ಭಾರತ-ಡೆನ್ಮಾರ್ಕ್​ ವರ್ಚ್ಯುವಲ್​ ಸಭೆ; ಚೀನಾಕ್ಕೆ ಮಾತಿನ ಮೂಲಕವೇ ತಿವಿದ ಪ್ರಧಾನಿ ಮೋದಿ;

Prime Ministers
Published on

ನವದೆಹಲಿ: ಇಂದು ನಡೆದ ಭಾರತ-ಡೆನ್ಮಾರ್ಕ್​ ವರ್ಚ್ಯುವಲ್​ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೀನಾ ವಿರುದ್ಧ ತುಸು ಕಟುವಾಗಿ ಮಾತನಾಡಿದರು. ಆ ದೇಶದ ಹೆಸರು ಹೇಳದೆಯೇ ಪರೋಕ್ಷವಾಗಿಯೇ ಚುಚ್ಚುಮಾತಾಡಿದರು.

ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಪೂರೈಕೆ ಸರಪಳಿಯನ್ನು ಒಂದೇ ಮೂಲದ ಮೇಲೆ ಅವಲಂಬಿಸುವುದು ಅಪಾಯ ಎಂಬುದನ್ನು ಕೊವಿಡ್​-19 ತೋರಿಸಿಕೊಟ್ಟಿದೆ ಎಂದು ಹೇಳಿದರು. ಇದನ್ನೂ ಓದಿ: ನ್ಯಾಯ​ ಸಿಕ್ಕಿಲ್ಲ ಅಂತ ನಟ ಸುಶಾಂತ್​ ಗೆಳೆಯರ ಗಾಂಧಿಗಿರಿ, ಅ. 2ರಂದೇ ಹಿಡಿಯಲಿದ್ದಾರೆ ಆ ದಾರಿ..

ಪೂರೈಕೆ ಸರಪಳಿಯಲ್ಲಿ ವೈವಿಧ್ಯತೆ ಮತ್ತು ಸ್ಥಿತಿಸ್ಥಾಪಕತ್ವ ಸ್ಥಾಪನೆಗಾಗಿ ನಾವು ಜಪಾನ್​ ಮತ್ತು ಆಸ್ಟ್ರೇಲಿಯಾ ದೇಶಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಸಮಾನ ಮನಸ್ಕ ದೇಶಗಳು ನಮ್ಮೊಂದಿಗೆ ಸೇರಬಹುದು ಎಂದು ಮೋದಿ ತಿಳಿಸಿದರು.

ಕೊವಿಡ್​-19 ಬಿಕ್ಕಟ್ಟಿನ ನಡುವೆ ಭಾರತ-ಚೀನಾ ಗಡಿ ಸಂಘರ್ಷವೂ ಶುರುವಾಗಿದೆ. ಅದರೊಂದಿಗೆ ಚೀನಾದ ಅನೇಕ ಆ್ಯಪ್​ಗಳನ್ನು ಭಾರತ ಬ್ಯಾನ್​ ಮಾಡಿದೆ. ಪೂರ್ವ ಲಡಾಖ್​​ನ ವಾಸ್ತವ ನಿಯಂತ್ರಣಾ ಗಡಿಯಲ್ಲಂತೂ ಯುದ್ಧ ಸನ್ನಿವೇಶವೇ ಇದೆ. ಭಾರತ ಆತ್ಮ ನಿರ್ಭರ ಅಭಿಯಾನದ ಮೂಲಕ ಇತರ ದೇಶಗಳ ಮೇಲಿನ ಅದರಲ್ಲೂ ಚೀನಾದ ಮೇಲಿನ ಅವಲಂಬನೆಯನ್ನು ಹಂತಹಂತವಾಗಿ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ. ಹೀಗಿರುವಾಗ ಮೋದಿಯವರ ಈ ಮಾತು ತುಂಬ ಮಹತ್ವ ಪಡೆದಿದೆ. ಚೀನಾವನ್ನು ದೂರವೇ ಇಡುವ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ತೋರುತ್ತಿದೆ. ಇದನ್ನೂ ಓದಿ:ಕರೊನಾದ ನಡುವೆಯೇ ಮೆದುಳು ತಿನ್ನುವ ಭೀಕರ ಅಮೀಬಾ ಪತ್ತೆ- ಇಬ್ಬರು ಮಕ್ಕಳ ಸಾವು

ಭಾರತ-ಡೆನ್ಮಾರ್ಕ್​ ನಡುವೆ ಇನ್ನೊಮ್ಮೆ ದ್ವಿಪಕ್ಷೀಯ ವರ್ಚ್ಯುವಲ್​ ಶೃಂಗಸಭೆ ನಡೆಯಬೇಕು ಎಂಬ ಮೆಟ್ಟೆ ಫ್ರೆಡೆರಿಕ್ಸೆನ್ ಮಾತಿಗೆ ಒಪ್ಪಿಗೆ ಸೂಚಿಸಿದ ಮೋದಿ, ಭಾರತ ನಿಯಮಾಧಾರಿತ, ಪಾರದರ್ಶಕ, ಮಾನವೀಯ ಮತ್ತು ಪ್ರಜಾಪ್ರಭುತ್ವ ಮೌಲ್ಯವ್ಯವಸ್ಥೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ. ಭಾರತದಂತಹ ಸಮಾನ ಮನಸ್ಕ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವುದು ಎಷ್ಟು ಮುಖ್ಯ ಎಂಬುದು ಕಳೆದ ಐದು ತಿಂಗಳಲ್ಲಿ ಸ್ಪಷ್ಟವಾಗಿ ಗೊತ್ತಾಗಿದೆ ಎಂದೂ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net