More

    ಶಿವಪ್ಪನಾದ ಶಿವಣ್ಣ – ತಮಿಳು ನಿರ್ದೇಶಕನ ಕನ್ನಡ ಸಿನಿಮಾ

    ಬೆಂಗಳೂರು : ‘ತಪ್ಪು ಅಂತ ಗೊತ್ತಾದ ಮೇಲೂ ಯಾಕೆ ಮಾಡಬೇಕು?’- ಬಹಳ ಗಂಭೀರವಾಗಿ ಪ್ರಶ್ನಿಸಿದರು ಶಿವಣ್ಣ. ಯಾವ ವಿಷಯದ ಕುರಿತಾಗಿ ಅವರು ಮಾತನಾಡುತ್ತಿರಬಹುದು ಎಂಬ ಪ್ರಶ್ನೆ ಬರದಿರದು. ಅವರು ಮಾತನಾಡಿದ್ದು ತಮ್ಮ ಹೊಸ ಚಿತ್ರದ ಬಗ್ಗೆ. ಆ ಚಿತ್ರಕ್ಕೆ ‘ಶಿವಪ್ಪ’ ಎಂಬ ಹೆಸರಿಡಲಾಗಿದೆ. ಅಷ್ಟೇ ಅಲ್ಲ, ಚಿತ್ರದ ಮುಹೂರ್ತ ಸಹ ಗುರುವಾರ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದಿದೆ. ಲಾಕ್​ಡೌನ್ ಮುಗಿದ ನಂತರ ಶಿವರಾಜಕುಮಾರ್ ಅಭಿನಯದ ‘ಎಸ್​ಆರ್​ಕೆ’ ಅಥವಾ ‘ಆರ್​ಡಿಎಕ್ಸ್’ ಚಿತ್ರಗಳು ಶುರುವಾಗಬಹುದು ಎಂಬ ಅಂದಾಜಿತ್ತು. ಆದರೆ, ಆ ಎರಡು ಚಿತ್ರಗಳು ಸದ್ಯಕ್ಕಿಲ್ಲ. ಅದರ ಬದಲು ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರದಲ್ಲಿ ಮೊದಲು ಬಣ್ಣ ಹಚ್ಚಲಿದ್ದಾರೆ ಶಿವಣ್ಣ. ಇದರಲ್ಲಿ ಧನಂಜಯ್ ಮತ್ತು ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ.

    ಜಾತಿ, ಧರ್ಮ ತರಬೇಡಿ …
    ಇನ್ನು ಶಿವರಾಜಕುಮಾರ್ ನೇತೃತ್ವದ ಚಿತ್ರರಂಗದ ನಿಯೋಗವೊಂದು ಚಿತ್ರರಂಗಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು. ಈ ಕುರಿತು ಯಾವುದೇ ಉತ್ತರ ಇನ್ನೂ ಬಂದಿಲ್ಲವಂತೆ. ‘ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾಗಿದೆ. ನಾವು ಸಹಾಯ ಕೇಳಿದ್ದೇವೆ ಮತ್ತು ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಸರ್ಕಾರಕ್ಕೆ ಅದರದ್ದೇ ಆದ ಸಮಸ್ಯೆಗಳಿವೆ. ಎಲ್ಲರಿಗೂ ಸಹಾವಾಗಬೇಕು. ಈ ವಿಚಾರದಲ್ಲಿ ಜಾತಿ, ಧರ್ಮ ಬರಬಾರದು. ಮಾನವೀಯತೆಯ ನೆಲೆಗಟ್ಟಿನಲ್ಲಿ ಯೋಚನೆ ಮಾಡಬೇಕು’ ಎಂದು ಹೇಳಿದರು.

    ಸ್ಲೀಪಿಂಗ್ ಟೈಗರ್ ಪಾತ್ರ: ಚಿತ್ರದಲ್ಲಿ ಧನಂಜಯ್ ಮತ್ತು ಪೃಥ್ವಿ ಇದ್ದರೂ, ಇಲ್ಲಿ ಯಾರೂ ಹೀರೋ ಅಥವಾ ವಿಲನ್ ಆಗಿರುವುದಿಲ್ಲವಂತೆ. ‘ಇಲ್ಲಿ ಎಲ್ಲ ಪಾತ್ರಗಳೂ ಮುಖ್ಯವೇ. ಇದು ಶಿವರಾಜಕುಮಾರ್ ಚಿತ್ರ ಎನ್ನುವುದಕ್ಕಿಂತ ವಿಜಯ್ ಮಿಲ್ಟನ್ ಚಿತ್ರ ಎನ್ನುವುದು ಹೆಚ್ಚು ಸೂಕ್ತ. ಎಲ್ಲರೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ತಪು್ಪ ಮಾಡುತ್ತಾರೆ. ತಪು್ಪ ಮಾಡೋಕೆ ಹೋಗೋದೇ ತಪು್ಪ. ತಪು್ಪ ಅಂತ ಗೊತ್ತಿದ್ದರೂ, ಯಾಕೆ ಆ ತಪು್ಪ ಮಾಡಬೇಕು ಎಂಬ ಅಂಶದ ಸುತ್ತ ಕಥೆ ಮಾಡಲಾಗಿದೆ. ನೋಡೋಕೆ ಮುಗ್ಧನಂತೆ ಕಂಡರೂ, ಬಹಳ ರಗಡ್ ಆದಂತಹ ಪಾತ್ರ ನನ್ನದು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಸ್ಲೀಪಿಂಗ್ ಟೈಗರ್ ಪಾತ್ರ ನನ್ನದು’ ಎನ್ನುತ್ತಾರೆ ಅವರು.

    ಭಯ-ಭಕ್ತಿ ಇರಬೇಕು: ಇದು ಶಿವರಾಜಕುಮಾರ್ ಅಭಿನಯದ 123ನೇ ಚಿತ್ರವಾದರೂ ಮನಸ್ಸಿನಲ್ಲಿ ಅಳುಕಿದ್ದೇ ಇದೆಯಂತೆ. ‘ನಾನು ಏನು ಮಾಡಿದ್ರೂ ನಡೆಯುತ್ತೆ ಅನ್ನೋದು ತಪು್ಪ. ಪ್ರತಿ ಸಿನಿಮಾಗೂ ಕಷ್ಟಪಡಬೇಕು. ಪ್ರತಿ ಚಿತ್ರವನ್ನೂ ಪ್ರೇಕ್ಷಕರು ನೋಡುವ ಹಾಗೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಆ ಭಯ, ಭಕ್ತಿ ಇದ್ದರಷ್ಟೇ ಏನಾದರೂ ಒಳ್ಳೆಯ ಕೆಲಸ ಮಾಡುವುದಕ್ಕೆ ಸಾಧ್ಯ. ನಾನೇನು ಮಾಡಿದರೂ ಜನ ನೋಡುತ್ತಾರೆ ಎಂದು ಇಷ್ಟಬಂದಂತೆ ಮಾಡಿದರೆ ಜನ ನೋಡುವುದಿಲ್ಲ. ಏನೇ ಕೆಲಸ ಮಾಡಿದರೂ ಜನರಿಗೆ ಇಷ್ಟವಾಗುವಂತಹ ಪ್ರಯತ್ನ ಮಾಡಬೇಕು’ ಎನ್ನುತ್ತಾರೆ ಶಿವಣ್ಣ.

    ಇಂಡೋ-ಮ್ಯಾನ್ಮಾರ್ ಗಡಿ ದಾಟಿತ್ತು 66.4 ಕಿಲೋ ತೂಕದ 400 ಚಿನ್ನದ ಗಟ್ಟಿಗಳು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts