More

    ಅಪ್ಪ ಪ್ರೀತಿಯಿಂದ ಕೊಡಿಸಿದ್ದ ಬೈಕ್​ನಲ್ಲಿ ಲವರ್​ ಜತೆ ಸುತ್ತಾಡಿದ ಮಗ; ಸಿಟ್ಟಿನಿಂದ ಅಪ್ಪ ಮಾಡಿದ್ದೇನು ಗೊತ್ತಾ?

    ಚೆನ್ನೈ: ಅಪ್ಪ, ಮಗನಿಗೆ ಪ್ರೀತಿಯಿಂದ ಬೈಕ್​ ಕೊಡಿಸಿದ್ದ. ವಯಸ್ಸಿಗೆ ಬಂದಿರುವ ಹುಡುಗ ಓಡಾಡಿಕೊಂಡು ಚೆನ್ನಾಗಿರಲಿ ಎಂದು ಆತ ಬಯಸಿದ್ದ. ಆದರೆ ಮಗ, ಬೈಕ್​ನಲ್ಲಿ ಒಬ್ಬನೇ ಓಡಾಡದೆ ತನ್ನ ಪ್ರೇಯಸಿಯನ್ನೂ ಕೂರಿಸಿಕೊಂಡು ಓಡಾಡಲಾರಂಭಿಸಿದ್ದ. ಇದರಿಂದ ಸಿಟ್ಟಿಗೆದ್ದ ಅಪ್ಪ ಮಾಡಿದ್ದು ಮಾತ್ರ ಮಾಡಬಾರದ ಕೆಲಸ.

    ಇದನ್ನೂ ಓದಿ: ರಸ್ತೆ ಅಭಿವೃದ್ಧಿಯಲ್ಲಿ ವಿಫಲ ಮತ್ತು ತಾರತಮ್ಯಕ್ಕೆ ಆಕ್ರೋಶ; ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಅರಿಗೇಪಲ್ಲಿ ಗ್ರಾಮಸ್ಥರು

    ಕರ್ಣನ್​ (52) ಆಟೋ ರಿಕ್ಷಾ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಪ್ರೀತಿಯಿಂದ ಸಾಕಿದ್ದ ಮಗ ಅರುಣ್​, ಬೇರೊಬ್ಬ ಹುಡುಗಿಯನ್ನು ಪ್ರೀತಿಸಿದ್ದಾನೆ. ಮನೆ ಬಿಟ್ಟ ಅರುಣ್​ ಪ್ರೀತಿಸಿದ ಹುಡುಗಿಯೊಂದಿಗೆ ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿ ಇರಲಾರಂಭಿಸಿದ್ದಾನೆ. ಆಗಾಗ ಅರುಣ್​ ತನ್ನ ಹುಡುಗಿಯೊಂದಿಗೆ ಬೈಕ್​ನಲ್ಲಿ ಓಡಾಡುತ್ತಿದ್ದದ್ದನ್ನು ಕರ್ಣನ್​ ನೋಡಿದ್ದಾನೆ. ಈ ಪ್ರೀತಿ ಬೇಡಪ್ಪಾ, ಅವಳನ್ನು ಬಿಟ್ಟು ಬಿಡು ಎಂದು ಬುದ್ಧಿ ಹೇಳಿದ್ದಾನೆ. ಆದರೆ ಮಗ ಆ ಮಾತನ್ನು ಕೇಳಿಲ್ಲ.

    ಇದನ್ನೂ ಓದಿ: ನೀತಿ ಸಂಹಿತಿ ಉಲ್ಲಂಘನೆಯತ್ತ ಇರಲಿ ಎಚ್ಚರ; ಚುನಾವಣಾ ಸಿಬ್ಬಂದಿಗೆ ಜಿಲ್ಲಾಧಿಕಾರಿ ಲತಾ ತಾಕೀತು

    ನಾನು ಕೊಡಿಸಿದ ಬೈಕಿನಲ್ಲಿ ನನ್ನ ಅನುಮತಿ ಇಲ್ಲದೆಯೇ ಹುಡುಗಿಯನ್ನು ಕೂರಿಸಿಕೊಂಡು ಓಡಾಡುತ್ತಿದ್ದಾನೆ ಎನ್ನುವ ಸಿಟ್ಟಿನಲ್ಲಿ ಕರ್ಣನ್​ ಒಂದು ನಿರ್ಧಾರ ಮಾಡಿದ್ದಾನೆ. ಅಕ್ಟೋಬರ್​ 14ರ ರಾತ್ರಿ ಮಗನಿದ್ದ ಮನೆಯ ಬಳಿ ಬಂದು ಅವನ ಬೈಕಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ಇದು ದ್ವೇಷದಿಂದ ಆಗಿರುವ ಘಟನೆ ಎಂದು ತಿಳಿಯದಿರಲಿ ಎಂದು ಆತನ ಬೈಕ್​ನ ಅಕ್ಕ ಪಕ್ಕ ಇದ್ದ ಏಳು ಬೈಕ್​ಗಳಿಗೂ ಬೆಂಕಿ ಹಚ್ಚಿದ್ದಾನೆ. ಒಂದೇ ಬಾರಿ ಎಲ್ಲ ಬೈಕ್​ಗೆ ಬೆಂಕ ಹತ್ತಿರುವುದು ನೋಡಿ ಎಲ್ಲರೂ ಇದೊಂದು ಆಕಸ್ಮಿಕ ಘಟನೆ ಎಂದು ಸುಮ್ಮನಾಗಿದ್ದಾರೆ. ಆದರೆ ಇತ್ತೀಚೆಗೆ ಇನ್ನಷ್ಟು ಸಿಟ್ಟು ಹೆಚ್ಚಿಸಿಕೊಂಡ ಕರ್ಣನ್​, ಮಗನ ಜತೆ ಇದ್ದ ಯುವತಿಗೆ ಕರೆ ಮಾಡಿ ಬೆದರಿಕೆ ಹಾಕಲಾರಂಭಿಸಿದ್ದಾನೆ. ಈ ವಿಚಾರವಾಗಿ ಯುವತಿ ಪೊಲೀಸ್​ ದೂರು ದಾಖಲಿಸಿದ್ದು, ಕರ್ಣನ್​ನನ್ನು ಬಂಧಿಸಿ ವಿಚಾರಣೆ ನಡೆಸುವಾಗ ನಡೆದ ಎಲ್ಲ ವಿಚಾರಗಳನ್ನು ಆತ ಬಾಯಿ ಬಿಟ್ಟಿದ್ದಾನೆ. (ಏಜೆನ್ಸೀಸ್​)

    ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts