More

    ಸುಶಾಂತ್​ ಕುಟುಂಬದವರ ಮೇಲೆ ಆಕ್ಷನ್​ ತಗೋತಾರಂತೆ ರಿಯಾ!

    ರಿಯಾ ಚಕ್ರವರ್ತಿ ಭಯಂಕರ ಸಿಟ್ಟಾಗಿದ್ದಾರೆ. ಒಂದು ಕಡೆ ಸಿಬಿಐನವರು ಪ್ರತೀದಿನ ಕೂರಿಸಿಕೊಂಡು ಎಂಟು-ಹತ್ತು ಗಂಟೆ ಗ್ರಿಲ್​ ಮಾಡಿದರೆ ಯಾರಿಗೆ ತಾನೇ ಸಿಟ್ಟು ಬರುವುದಿಲ್ಲ ಹೇಳಿ. ಆದರೆ, ರಿಯಾಗೆ ಸಿಟ್ಟಿರುವುದು ಸಿಬಿಐ ಮೇಲಲ್ಲ, ಸುಶಾಮತ್​ ಅವರ ಕುಟುಂದವರ ಮೇಲೆ.

    ಇದನ್ನೂ ಓದಿ: Photos: ಬರ್ತ್​ಡೇ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಅವಳಿ ಸಹೋದರಿಯರು…

    ಸುಶಾಂತ್​ ಕುಟುಂಬದವರು ತಮ್ಮ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರಿಯಾ ಬೇಸರಗೊಂಡಿದ್ದಾರಂತೆ. ಅಷ್ಟೇ ಅಲ್ಲ, ಸುಶಾಂತ್​ ಕುಟುಂಬದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅವರು ನಿರ್ಧರಿಸಿದ್ದಾರೆ ಎಂದು ಅವರ ಲಾಯರ್ ಹೇಳಿಕೊಂಡಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ರಿಯಾ ಪರ ವಕೀಲ ಸತೀಶ್​ ಮನಶಿಂಧೆ, ‘ಸುಶಾಂತ್​ಗೆ ಡಿಪ್ರೆಶನ್​ ಇದ್ದ ವಿಷಯ ಗೊತ್ತೇ ಇರಲಿಲ್ಲ ಎಂದು ಸುಶಾಂತ್​ ಕುಟುಂಬದವರು ಹೇಳಿಕೊಂಡು ಬಂದಿದ್ದಾರೆ. ಆದರೆ, ಸುಶಾಂತ್​ ಸಹೋದರಿಯರ ಚಾಟ್​ ಮಾಡುವಾಗ ಪ್ರಿಸ್ಕ್ರಿಪ್ಶನ್​ ಹಂಚಿಕೊಂಡಿದ್ದು, ಅವರಿಗೆ ಸುಶಾಂತ್​ ಡಿಪ್ರೆಶನ್​ ಬಗ್ಗೆ ಗೊತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ’ ಎಂದು ಹೇಳಿಕೊಂಡಿದ್ದಾರೆ.

    ‘ಸುಶಾಂತ್​ ಸಹೋದರಿಯರು ಪ್ರಿಸ್ಕ್ರಿಪ್ಶನ್​ ಹಂಚಿಕೊಂಡಿರುವುದಷ್ಟೇ ಅಲ್ಲ, ಈ ವಿಷಯವಾಗಿ ನ್ಯಾಯಾಲಯಕ್ಕೆ ಮತ್ತು ಇಡಿಗೆ ಸುಳ್ಳು ಹೇಳಿದ್ದಾರೆ. ಹೀಗೆ ಸತತವಾಗಿ ಸುಳ್ಳು ಹೇಳುವುದರ ಜತೆಗೆ, ಪ್ರಕರಣವನ್ನು ದಿಕ್ಕುತಪ್ಪಿಸುತ್ತಿರುವ ಕುರಿತು ಸುಶಾಂತ್​ ಕುಟುಂಬದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಚಿಂತನೆ ನಡೆಸಲಾಗಿದೆ’ ಎಂದು ಸತೀಶ್​ ಮನಶಿಂಧೆ ಹೇಳಿದ್ದಾರೆ.

    ಇದನ್ನೂ ಓದಿ: 1 ಪರ್ಸೆಂಟ್​ ಜನರಿಗೆ ಮಾತ್ರ ಅಂಥದ್ದೊಂದು ಪ್ರತಿಭೆ ಇದೆಯಂತೆ …

    ಈ ಮಧ್ಯೆ ಸುಶಾಂತ್ ಆತ್ಮಹತ್ಯೆ ವಿಚಾರವಾಗಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದ ಶೌವಿಕ್​ ಚಕ್ರವರ್ತಿಯನ್ನು ವಿಚಾರಣೆಗೊಳಪಡಿಸಿರುವ ಸಿಬಿಐ, ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಸುದೀಪ್​ ವಿರುದ್ಧ ಪರೋಕ್ಷವಾಗಿ ಟಾಂಗ್​ ಕೊಟ್ರಾ ಚೇತನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts