ಟ್ರೆಂಡ್ ಅನುಸರಿಸಿ ಪೋಸ್ಟ್​ ಹಾಕೋದಲ್ಲ… ಟ್ರೋಲ್​ಗೆ ಹೆದರಿ ಪೋಸ್ಟ್​ ಡಿಲೀಟ್​ ಮಾಡಿದ ರೋಹಿತ್​ ಪತ್ನಿ ರಿತಿಕಾ!

Ritika Sajdeh 1

ನವದೆಹಲಿ: ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಅವರ ಪತ್ನಿ ರಿತಿಕಾ ಸಾಜ್ದೇಹ್ ಅವರು ತೀವ್ರ ಟ್ರೋಲ್ ಮತ್ತು ಟೀಕೆಗಳಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿತಿಕಾ ಮಾಡಿದ ಪೋಸ್ಟ್ ಭಾರಿ ವಿವಾದಕ್ಕೆ ಕಾರಣವಾಗಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆದರಿದ ರಿತಿಕಾ, ತಮ್ಮ ಪೋಸ್ಟ್​ ಅನ್ನು ತಕ್ಷಣವೇ ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ರೋಹಿತ್ ಪತ್ನಿ ಮಾಡಿದ ಪೋಸ್ಟ್ ಏನು? ಇಷ್ಟು ದೊಡ್ಡ ವಿವಾದಕ್ಕೆ ಕಾರಣಗಳೇನು? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಪ್ಯಾಲೆಸ್ತೀನ್​ನ ರಫಾ ನಗರ ಮೇಲೆ ಇತ್ತೀಚೆಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 45ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಸೆಲೆಬ್ರಿಟಿಗಳು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ಯಾಲೆಸ್ತೀನ್ ನಾಗರಿಕರ ಬೆಂಬಲಕ್ಕೆ ನಿಂತಿದ್ದು, ಆಲ್ ಐಸ್ ಆನ್ ರಫಾ ಎಂಬ ಅಭಿಯಾನ ಶುರು ಮಾಡಿದ್ದಾರೆ. ಈ ಅಭಿಯಾನಕ್ಕೆ ಸಂಬಂಧಿಸಿದ ಪೋಸ್ಟ್​ ಅನ್ನು ರೋಹಿತ್​ ಪತ್ನಿ ರಿತಿಕಾ ಸಹ ಶೇರ್​ ಮಾಡಿಕೊಂಡಿದ್ದರು. ಇದೇ ಪೋಸ್ಟ್​ ರಿತಿಕಾರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ರಿತಿಕಾ ಶೇರ್ ಮಾಡಿರುವ ಪೋಸ್ಟ್​ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆ ದೇಶದಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ಪೋಸ್ಟ್ ಮಾಡಿದ್ದೀರಿ. ಆದರೆ, ಕಾಶ್ಮೀರಿ ಪಂಡಿತರು, ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ನೀವು ಎಂದಾದರೂ ಮಾತನಾಡಿದ್ದೀರಾ? ನಮ್ಮ ದೇಶದಲ್ಲೇ ಹಲವು ಸಮಸ್ಯೆಗಳಿವೆ ಅವುಗಳಿಗೆ ಎಂದಾದರೂ ಸ್ಪಂದಿಸಿದ್ದೀರಾ? ಇಷ್ಟು ದಿನ ಟ್ರೆಂಡ್ ಅನುಸರಿಸಿ ಇಂತಹ ಪೋಸ್ಟ್ ಗಳನ್ನು ಹಾಕುವುದು ಸರಿಯಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೇ ರಿತಿಕಾ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ರಫಾದಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ಸೇನೆ ನಡೆಸಿದ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 45 ಮಂದಿ ಸಾವಿಗೀಡಾಗಿದ್ದಾರೆ. ಈ ಘಟನೆ ವಿಶ್ವವನ್ನೇ ಬೆಚ್ಚಿಬೀಳಿಸಿದೆ. (ಏಜೆನ್ಸೀಸ್​)

ಪತ್ನಿಯ ಜೀವಕ್ಕೆ ಅಪಾಯ ತಂದಿಟ್ಟ ಅಂಬಟಿ ರಾಯುಡು ವರ್ತನೆ! ಇನ್ನಾದ್ರೂ ಸುಮ್ಮನಿರಲು ಸಲಹೆ

ಹಾರ್ದಿಕ್​-ನತಾಶಾ ಡಿವೋರ್ಸ್​ ವದಂತಿಗೆ ಸ್ಪೋಟಕ ಟ್ವಿಸ್ಟ್​: ಈ ಜೋಡಿ ಬೇರೆಯಾಗೋದು ಬಹುತೇಕ ಖಚಿತ

ಅಬ್ಬಬ್ಬಾ..! ಎಷ್ಟು ಉದ್ದದ ಮೊಸಳೆ: ಆಶ್ವರ್ಯದಿಂದ ಫೋಟೋ ಕ್ಲಿಕ್ಕಿಸಿದ ಜನರು

Share This Article

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…

ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips

ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…