6ರಿಂದ 12ನೇ ತರಗತಿಯ ಶಾಲಾ ಪಠ್ಯಕ್ರಮಕ್ಕೆ ಭಗವದ್ಗೀತೆ ಸೇರಿಸಲು ಮುಂದಾಯ್ತು ಈ ರಾಜ್ಯ ಸರ್ಕಾರ!

Untitled design (30)
Published on

ಗುಜರಾತ್: ಹಿಂದೂ ಧಾರ್ಮಿಕ ಗ್ರಂಥವಾದ ಭಗವದ್ಗೀತೆಯ ಪಠಣ ಮತ್ತು ಅಧ್ಯಯನವನ್ನು ಗುಜರಾತ್‌ನ 6ರಿಂದ 12ನೇ ತರಗತಿಯ ಶಾಲಾ ಶಿಕ್ಷಣದ ಪಠ್ಯಕ್ರಮಕ್ಕೆ ಸೇರಿಸಲು ಗುಜರಾತ್​ ಸರ್ಕಾರವು ನಿರ್ಣಯಿಸಿದೆ. ಇದೀಗ ಈ ನಿರ್ಧಾರವನ್ನು ಬೆಂಬಲಿಸುವ ನಿರ್ಣಯವನ್ನು ಆಡಳಿತಾರೂಢ ಬಿಜೆಪಿ ಸರ್ಕಾರವು ಪ್ರಸ್ತಾಪಿಸಿದೆ.

ಈ ನಿರ್ಣಯವನ್ನು ತರುವುದನ್ನು ವಿರೋಧ ಪಕ್ಷ ಕಾಂಗ್ರೆಸ್ ವಿರೋಧಿಸಿದ್ದು, ಇದು ಅನಗತ್ಯ ಮತ್ತು ರಾಜಕೀಯ ಉದ್ದೇಶವಾಗಿದೆ ಎಂದು ತಿಳಿಸಿತು. ರಾಜ್ಯ ಸರ್ಕಾರವು ಈಗಾಗಲೇ ಅದರ ಮೇಲೆ ಕಾರ್ಯನಿರ್ವಹಿಸಲು ನಿರ್ಧರಿಸಿದೆ ಮತ್ತು ಸರ್ಕಾರವು ರಾಜ್ಯ ವಿಧಾನಸಭೆಯ ಕಾರ್ಯವಿಧಾನವನ್ನು ಬಳಸಿಕೊಳ್ಳುತ್ತಿದ್ದು, ಇದನ್ನು ರಾಜಕೀಯಗೊಳಿಸಲು ಯತ್ನಿಸುತ್ತಿದೆ ಎಂದಿದೆ.

ಗುಜರಾತ್ ಸರ್ಕಾರದ ನಿರ್ಣಯ: ಗುಜರಾತ್‌ನಲ್ಲಿ ಬಿಜೆಪಿ ಆಡಳಿತ ಸರ್ಕಾರವು ತರಗತಿಯ ಪಠ್ಯಕ್ರಮದಲ್ಲಿ ಭಗವದ್ಗೀತೆಯ ಅಧ್ಯಯನವನ್ನು ಒಳಗೊಂಡಂತೆ ನಿರ್ಣಯವನ್ನು ತಂದಿದೆ. ಇದನ್ನು ಶಿಕ್ಷಣ ಖಾತೆಯ ರಾಜ್ಯ ಸಚಿವರು ಮತ್ತು ಕಾಮ್ರೇಜ್‌ನ ಶಾಸಕ ಪ್ರಫುಲ್ ಪನ್ಶೇರಿಯಾ ಪ್ರಸ್ತಾಪಿಸಿದ್ದು, ಸದನದಲ್ಲಿ 120ರ ಸೂಚನೆಯ ಅಡಿಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ನಿರ್ಣಯವನ್ನು ಪರಿಚಯಿಸಿದ ಶಿಕ್ಷಣ ಸಚಿವರು, "ಇಂದು ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಖಿನ್ನತೆಯಾಗಿದೆ. ಖಿನ್ನತೆ ಮತ್ತು ಒತ್ತಡವನ್ನು ನಿವಾರಿಸಲು ಭಗವದ್ಗೀತೆ ಉತ್ತಮವಾಗಿದೆ" ಎಂದಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net