ಇಂಡೋ-ಮ್ಯಾನ್ಮಾರ್ ಗಡಿ ದಾಟಿತ್ತು 66.4 ಕಿಲೋ ತೂಕದ 400 ಚಿನ್ನದ ಗಟ್ಟಿಗಳು !

DRI recovers 66.4 kg smuggled gold worth Rs 35 cr
Published on

ನವದೆಹಲಿ: ಚಿನ್ನ ಕಳ್ಳಸಾಗಣೆ ದಿನೇದಿನೆ ಹೆಚ್ಚಾಗುತ್ತಿದ್ದು, ಈ ಸಲ ಭಾರತ- ಮ್ಯಾನ್ಮಾರ್ ಗಡಿ ದಾಟಿದ 400 ಚಿನ್ನದ ಗಟ್ಟಿಗಳು ಡೈರೆಕ್ಟೋರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್​ಐ) ಅಧಿಕಾರಿಗಳ ಬಲೆಗೆ ಬಿದ್ದಿವೆ. ಡಿಆರ್​ಐ ದೆಹಲಿ ಘಟಕದ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಎರಡು ಟ್ರಕ್​ಗಳ ಬೆನ್ನುಬಿದ್ದು ತಪಾಸಣೆ ನಡೆಸಿದಾಗ ಈ ಚಿನ್ನದ ಗಟ್ಟಿಗಳು ಪತ್ತೆಯಾಗಿದ್ದವು.

ಟ್ರಕ್​ಗಳು ಮ್ಯಾನ್ಮಾರ್ ಗಡಿ ದಾಟಿ ಭಾರತದೊಳಕ್ಕೆ ಬಂದಿದ್ದು, ಪಂಜಾಬ್ ಕಡೆಗೆ ಸಂಚರಿಸುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಟ್ರಕ್​ಗಳನ್ನು ತಡೆದು ತಪಾಸಣೆ ನಡೆಸಿದಾಗ ಅದರ ಇಂಧನ ಟ್ಯಾಂಕ್ ಒಳಗೆ 400 ಚಿನ್ನದ ಗಟ್ಟಿಗಳು ಪತ್ತೆಯಾಗಿದ್ದವು. ಇವುಗಳ ಒಟ್ಟು ತೂಕ 66.4 ಕಿಲೋ. ಮೌಲ್ಯ ಅಂದಾಜು 35 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಐವರನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಲಾರಿ ಮತ್ತು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನದ ಗಟ್ಟಿಗಳು ವಿದೇಶಿ ಮೂಲದವು ಎಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net