More

    RGV ಜತೆ ನೈಟ್​ ಪಾರ್ಟಿಯಲ್ಲಿ ರಶ್ಮಿಕಾ ಹಾಟ್​ ಅವತಾರ!? ಗೊಂದಲಕ್ಕೀಡಾದ ನೆಟ್ಟಿಗರು

    ಹೈದರಾಬಾದ್​: ಸ್ಟಾರ್​ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (ಆರ್​ಜಿವಿ) ಅವರ ವ್ಯೂಹಂ ಸಿನಿಮಾ ಫೆ.23ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಆರ್​ಜಿವಿ ಸಖತ್​ ಖುಷಿಯಲ್ಲಿದ್ದಾರೆ. ಪಾರ್ಟಿ ಪ್ರಿಯರಾಗಿರುವ ಆರ್​ಜಿವಿ ಸಿನಿಮಾ ಬಿಡುಗಡೆಗೆ ಇದ್ದ ಅಡೆತಡೆ ನಿವಾರಣೆಯಾದ ಹಿನ್ನೆಲೆಯಲ್ಲಿ ಎಂಜಾಯ್​ ಮಾಡುತ್ತಿದ್ದಾರೆ.

    ವ್ಯೂಹಂ ಸಿನಿಮಾ, ಆಂಧ್ರ ಪ್ರದೇಶ ಸಿಎಂ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಜೀವನದ ಕೆಲವು ವಿಷಯಾಧಾರಿತ ಚಿತ್ರವಾಗಿದೆ. ಈಗಾಗಲೇ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು ಭಾರೀ ಕುತೂಹಲ ಮೂಡಿಸಿದೆ. ಇದೊಂದು ಸಂಪೂರ್ಣ ರಾಜಕೀಯ ಚಿತ್ರ ಎಂಬುದು ಟ್ರೈಲರ್​ನಿಂದಲೇ ಗೊತ್ತಾಗುತ್ತದೆ. ಈ ಸಿನಿಮಾವನ್ನು ದಾಸರಿ ಕಿರಣ್​ ಕುಮಾರ್​ ಎಂಬುವರು ರಾಮಧೂತ ಕ್ರಿಯೆಷನ್ಸ್​ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ರಖ್ಯಾತ ನಟ ಅಜ್ಮಲ್​, ಜಗನ್​ ಮೋಹನ್​ ಪಾತ್ರ ಮಾಡಿದ್ದಾರೆ. ಮಾನಸ ರಾಧಾಕೃಷ್ಣರ್​ ಅವರು ವೈಎಸ್​ ಭಾರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಕಲಾವಿದರನ್ನು ಈ ಸಿನಿಮಾ ಒಳಗೊಂಡಿದೆ.

    ವ್ಯೂಹಂ ಸಿನಿಮಾ ಕಳೆದ ವರ್ಷ ಡಿಸೆಂಬರ್​ 29ರಂದೇ ಬಿಡುಗಡೆಯಾಗಬೇಕಿತ್ತು. ಆದರೆ, ಅನೇಕ ಕಾರಣಗಳಿಂದ ಸಾಧ್ಯವಾಗಲಿಲ್ಲ. ಅನೇಕ ಬಾರಿ ಪೋಸ್ಟ್​ಫೋನ್​ ಮಾಡಿದ ಬಳಿಕ ಕೊನೆಗೂ ಚಿತ್ರ ಬಿಡುಗಡೆಗೆ ಕಾಲ ಕೂಡಿಬಂದಿದೆ. ಫೆ.23ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಇದೇ ಖುಷಿಯಲ್ಲಿ ರಾಮ್​ ಗೋಪಾಲ್​ ವರ್ಮಾ ರಾತ್ರಿಯೆಲ್ಲ ಪಬ್​ನಲ್ಲಿ ಸಖತ್​ ಎಂಜಾಯ್​ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

    ರಶ್ಮಿಕಾ ಜತೆ ಆರ್​ಜಿವಿ
    ರಾಮ್​ ಗೋಪಾಲ್​ ವರ್ಮಾ ಹುಡುಗಿಯೊಬ್ಬಳ ಜತೆ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋವನ್ನು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು ಭಾರೀ ವೈರಲ್​ ಆಗಿದೆ. ಏಕೆಂದರೆ, ಆರ್​ಜಿವಿ ಜತೆ ಇರುವ ಯುವತಿ ​ನೋಡಲು ಥೇಟ್ ರಶ್ಮಿಕಾ ಮಂದಣ್ಣ ರೀತಿ ಇದ್ದಾರೆ. ಹೀಗಾಗಿ ಅನೇಕರು ರಶ್ಮಿಕಾ ಮಂದಣ್ಣ ಎಂದು ಕನ್ಫ್ಯೂಸ್​ ಆಗಿದ್ದಾರೆ. ಅಲ್ಲದೆ, ಈ ಫೋಟೋ ಮೇಲೆ ಮೀಮ್ಸ್ ಕೂಡ ಶುರುವಾಗಿದೆ. ಇದರೊಂದಿಗೆ ನೆಟ್ಟಿಗರು ಹುಡುಗಿ ಯಾರು ಎಂದು ವಿಚಾರಿಸಲು ಶುರುಮಾಡಿದ್ದಾರೆ. ಆದರೆ ಆರ್‌ಜಿವಿ ಜೊತೆಗೆ ಆ ಚಿತ್ರದಲ್ಲಿರುವ ಹುಡುಗಿಯ ಹೆಸರು ಮಾಸೂಮ್ ಶಂಕರ್.

    ಯಾರು ಈ ಮಾಸೂಮ್ ಶಂಕರ್?
    ಅಂದಹಾಗೆ ಮಾಸೂಮ್ ಶಂಕರ್ ಓರ್ವ ಭಾರತೀಯ ರೂಪದರ್ಶಿ ಮತ್ತು ನಟಿ. ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2018 ರಲ್ಲಿ ಬಿಡುಗಡೆಯಾದ ನಾಗೇಶ್ ತಿರೈರಂಗಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ನಂತರ 2019 ರಲ್ಲಿ ತೆಲುಗು ಚಿತ್ರ 90ML ನಲ್ಲಿ ನಟಿಸಿದರು. ನಂತರ, ಮಾಸೂಮ್ ಶಂಕರ್ ಟೆಡ್ಡಿ, ಪೈನಿಗಲ್ ಗವನಿಕಾವುಮ್ ಮತ್ತು ಡಿಡಿ ರಿಟರ್ನ್ಸ್ ಚಿತ್ರಗಳಲ್ಲಿ ನಟಿಸಿದ್ದಾರೆ. RGV ಜತೆ ಮಾಸೂಮ್​ ಶಂಕರ್​ ಕನೆಕ್ಸನ್​ ಏನೆಂದು ತಿಳಿದಿಲ್ಲ. ಆದರೆ, ಮಾಸೂಮ್ ಶಂಕರ್, ಆರ್​ಜಿವಿ ಜತೆ ತುಂಬಾ ಕ್ಲೋಸ್​ ಆಗಿರುವುದನ್ನು ನೋಡಿದರೆ, ಆರ್​ಜಿವಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಹೆಂಡ್ತಿ ಅದೇನ್​ ಮ್ಯಾಜಿಕ್​ ಮಾಡಿದ್ದಾಳೋ? ತಂದೆಯ ಶಾಕಿಂಗ್​ ಹೇಳಿಕೆಗೆ ಜಡ್ಡು ಉತ್ತರ ಹೀಗಿತ್ತು…

    ವಕೀಲರು ಜೀನ್ಸ್​ ಧರಿಸಿ ಬರಬಹುದೇ? ಗುವಾಹಟಿ ಹೈಕೋರ್ಟ್ ಹೇಳಿದಿಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts