

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಗ ಸಮಾನಮನಸ್ಕರೆಲ್ಲ ಒಂದಾಗಬೇಕು ಎಂಬ ಕರೆಯನ್ನು ನೀಡಿದ್ದಾರೆ. ಜತೆಯಾಗಿ ಹೋರಾಡುವುದು ಅಗತ್ಯ ಎಂಬುದಾಗಿಯೂ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಭಾರತ-ಡೆನ್ಮಾರ್ಕ್ ನಡುವೆ ನಡೆದ ವರ್ಚುವಲ್ ದ್ವಿಪಕ್ಷೀಯ ಸಮ್ಮೇಳನದಲ್ಲಿ ಮಾತನಾಡಿರುವ ಮೋದಿ, ಮೊದಲಿಗೆ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಅವರಿಗೆ ವೈವಾಹಿಕ ಜೀವನದ ಶುಭಾಶಯಗಳನ್ನು ತಿಳಿಸಿದ್ದಾರೆ. ನವವಿವಾಹಿತೆ ಆಗಿರುವ ಅವರಿಗೆ ಕೋವಿಡ್ ಸಂಕಷ್ಟ ಮುಗಿದ ಬಳಿಕ ಭಾರತಕ್ಕೆ ಆಗಮಿಸುವಂತೆ ಆಹ್ವಾನವನ್ನೂ ನೀಡಿದ್ದಾರೆ.
ಬಳಿಕ ಕೋವಿಡ್ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಇದುವರೆಗೆ ಸಮಾನಮನಸ್ಕ ರಾಷ್ಟ್ರಗಳೆಲ್ಲ ಒಂದಾಗಿ ಕೋವಿಡ್ ವಿರುದ್ಧ ನಡೆಸಿದ ಹೋರಾಟವನ್ನು ಸ್ಮರಿಸಿಕೊಂಡರು. ಮುಂದೆ ಲಸಿಕೆ ಕಂಡುಹಿಡಿಯುವಲ್ಲಿ ಕೂಡ ಸಮಾನಮನಸ್ಕ ದೇಶಗಳು ಒಂದಾದರೆ ಸಹಾಯವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)