ಯಾಕೋ ಸಂತೃಪ್ತರಾದಂತೆ ಕಾಣುತ್ತಿಲ್ಲ. ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ರಿಯಾನ್ ಪರಾಗ್ ಈ ಬಗ್ಗೆ ಮಾತನಾಡಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
ನನ್ನ ಪ್ರದರ್ಶನ ಕಂಡು ನನಗೆ ನಿಜವಾಗಿಯೂ ನಿರಾಸೆಯಾಗಿದೆ. ಏಕೆಂದರೆ ನಾನು ಕೊನೆಯವರೆಗೂ ಬ್ಯಾಟಿಂಗ್ ಮಾಡಿದ್ದರೆ ತಂಡದ ಮೊತ್ತವು 160ರ ಗಡಿ ದಾಟುತ್ತಿತ್ತು. ಇದಾಗ್ಯೂ ಕಡಿಮೆ ಮೊತ್ತಗಳಿಸಿದರೂ ನಾನು ಉತ್ತಮ ಬೌಲಿಂಗ್ ಮಾಡಿದ್ದೆವು. ಬೌಲಿಂಗ್ನಲ್ಲಿ ನನ್ನ ಪ್ರದರ್ಶನ ಖುಷಿ ನೀಡಿದೆ. ನಾನು ನನ್ನ ಪ್ಲ್ಯಾನ್ಗಳನ್ನು ತುಂಬಾ ಸರಳವಾಗಿ ಇರಿಸಲು ಬಯಸುತ್ತೇನೆ. ಹೀಗಾಗಿಯೇ ನಾನು ಲೆಗ್-ಬ್ರೇಕ್ನಲ್ಲಿ ಕೆಲಸ ಮಾಡುತ್ತಿದ್ದೇನೆ.
ದೇಶೀಯ ಕ್ರಿಕೆಟ್ನಲ್ಲಿ ಲೆಗ್ ಬ್ರೇಕ್ ಎಸೆತಗಳನ್ನು ಪ್ರಯತ್ನಿಸಿದ್ದೆ. ಕೆಲವು ನೆಟ್ ಸೆಷನ್ಗಳನ್ನು ಅಭ್ಯಾಸ ಮಾಡಿದ್ದೇನೆ. ಇದೀಗ ನನ್ನ ಬೌಲಿಂಗ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ನಾಯಕ ಸೂರ್ಯಕುಮಾರ್ ಯಾದವ್ ಕೂಡ ಲೆಗ್ ಬ್ರೇಕ್ ಎಸೆಯುವಂತೆ ಸೂಚಿಸಿದ್ದರು. ಇದು ಸಹ ನನಗೆ ಖುಷಿ ನೀಡಿತು. ಈ ಬಗ್ಗೆ ಕೋಚ್ ಗೌತಮ್ ಸರ್ ಅವರೊಂದಿಗೂ ಮಾತುಕತೆ ನಡೆಸಿದ್ದೆ ಎಂದು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಟೀಮ್ ಇಂಡಿಯಾ ಯುವ ಆಟಗಾರ ರಿಯಾನ್ ಪರಾಗ್ ಹೇಳಿದ್ದಾರೆ.