ಕಾಸರಗೋಡು: ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರಲ್ಲಿ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು ಕಲಿಯುತ್ತಿದ್ದ 16ರ ಹರೆಯದ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಬಗ್ಗೆ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕಿ, ಬೋವಿಕ್ಕಾನದ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿರುವ ತನ್ನ ಪಾಲಕರಾದ ಮಾವ ಮತ್ತು ಅತ್ತೆ ಮನೆಗೆ ಆಗಾಗ ತೆರಳುತ್ತಿದ್ದಳು. ಬುಧವಾರ ಸಂಜೆಯೂ ಆಗಮಿಸಿದ್ದ ಈಕೆ ಅಲ್ಲಿ ರಾತ್ರಿ ಸ್ನಾನಗೃಹಕ್ಕೆ ತೆರಳಿದ್ದು, ಬಹಳ ಹೊತ್ತಿನ ವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ನೋಡಿದಾಗ ನಾಪತ್ತೆಯಾಗಿದ್ದಳು. ಈಕೆಯ ಮೊಬೈಲ್ ಮನೆಯೊಳಗೆ ಲಭಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೋವಿಕ್ಕಾನದಲ್ಲಿ ವಿದ್ಯಾರ್ಥಿನಿ ನಾಪತ್ತೆ

You Might Also Like
ರೊಟ್ಟಿ, ಚಪಾತಿಗೆ ತುಪ್ಪ ಹಚ್ಚಿ ತಿನ್ನುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರಬಹುದು ಎಚ್ಚರ! Health Tips
Health Tips: ಚಪಾತಿ ಎಲ್ಲರಿಗೂ ಅಚ್ಚುಮೆಚ್ಚಿನ ಆಹಾರ. ಪಲ್ಯ, ಸಾಗು, ಜಾಮ್, ತುಪ್ಪ ಹೀಗೆ ಎಲ್ಲದರ…
ಯಾರಾದರೂ ನಿಮ್ಮ ಮುಂದೆ ಹಠಾತ್ ಕುಸಿದುಬಿದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Suddenly Collapsed
Suddenly Collapsed : ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರು ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು…