ರಿಯಾಳಿಂದ 2 ಐಷಾರಾಮಿ ಫ್ಲ್ಯಾಟ್ಸ್​ ಖರೀದಿ; ವಿಚಾರಣೆಗೆ ಬಂದಿದ್ದು ಯಾರ ಕಾರಿನಲ್ಲಿ?; ಇ.ಡಿಯಿಂದ ಬಯಲಾಗಲಿದೆ ಸತ್ಯ

rhea chakraborty
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದಲ್ಲಿ ಗೆಳತಿ ರಿಯಾ ಚಕ್ರವರ್ತಿಗೆ ಸಿಬಿಐ ಜತೆಗೆ ಜಾರಿ ನಿರ್ದೇಶನಾಲಯ (ಎನ್​ಫೋರ್ಸ್​ಮೆಂಟ್​ ಡೈರೆಕ್ಟರೇಟ್​- ಇ.ಡಿ. ) ಉರುಳು ಕೂಡ ಸುತ್ತಿಕೊಂಡಿದೆ.

ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿ ಸಲ್ಲಿಸಿದ್ದ ಮನವಿಗೆ ಪುರಸ್ಕಾರ ದೊರೆಯದ ಕಾರಣ ರಿಯಾ ಶುಕ್ರವಾರ ಇ.ಡಿ. ಕಚೇರಿಗೆ ಹಾಜರಾದರು. ಆಗ ಅವರು ಆಗಮಿಸಿದ್ದು, ಯಾರ ಕಾರಿನಲ್ಲಿ ಎಂಬುದು ಕುತೂಹಲ ಕೆರಳಿಸಿತ್ತು.

ತನಿಖೆ ಬಳಿಕ ಗೊತ್ತಾಗಿದ್ದೇನೆಂದರೆ, ಹೋಟೆಲ್​ ಉದ್ಯಮಿ ಸುವೇದ್​ ಎಂಬುವರಿಗೆ ಫೋರ್ಡ್​ ಎಂಡಿವರ್​ ಕಾರಾಗಿತ್ತು. ಈತ ಸುಶಾಂತ್​ ಜತೆಯಲ್ಲಿ ಚಿತ್ರವೊಂದರಲ್ಲಿ ನಟಿಸಿದ್ದ. ಬಾಲಿವುಡ್​ನ ಹಲವು ಕಲಾವಿದರೊಂದಿಗೆ ಗೆಳೆತನ ಹೊಂದಿದ್ದಾನೆ.

ಇ.ಡಿ ವಿಚಾರಣೆಯಲ್ಲಿ ಮುಖ್ಯವಾಗಿ ರಿಯಾ ಚಕ್ರವರ್ತಿ ಮುಂಬೈನಲ್ಲಿ ಖರೀದಿಸಿದ ಎರಡು ಐಷಾರಾಮಿ ಫ್ಲ್ಯಾಟ್​ಗಳ ಬಗ್ಗೆ ಮಾಹಿತ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ. ಈ ಪೈಕಿ ಒಂದು ಫ್ಲ್ಯಾಟ್​ ಮುಂಬೈನ ಖಾರ್​ ಪ್ರದೇಶದಲ್ಲಿದೆ ಎಂದು ಹೇಳಲಾಗಿದೆ. ಫ್ಲ್ಯಾಟ್​ ಖರೀದಿಸಲು ಈಕೆ ಸುಶಾಂತ್​ನಿಮದ ಹಣ ಪಡೆದಿದ್ದಳೇ ಎಂಬುದು ಗೊತ್ತಾಗಬೇಕಿದೆ.

ಇದಲ್ಲದೇ. ತನ್ನ ಬ್ಯಾಂಕ್​ ಖಾತೆ ಹಾಗೂ ಹಣಕಾಸಿನ ವಹಿವಾಟಿನ ಬಗ್ಗೆಯೂ ಕೂಡ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಬೇಕಿದೆ. ಸುಶಾಂತ್​ ಸಿಂಗ್​ಗೆ ಸೇರಿದ 15 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾಳೆ ಎಂದು ಸುಶಾಂತ್​ ತಂದೆ ಕೆ.ಕೆ. ಸಿಂಗ್​ ಆರೋಪ ಮಾಡಿ ರಿಯಾ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಕಾರಣಕ್ಕೆ ಇಡಿ ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net