ರಿಷಿ ಸುನಕ್​ ಫಿಟ್​ನೆಸ್ ರಹಸ್ಯ ಬಯಲು; 42 ವರ್ಷದ ಪ್ರಧಾನಿ ದಿನಚರಿ ಹೀಗಿದೆ...

Rishi Sunak
Published on

ನವದೆಹಲಿ: ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆದದ್ದೇ ದೊಡ್ಡ ಸುದ್ದಿಯಾಗಿತ್ತು. ನಂತರ ಬ್ರಿಟನ್​ ದೊರೆಗಿಂತಲೂ ಸುನಕ್​ ಶ್ರೀಮಂತ ವ್ಯಕ್ತಿ ಎಂಬ ಸುದ್ದಿ ಹೊರಬಿದ್ದು ಎಲ್ಲರ ಹುಬ್ಬೇರಿಸಿತ್ತು. ಈಗ ಸುನಕ್​ರ ದಿನಚರಿ, ಫಿಟ್​ನೆಸ್​ ರಹಸ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.

2021ರಲ್ಲಿ ಸುನಕ್​ The Twenty Minute VC ಎಂಬ ಪೋಡ್​ಕಾಸ್ಟ್​ನಲ್ಲಿ ತಮ್ಮ ಬೆಳಗ್ಗಿನ ದಿನಚರಿ, ಡಯಟ್​ ಇತ್ಯಾದಿಯನ್ನು ಹ್ಯಾರಿ ಸ್ಟೆಬ್ಬಿಂಗ್ಸ್​ ಎನ್ನುವವರ ಜೊತೆ ಹಂಚಿಕೊಂಡಿದ್ದರು.

'ನಾನು ಬೆಳಗ್ಗೆ 6-7 ಗಂಟೆಯ ಒಳಗೆ ಏಳುತ್ತೇನೆ. ಇದು ಯಾವ ರೀತಿಯ ವ್ಯಾಯಾಮ ಮಾಡುತ್ತೇನೆ ಎನ್ನುವುದರ ಮೇಲೆ ನಿರ್ಧಾರ ಆಗುತ್ತದೆ. ಕೆಲವೊಂದು ದಿನ ಬೆಳಗ್ಗೆ ತಿಂಡಿ ತಿನ್ನುತ್ತೇನೆ. ಇನ್ನು ಕೆಲವು ದಿನ ತಿನ್ನುವುದಿಲ್ಲ. ನಾನು ಬಹುತೇಕ ಸಮಯ ಮಧ್ಯಂತರ ಉಪವಾಸ (intermittent fasting) ಮಾಡುತ್ತೇನೆ. ಬೆಳಗ್ಗೆ ಗ್ರೀಕ್​ ಯೋಗರ್ಟ್ ಮತ್ತು ಬ್ಲೂಬೆರ್ರಿ ಹಣ್ಣ ಸೇವಿಸುತ್ತೇನೆ. ವೀಕೆಂಡ್​ನಲ್ಲಿ ವೇಫಲ್​ ಅಥವಾ ಪ್ಯಾನ್​ಕೇಕ್​ ತಿನ್ನುತ್ತೇನೆ' ಎಂದು ಸುನಕ್​ ಪೋಡ್​ಕಾಸ್ಟ್​ನಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net