ಉಪೇಂದ್ರರ ಪ್ರಜಾಕೀಯದ ಬಗ್ಗೆ ವರ್ಮ ಅಭಿಪ್ರಾಯವೇನು?

Prajakeepa - RGV
Published on

ಬೆಂಗಳೂರು: ನಿರ್ದೇಶಕ-ನಿರ್ಮಾಪಕ ರಾಮ್​ಗೋಪಾಲ್​ ವರ್ಮ ಅಷ್ಟು ಸುಲಭವಾಗಿ ಯಾರನ್ನೂ ಮೆಚ್ಚಿಕೊಳ್ಳುವುದೂ ಇಲ್ಲ, ಯಾರ ಬಗ್ಗೆ ಒಳ್ಳೆಯ ಮಾತುಗಳನ್ನೂ ಆಡುವುದಿಲ್ಲ. ಈಗ್ಯಾಕೆ ಈ ಮಾತು ಎಂದರೆ, ವರ್ಮ ಅವರು ಪ್ರಜಾಕೀಯದ ಧ್ಯೇಯೋದ್ದೇಶಗಳ ಬಗ್ಗೆ ಮತ್ತು ಉಪೇಂದ್ರರ ಯೋಚನೆಗಳ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.

ಉಪೇಂದ್ರ ಅವರು ಗುರುವಾರವಷ್ಟೇ ತಮ್ಮ ರಾಜಕೀಯ ಪಕ್ಷದ ಹೊಸ ವೆಬ್​ಸೈಟ್​ ಬಿಡುಗಡೆ ಮಾಡಿದ್ದಾರೆ. ಈ ವೆಬ್​ಸೈಟ್​ನಲ್ಲಿ ಪಕ್ಷದ ಧ್ಯೇಯೋದ್ದೇಶಗಳ ಬಗ್ಗೆ ಅವರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಉಪೇಂದ್ರ ಅವರು ಹೇಳುವಂತೆ ಪ್ರಜಾಕೀಯ ಪಕ್ಷದಲ್ಲಿ ಯಾವುದೇ ಪಾರ್ಟಿ ಫಂಡ್​ ಇರುವುದಿಲ್ಲವಂತೆ. ಕಾರ್ಯಕರ್ತರು, ಪ್ರಾದೇಶಿಕ ಕಚೇರಿಗಳು, ಮೆರವಣಿಗೆಗಳು, ಸುಳ್ಳು ಆಶ್ವಾಸನೆಗಳು, ಬೇರೆಯವರನ್ನು ದೂಷಿಸುವುದು, ಜನರ ಕಣ್ಣಿಗೆ ಮಣ್ಣೆರೆಚುವ ಸಾಮಾಜಿಕ ಸೇವೆಗಳು, ಅರೆಸ್ಟ್​ ಆಗುವ ನಾಟಕಗಳು ... ಇವ್ಯಾವುದೂ ಇರುವುದಿಲ್ಲವಂತೆ.

ಈ ವೆಬ್​ಸೈಟ್​ ಮತ್ತು ತಮ್ಮ ಪಕ್ಷದ ಧ್ಯೇಯೋದ್ದೇಶಗಳ ಕುರಿತಾಗಿ ಮುಕ್ತವಾಗಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂದು ಉಪೇಂದ್ರ ಅವರು ತಿಳಿಸಿದ್ದರು. ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ರಾಮ್​ಗೋಪಾಲ್​ ವರ್ಮ, ಇದೊಂದು ಕ್ರಾಂತಿಕಾರಿಕ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ನಿಜಕ್ಕೂ ಇದೊಂದು ಕ್ರಾಂತಿಕಾರಿಕ ಬೆಳವಣಿಗೆ. ಉಪೇಂದ್ರ ಅವರ ಈ ನಡೆ ಪ್ರಶಂಸನೀಯ' ಎಂದು ವರ್ಮ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net