ಉಳ್ಳಾಲ: ಆಟೋರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ಕಲ್ಮಿಂಜ ಶಾಲೆಯ ಬಳಿ ಶುಕ್ರವಾರ ನಡೆದಿದೆ.

ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ
ತೌಡುಗೋಳಿ ಆಟೋ ಪಾರ್ಕ್‌ನ ಮುರಳೀಧರ ಶೆಟ್ಟಿ ತಿಮರೋಡಿ ಅವರ ಆಟೋರಿಕ್ಷಾ ಕಲ್ಮಿಂಜ ಶಾಲೆ ಬಳಿಯ ಏರು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆಟೋ ಚಾಲಕ ಮುರಲೀಧರ ಶೆಟ್ಟಿ ತಿಮರೋಡಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಪ್ರಯಾಣಿಕರಿಬ್ಬರಿಗೆ ಗಂಭೀರ ಗಾಯ, ಮಗು ಪಾರು
ರಿಕ್ಷಾ ಪ್ರಯಾಣಿಕರಾದ ಆಳ್ವರಬೆಟ್ಟು ಮೋಹನದಾಸ ಅವರ ಪತ್ನಿ ಗೀತಾ (40) ಹಾಗೂ ಪಕ್ಕದ ಮನೆಯ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗಿದ್ದ ಮಗು ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.