ಮುಂಬೈ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಕಳೆದ ವರ್ಷಾಂತ್ಯದಲ್ಲಿ ಅವರ ನಟನೆಯ ಅನಿಮಲ್ ಚಿತ್ರವು ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯಿತಾದರೂ ರಣಬೀರ್ ನಟನೆಗೆ ಜನ ಫಿದಾ ಆಗಿದ್ದರು. ಪ್ರಸ್ತುತ ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿ ಇರುವ ರಣಬೀರ್ ತಮ್ಮ ಹಳೆಯು ದಿನಗಳಮನ್ನು ನೆನೆಸಿಕೊಂಡಿದ್ದಾರೆ.
2022ರಲ್ಲಿ ನಟಿ ಆಲಿಯಾ ಭಟ್ರೊಂದಿಗೆ ಸಪ್ತಪದಿ ತುಳಿದ ನಟ ರಣಬೀರ್ ಕಪೂರ್ ಮುದ್ದಾದ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಪತ್ನಿ ಆಲಿಯಾ ಜೊತೆ ಸುಖ ಸಂಸಾರ ನಡೆಸುತ್ತಿರುವ ರಣಬೀರ್ ಈ ಹಿಂದೆ ಹೀರೋಯಿನ್ಗಳ ಜೊತೆ ಡೇಟಿಂಗ್ ವಿಚಾರವಾಗಿ ಸಖತ್ ಸದ್ದು ಮಾಡಿದ್ದರು. ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ರೊಂದಿಗಿನ ಡೇಟಿಂಗ್ ವಿಚಾರವಾಗಿ ಬಿಟೌನ್ನಲ್ಲಿ ಗದ್ದಲ ಎಬ್ಬಿಸಿದ್ದ ರಣಬೀರ್ ನಟಿಯರು ಮಾತ್ರವಲ್ಲದೇ ಅನೇಕರ ಜೊತೆ ಡೇಟ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಸದಾ ವಿವಾದಗಳಿಂದಲೇ ಹೆಸರುವಾಸಿಯಾಗಿರುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಿರೂಪಕ ಕರಣ್ ಜೋಹರ್ ಅತಿಥಿಗಳಿಗೆ ಮುಜುಗರವಾಗುವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಅದೇ ರೀತಿ ರಣಬೀರ್ಗೂ ಪ್ರಶ್ನೆ ಕೇಳಿರುವ ಕರಣ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚಗೆ ಆಸ್ಪದ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ಚಲಿಸುವ ಕಾರಿನಲ್ಲಿ ಇಬ್ಬರು ಪುರುಷರೊಂದಿಗೆ ಮಹಿಳೆ ರೊಮ್ಯಾನ್ಸ್; ಆ್ಯಕ್ಸಿಡೆಂಟ್ ಆದ್ರು ನಿಲ್ಲಲಿಲ್ಲ ಇವ್ರ ಸರಸ-ಸಲ್ಲಾಪ
ಏಕಕಾಲದಲ್ಲಿ ಗರ್ಲ್ಫ್ರೆಂಡ್ಗಳನ್ನು ಸಂಭಾಳಿಸುವುದು ಹೇಗೆ ಎಂದು ಕರಣ್ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಣಬೀರ್ ತನ್ನ ಗೆಳತಿಯೊಬ್ಬಳ ನಂಬರ್ ಅನ್ನು ಬ್ಯಾಟರಿ ಲೋ ಎಂದು ಸೇವ್ ಮಾಡಿಕೊಂಡಿದ್ದರಂತೆ. ಹಾಗಾಗಿ ಇನ್ನೊಬ್ಬಳು ಗೆಳತಿಯೊಂದಿಗಿರುವಾಗ ಆ ನಂಬರ್ನಿಂದ ಕಾಲ್ ಬಂದರೆ ಜೊತೆಗಿರುವವಳು ಮೊಬೈಲ್ ಬ್ಯಾಟರಿ ಲೋ ಆಗಿದೆ ಎಂದು ತಿಳಿದುಕೊಳ್ಳುತ್ತಿದ್ದಳು. ಇದೇ ರೀತಿ ಅನೇಕರಿಗೆ ಈ ರೀತಿ ಮಾಡಿದ್ದಾಗಿ ರಣಬೀರ್ ಹೇಳಿಕೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಣಬೀರ್ ಕಪೂರ್ ಅವರ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಧವಿಧವಾದ ಕಮೆಂಟ್ಗಳು ಹರಿದು ಬರುತ್ತಿವೆ. ರಣಬೀರ್ ಮದುವೆಯಾಗಿರುವ ಆಲಿಯಾಳ ಬಗ್ಗೆ ಅನುಕಂಪವಿದೆ ಎಂದು ಒಬ್ಬರು ಹೇಳಿದರೆ, ರಣಬೀರ್ ಕಪೂರ್ ಒಬ್ಬ ರೋಗಗ್ರಸ್ತ ವ್ಯಕ್ತಿ ಮತ್ತು ಅವನೊಬ್ಬ ಚೀಪ್ ಗಯ್ ಎಂದು ಕಮೆಂಟ್ ಮಾಡಿ ಕಿಡಿಕಾರಿದ್ದಾರೆ.