ಕಂಚ ಗಚಿಬೌಲಿ ಭೂ ವಿಚಾರ: ಅರಣ್ಯ ಪುನಃಸ್ಥಾಪಿಸಿ ಇಲ್ಲವೇ ಜೈಲಿಗೆ ಕಳಿಸಿ! ತೆಲಂಗಾಣ ಸರ್ಕಾರಕ್ಕೆ ‘ಸುಪ್ರೀಂ’ ಎಚ್ಚರಿಕೆ | Kancha Gachibowli

Kancha Gachibowli: ಹೈದರಾಬಾದ್‌ನ ಕಂಚ ಗಚಿಬೌಲಿ ಭೂ ಸಮಸ್ಯೆಯ ಕುರಿತು ಇಂದು (ಮೇ.15) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಸಿಜೆಐ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಅವರನ್ನೊಳಗೊಂಡ ಪೀಠವು, ವಿಚಾರಣೆ ನಡೆಸಿ, ನಾಶಪಡಿಸಿದ ಪರಿಸರವನ್ನು ಪುನಃಸ್ಥಾಪಿಸಿ ಇಲ್ಲವೇ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ ಎಂದು ತೆಲಂಗಾಣ ಸರ್ಕಾರಕ್ಕೆ ಎಚ್ಚರಿಸಿದೆ.

ಇದನ್ನೂ ಓದಿ: ಮೇ.17, ಜೆರ್ಸಿ ನಂ.18! ಕ್ರಿಕೆಟ್​ ಪ್ರಿಯರಿಗೆ ‘ಕಿಂಗ್ ಕೊಹ್ಲಿ’ ಅಭಿಮಾನಿಗಳ ವಿಶೇಷ ಮನವಿ ಇದು | Virat Kohli

400 ಎಕರೆ ಅರಣ್ಯ ಪ್ರದೇಶದಲ್ಲಿ ಬೃಹತ್​ ಮರಗಳನ್ನು ನಾಶಪಡಿಸಲು ಯಾರಿಂದ ಅನುಮತಿ ಪಡೆದಿದ್ದೀರಾ ಎಂಬುದನ್ನು ಸ್ಪಷ್ಟಪಡಿಸುವಂತೆ ಬಿ.ಆರ್. ಗವಾಯಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಹೌದು ಅಥವಾ ಇಲ್ಲ ಮತ್ತು ಈಗಾಗಿರುವ ನಷ್ಟವನ್ನು ಸರಿದೂಗಿಸಲು ತೆಗೆದುಕೊಳ್ಳುವ ಕ್ರಮಗಳನ್ನು ಸ್ಪಷ್ಟವಾಗಿ ಕೋರ್ಟ್​ಗೆ ತಿಳಿಸಬೇಕು ಎಂದು ಪೀಠವು ಒತ್ತಿ ಹೇಳಿದೆ.

ಕಂಚ ಗಚಿಬೌಲಿಯಲ್ಲಿ ಪರಿಸರವನ್ನು ಪುನಃಸ್ಥಾಪಿಸದಿದ್ದರೆ, ಅಧಿಕಾರಿಗಳು ಜೈಲಿಗೆ ಹೋಗಬೇಕು. ಮರಗಳನ್ನು ಮತ್ತೆ ಬೆಳಸದಿದ್ದರೆ ಮುಖ್ಯ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನೀವಿಲ್ಲಿ ಅಧಿಕಾರಿಗಳನ್ನು ರಕ್ಷಿಸಲು ಪ್ರಯತ್ನಿಸಬೇಡಿ. ಅಷ್ಟೊಂದು ಬುಲ್ಡೋಜರ್‌ಗಳನ್ನು ಕರೆಸಿ, ಮರಗಳನ್ನು ನಾಶ ಮಾಡಿದ್ದೇಕೆ? ವಾರಾಂತ್ಯದಲ್ಲಿ ಮರಗಳನ್ನು ಉರುಳಿಸುವುದರ ಅರ್ಥವೇನು? ಎಂದು ಪೀಠವು ಸರ್ಕಾರಕ್ಕೆ ಪ್ರಶ್ನಿಸಿದೆ.

ಇದನ್ನೂ ಓದಿ: ಮೇ 17ರಂದು ಕಲಾಮಂದಿರದಲ್ಲಿ ಜಾಗೃತಿ ಸಮಾವೇಶ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾಹಿತಿ

ಮರಗಳನ್ನು ಕಡಿಯುವುದನ್ನು ಸಮರ್ಥಿಸಬೇಡಿ. ಅವುಗಳನ್ನು ಹೇಗೆ ಪುನಃಸ್ಥಾಪಿಸಲಾಗುತ್ತದೆ ಎಂಬುದನ್ನು ಮಾತ್ರ ಹೇಳಿ. ಪರಿಸರ ಪುನಃಸ್ಥಾಪಿಸಿ ಇಲ್ಲವಾದರೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ ಎಂದು ಸುಪ್ರೀಂ ಕೋರ್ಟ್​ ತೆಲಂಗಾಣ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದೆ. ಕೇಂದ್ರ ಪ್ರಾಧಿಕಾರ ಸಲ್ಲಿಸಿದ ವರದಿಗೆ ಪ್ರತಿವಾದ ಸಲ್ಲಿಸಲು ರಾಜ್ಯ ಸರ್ಕಾರದ ವಕೀಲರು ಸಮಯ ಕೋರಿದ ಹಿನ್ನೆಲೆ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿದೆ,(ಏಜೆನ್ಸೀಸ್).

ಮೇ.17, ಜೆರ್ಸಿ ನಂ.18! ಕ್ರಿಕೆಟ್​ ಪ್ರಿಯರಿಗೆ ‘ಕಿಂಗ್ ಕೊಹ್ಲಿ’ ಅಭಿಮಾನಿಗಳ ವಿಶೇಷ ಮನವಿ ಇದು | Virat Kohli

Share This Article

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…