

Rahul Sipligunj: ಆರ್ಆರ್ಆರ್ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದ ಹಿನ್ನೆಲೆ, ಈ ಹಾಡಿನ ಗಾಯಕ ರಾಹುಲ್ ಸಿಪ್ಲಿಗಂಜ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ 1 ಕೋಟಿ ರೂ. ಬಹುಮಾನ ನೀಡಿದ್ದಾರೆ.
ಭಾನುವಾರ ಹೈದರಾಬಾದ್ನಲ್ಲಿ ನಡೆದ ಬೋನಾಲ್ ಹಬ್ಬದ ಉತ್ಸವದ ವೇಳೆ ರಾಹುಲ್ ಸಿಪ್ಲಿಗಂಜ್ಗೆ 1 ಕೋಟಿ ರೂ. ಬಹುಮಾನದ ಚೆಕ್ ವಿತರಿಸಿದ್ದಾರೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ 2022ರಲ್ಲಿ ಬಿಡುಗಡೆಯಾದ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು 2023ರ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನ ಪಡೆದಿತ್ತು. ಖ್ಯಾತ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿಯ ನಾಟು ನಾಟು ಹಾಡನ್ನು ಸಂಯೋಜಿಸಿದ್ದರು. ಗಾಯಕ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲಬೈರವ ಹಾಡಿಗೆ ಧ್ವನಿಯಾಗಿದ್ದರು.
ತೆಲಂಗಾಣ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದ ವೇಳೆ ರಾಹುಲ್ ಸಿಪ್ಲಿಗಂಜ್ಗೆ ಅಭಿನಂದಿಸಿ ವೈಯಕ್ತಿಕವಾಗಿ 10 ಲಕ್ಷ ರೂ. ಪ್ರೋತ್ಸಾಹ ಧನ ನೀಡಿ, 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಹೈದರಾಬಾದ್ನ ಓಲ್ಡ್ ಸಿಟಿ ಮೂಲದ ರಾಹುಲ್ ಸಿಪ್ಲಿಗಂಜ್, 2009ರಿಂದ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಎಂ.ಎಂ.ಕೀರವಾಣಿ ಶಿಷ್ಯರಾಗಿ ಅನೇಕ ಸಿನಿಮಾಗಳ ಹಾಡಿಗೆ ಧ್ವನಿಯಾಗಿದ್ದಾರೆ. 2019ರ ತೆಲುಗು ಬಿಗ್ಬಾಸ್ ವಿಜೇತರಾಗಿದ್ದಾರೆ.(ಏಜೆನ್ಸೀಸ್)