ಹೈದರಾಬಾದ್: ತೆಲಂಗಾಣದಲ್ಲಿ ನೂತನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್ ನಾಯಕತ್ವ ಮುಂದಾಗಿದ್ದು, ಸೋಮವಾರದಿಂದ ನಡೆಯುತ್ತಿರುವ ಕಸರತ್ತು ಅಂತ್ಯ ಕಾಣುವ ಲಕ್ಷಣ ಕಂಡು ಬರುತ್ತಿದೆ. ಮಂಗಳವಾರ ಸಂಜೆ 7 ಗಂಟೆಗೆ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಆಂಧ್ರದಲ್ಲಿ ಮಿಚೌಂಗ್ ಅಬ್ಬರ ತಿರುಪತಿಗೆ ತೆರಳೋ ಮುನ್ನ ಎಚ್ಚರ! 51 ವಿಮಾನ, 100 ರೈಲು ಸೇವೆ ರದ್ದು
ಮತ್ತೊಂದೆಡೆ ಸಿಎಂ ರೇಸ್‌ನಲ್ಲಿರುವ ಟಿ.ಕಾಂಗ್ರೆಸ್‌ನ ಹಿರಿಯ ನಾಯಕರಾದ ಭಟ್ಟಿ ವಿಕ್ರಮಾರ್ಕ ಹಾಗೂ ಉತ್ತಮ್‌ಕುಮಾರ್ ರೆಡ್ಡಿ ದೆಹಲಿ ತಲುಪಿದ್ದು ಖರ್ಗೆ ಅವರನ್ನು ಭೇಟಿ ಮಾಡಲಿದ್ದಾರೆ. ಇದರಿಂದಾಗಿ ತೆಲಂಗಾಣದ ಮುಂದಿನ ಸಿಎಂ ಯಾರು ಎಂಬ ಕುತೂಹಲಕ್ಕೆ ಕೆಲವೇ ಕ್ಷಣಗಳಲ್ಲಿ ತೆರೆ ಬೀಳಲಿದೆ.
ಈಗಾಗಲೇ.. ಸಿಎಂ ಅಭ್ಯರ್ಥಿಯಾಗಿ ರೇವಂತ್ ರೆಡ್ಡಿ ಹೆಸರು ಬಹುತೇಕ ಅಂತಿಮವಾಗಿದೆಯಂತೆ. ಬಹುತೇಕ ಶಾಸಕರು ರೇವಂತ್ ಪರ ಒಲವು ತೋರಿದ್ದು, ಸಿಎಂ ರೇಸ್‌ನಲ್ಲಿರುವ ಕೆಲವು ಹಿರಿಯ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅಧಿಕೃತ ಘೋಷಣೆ ವಿಳಂಬವಾಗಿತ್ತು ಎನ್ನಲಾಗಿದೆ.
ಇದೇ ವೇಳೆ ಉತ್ತಮ್ ಕುಮಾರ್ ರೆಡ್ಡಿ ಅವರು ಕರ್ನಾಟಕ ಉಪ ಮುಖ್ಯಮಂತ್ರಿ ಹಾಗೂ ತೆಲಂಗಾಣ ವೀಕ್ಷಕ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಡಿಕೆ ಅವರನ್ನು ಸಹೋದರನ ನಿವಾಸದಲ್ಲಿ ಭೇಟಿ ಮಾಡಿದ್ದರು. ಉತ್ತಮ್ ಕೂಡ ಸಿಎಂ ರೇಸ್ ನಲ್ಲಿರುವಾಗಲೇ ಡಿಕೆಶಿ ಭೇಟಿ ಮಹತ್ವ ಪಡೆದುಕೊಂಡಿದೆ.
ಮತ್ತೊಂದೆಡೆ ದೆಹಲಿಯ ಖರ್ಗೆ ನಿವಾಸದಲ್ಲಿ ರಾಹುಲ್, ಕೆಸಿ ವೇಣುಗೋಪಾಲ್ ಮತ್ತು ಡಿ.ಕೆ. ಶಿವಕುಮಾರ್ ಖರ್ಗೆಯವರನ್ನು ಭೇಟಿಯಾಗಿದ್ದರು. ರೇವಂತ್ ರೆಡ್ಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರೆ ಇನ್ನುಳಿದ ಮುಖಂಡರ ಬೇಡಿಕೆಗಳ ಬಗ್ಗೆ ವರಿಷ್ಠರು ಚರ್ಚೆ ನಡೆಸಿದ್ದಾರೆ.
ಸಭೆಯ ನಂತರ ಡಿ.ಕೆ.ಶಿವಕುಮಾರ್, ಮಾಣಿಕ್ ರಾವ್ ಠಾಕ್ರೆ, ಕೆ.ಸಿ.ವೇಣುಗೋಪಾಲ್ ಹೈದರಾಬಾದ್ ಗೆ ತೆರಳಿದರು.
ಪ್ರಮುಖರ ಸಭೆಯ ಬಳಿಕ ತೆಲಂಗಾಣ ರಾಜ್ಯದ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆಯಂತೆ. ಸಂಜೆ ಯಾವುದೇ ಕ್ಷಣದಲ್ಲಿ ರೇವಂತ್ ರೆಡ್ಡಿ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಇನ್ನು ಡಿಸೆಂಬರ್ 7ರ ಬೆಳಗ್ಗೆ 11 ಗಂಟೆಗೆ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.ಅವರ ಜತೆ ಇನ್ನು ಕೆಲವು ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಇದೆ.
ಈ ಬಗ್ಗೆ ಅಧಿಕೃತ ಘೋಷಣೆಯಾಗುವುದೊಂದೇ ಬಾಕಿ. ಏತನ್ಮಧ್ಯೆ, ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಧಿಕಾರಿಗಳು ಕೂಡ ಸಜ್ಜಾಗಿದ್ದಾರೆ.
ಕೆಸಿಆರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದಿದ್ದರೆ, ಬಿಆರ್‌ಎಸ್ 39 ಸ್ಥಾನಗಳನ್ನು ಗೆದ್ದಿದೆ.
ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ ನಟ ಸೂರ್ಯ, ಕಾರ್ತಿ; ದೇಣಿಗೆ ನೀಡಿದ ಹಣ ಎಷ್ಟು ಗೊತ್ತಾ?