ನ್ಯಾ. ಯಶವಂತ್ ವರ್ಮಾ ವಿರುದ್ಧ ಮಹಾಭಿಯೋಗಕ್ಕೆ ಸಂಸದರಿಂದ ಸ್ಪೀಕರ್​ಗೆ ಪ್ರಸ್ತಾವನೆ | Yashwant Verma

Speaker
Published on

Yashwant Verma : ನ್ಯಾ. ಯಶವಂತ್ ವರ್ಮಾರನ್ನ ನ್ಯಾಯಮೂರ್ತಿ ಸ್ಥಾನದಿಂದ ವಜಾಗೊಳಿಸಲು ಸಂಸತ್​ನಲ್ಲಿ ಮಹಾಭಿಯೋಗ ಪ್ರಕ್ರಿಯೆ ಆರಂಭಿಸುವಂತೆ ಇಂದು (ಜು.21) ಲೋಕಸಭಾ ಸ್ಪೀಕರ್​ಗೆ 200ಕ್ಕೂ ಹೆಚ್ಚು ಸಂಸದರು ಪ್ರಸ್ತಾವನೆ ಸಲ್ಲಿಸಿದರು.

ಪಕ್ಷ ಬೇಧ ಮರೆತು ಎಲ್ಲಾ ಪಕ್ಷಗಳ ರಾಜ್ಯಸಭೆಯ 63 ಸದಸ್ಯರು, ಲೋಕಸಭೆಯ 145 ಸಂಸದರು ನ್ಯಾ.ಯಶವಂತ್ ವರ್ಮಾ ವಜಾಗೊಳಿಸಲು ಒತ್ತಾಯಿಸಿರುವ ಪತ್ರಕ್ಕೆ ಸಹಿ ಹಾಕಿದ್ದಾರೆ. ಸಂವಿಧಾನದ 124, 217 ಹಾಗೂ 218ನೇ ವಿಧಿ ಆಧರಿಸಿ ನ್ಯಾ. ಯಶವಂತ್ ವರ್ಮಾ ಪದಚ್ಯುತಗೊಳಿಸಲು ಬೇಡಿಕೆ ಇಡಲಾಗಿದೆ.

ಕಾಂಗ್ರೆಸ್​, ಬಿಜೆಪಿ, ಟಿಡಿಪಿ, ಜೆಡಿಯು, ಜೆಡಿಎಸ್​, ಜನಸೇನಾ, ಶಿವಸೇನೆ ಸೇರಿ ಹಲವು ಪಕ್ಷಗಳ ಸಂಸದರು ಪ್ರಸ್ತಾವನೆಗೆ ಸಹಿ ಹಾಕಿದ್ದಾರೆ. ರಾಹುಲ್ ಗಾಂಧಿ, ರವಿಶಂಕರ್ ಪ್ರಸಾದ್, ಸುಪ್ರಿಯಾ ಸುಳೆ, ಅನುರಾಗ್ ಠಾಕೂರ್, ಕೆ.ಸಿ.ವೇಣುಗೋಪಾಲ್, ಪಿಪಿ ಚೌಧರಿ ಸೇರಿ ಅನೇಕ ಘಟಾನುಘಟಿ ನಾಯಕರು ಸಹಿ ಹಾಕಿದ್ದಾರೆ.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದ ವೇಳೆ ಮನೆಯಲ್ಲಿ ಅಪಾರ ಪ್ರಮಾಣದ ನಗದು ಸಿಕ್ಕ ಹಿನ್ನೆಲೆ ನ್ಯಾ. ಯಶವಂತ್ ವರ್ಮಾ ಸುಪ್ರೀಂಕೋರ್ಟ್​ನಿಂದ ದೋಷಾರೋಪಣೆಗೊಳಗಾಗಿದ್ದು, ವರದಿಯನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ನ್ಯಾಯಾಮೂರ್ತಿ ಸ್ಥಾನದಿಂದ ಪದಚ್ಯುತಗೊಳಿಸಲು ಸಂಸತ್​ನಲ್ಲಿ ಪ್ರಕ್ರಿಯೆ ಆರಂಭಿಸಲು ಒತ್ತಾಯಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net