More

  ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ ನಟ ಸೂರ್ಯ, ಕಾರ್ತಿ; ದೇಣಿಗೆ ನೀಡಿದ ಹಣ ಎಷ್ಟು ಗೊತ್ತಾ?

  ಚೆನ್ನೈ: ಚೆನ್ನೈನಲ್ಲಿ ಹವಾಮಾನ ಬದಲಾಗಿದೆ. ಮಳೆಯಿಂದ ಎಲ್ಲವೂ ಅಸ್ತವ್ಯಸ್ತವಾಗಿದೆ. ಮೈಚೌಂಗ್ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ತಮಿಳು ನಟರಾದ ಸೂರ್ಯ ಮತ್ತು ಕಾರ್ತಿ ಇಬ್ಬರು ಸೆಲೆಬ್ರಿಟಿಗಳು ವಿನಾಶಕಾರಿ ಪ್ರವಾಹದ ನಡುವೆ ಚೆನ್ನೈ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

  ಭಾರೀ ಗಾಳಿ, ಮಳೆಗೆ ಬೃಹತ್ ಮರಗಳು ಧರೆಗುರುಳಿವೆ. ನದಿಗಳು ತುಂಬಿ ಹರಿಯುತ್ತಿರುವುದರಿಂದ ಸಾಕಷ್ಟು ಮಂದಿ ಮನೆ ಕಳೆದುಕೊಂಡಿದ್ದಾರೆ. ರಸ್ತೆಯಲ್ಲಿದ್ದ ಕಾರುಗಳೂ ಕೊಚ್ಚಿ ಹೋಗಿವೆ. ಮೈಚೌಂಗ್ ಸೈಕ್ಲೋನ್ ಹೊಡೆತಕ್ಕೆ ಚೆನ್ನೈ ನಡುಗುತ್ತಿದೆ. ಈ ಭಾರಿ ಮಳೆಗೆ 8 ಮಂದಿ ಸಾವನ್ನಪ್ಪಿರುವಂತಿದೆ. ಹಲವು ಪ್ರಮುಖ ನಗರಗಳಲ್ಲಿ ರೆಡ್ ಅಲರ್ಟ್ ಕೂಡ ಘೋಷಿಸಲಾಗಿದೆ.

  ತಮಿಳಿನ ಸ್ಟಾರ್​​ ನಟರಾದ #ಸೂರ್ಯ ಮತ್ತು #ಕಾರ್ತಿ ಅವರು ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು 10 ಲಕ್ಷಗಳ ಆರಂಭಿಕ ಮೊತ್ತವನ್ನು ಘೋಷಿಸಿದ್ದಾರೆ. ನಟರು ತಮ್ಮ ಅಭಿಮಾನಿಗಳ ಸಂಘಗಳ ಮೂಲಕ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ.

  ಮೈಚಾಂಗ್ ಚಂಡಮಾರುತವು ತಮಿಳುನಾಡು, ಪುದುಚೇರಿ, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ನಾಗಪಟ್ಟಿಣಂ, ಕಡಲೂರು ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯನ್ನು ಉಂಟುಮಾಡಿತು. ಹೆಚ್ಚಿನ ಸ್ಥಳಗಳು ಜಲಾವೃತವಾಗಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts