ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ನಂತರ ಆಮ್ ಆದ್ಮಿ ಪಕ್ಷವು ಈಗ ರಾಜ್ಯದಲ್ಲಿ ಪ್ರಮುಖ ಬದಲಾವಣೆಗಳನ್ನು(Reshuffle in AAP) ಮಾಡಿದೆ. ಆಮ್ ಆದ್ಮಿ ಪಕ್ಷ ದೆಹಲಿ ಘಟಕದ ಮುಖ್ಯಸ್ಥರನ್ನಾಗಿ ಸೌರಭ್ ಭಾರದ್ವಾಜ್ ಅವರನ್ನು ಶುಕ್ರವಾರ(ಮಾರ್ಚ್ 21) ನೇಮಿಸಿದೆ. ಈ ಮೊದಲು ಈ ಜವಾಬ್ದಾರಿಯನ್ನು ಬಾಬರ್‌ಪುರದ ಶಾಸಕ ಗೋಪಾಲ್ ರಾಯ್ ನಿರ್ವಹಿಸುತ್ತಿದ್ದರು.
ಇದನ್ನು ಓದಿ: ಅರವಿಂದ್ ಕೇಜ್ರಿವಾಲ್ ವಿರುದ್ಧ ಹೊಸ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ; ಕಾರಣ ಹೀಗಿದೆ.. | Arvind Kejriwal
ಪಂಜಾಬ್‌ನಲ್ಲಿ ಪಕ್ಷದ ಮುಖ್ಯಸ್ಥರನ್ನಾಗಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ನೇಮಿಸಿದೆ. ಪಕ್ಷವು ತನ್ನ ವಿವಿಧ ರಾಜ್ಯ ಘಟಕಗಳಿಗೆ ಹೊಸ ಮುಖ್ಯಸ್ಥರನ್ನು ಸಹ ಘೋಷಿಸಿದೆ. ದೆಹಲಿಯ ಮಾಜಿ ಪರಿಸರ ಸಚಿವ ಗೋಪಾಲ್ ರೈ ಗುಜರಾತ್ ಅನ್ನು ಮುನ್ನಡೆಸಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವು ತನ್ನ ಸಂಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡಲಿದೆ ಎಂದು ರೈ ಹೇಳಿದರು. ಪಂಕಜ್ ಗುಪ್ತಾ ಗೋವಾ ಘಟಕವನ್ನು ಮುನ್ನಡೆಸಿದರೆ, ಸಂದೀಪ್ ಪಾಠಕ್ ಛತ್ತೀಸ್‌ಗಢದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಎಎಪಿ ನಾಯಕ ಮೆಹ್ರಾಜ್ ಮಲಿಕ್ ಜಮ್ಮು ಮತ್ತು ಕಾಶ್ಮೀರ ಘಟಕವನ್ನು ಮುನ್ನಡೆಸಲಿದ್ದಾರೆ.
ದೆಹಲಿಯ ಎಎಪಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಮಾತನಾಡಿದ ಸೌರಭ್ ಭಾರದ್ವಾಜ್, ಪಕ್ಷದ ಸಂಘಟನೆಯನ್ನು ವಿಸ್ತರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು. ಚುನಾವಣೆಯಲ್ಲಿ ಸೋತ ನಂತರ ಪಕ್ಷವನ್ನು ಬಲಪಡಿಸುವುದು ಮೊದಲ ಆದ್ಯತೆ ಎಂದು ಹೇಳಿದರು. (ದೆಹಲಿ) ಚುನಾವಣೆಯಲ್ಲಿ ಎಎಪಿಯ ಮತ ಹಂಚಿಕೆ ಶೇ.43.5 ರಷ್ಟಿದ್ದರೆ, ಬಿಜೆಪಿಯ ಮತ ಹಂಚಿಕೆ ಶೇ.45.5ರಷ್ಟಿತ್ತು. ಪೊಲೀಸ್ ಮತ್ತು ಆಡಳಿತದ ಎಲ್ಲಾ ಬಳಕೆಯ ಹೊರತಾಗಿಯೂ (ನಮ್ಮ ವಿರುದ್ಧ ಬಿಜೆಪಿಯಿಂದ) ದೆಹಲಿಯ ಸುಮಾರು ಅರ್ಧದಷ್ಟು ಜನರು ನಮಗೆ ಮತ ಹಾಕಿದ್ದಾರೆ ಎಂದು ಇದು ತೋರಿಸುತ್ತದೆ. ನಾವು ಪಕ್ಷವನ್ನು ಬಲಪಡಿಸುತ್ತಲೇ ಇರುತ್ತೇವೆ ಎಂದರು.(ಏಜೆನ್ಸೀಸ್)
#WATCH | Delhi | AAP MP Sandeep Pathak says, “Today, various decisions were taken in the party’s Political Affairs Committee meeting…Gopal Rai has been made in charge of Gujarat. Pankaj Gupta has been made in charge of Goa…Manish Sisodia has been made in charge of Punjab and… pic.twitter.com/jRGU7JvACq
— ANI (@ANI) March 21, 2025