

ಬೆಳ್ತಂಗಡಿ: ನಿಟ್ಟಡೆ ಗ್ರಾಮದ ಪಂಡಿಜೆ ತೂಗುಸೇತುವೆಯ ಬಳಿ ಮಂಗಳವಾರ ಬೆಳಗ್ಗೆ ಅನಾರೋಗ್ಯದಿಂದ ಅಸಹಾಯಕವಾಗಿ ರಸ್ತೆಯ ಮೇಲೆ ಬಳಲುತ್ತಿದ್ದ ನಾಗರಹಾವನ್ನು ರಕ್ಷಿಸಲಾಗಿದೆ. ಹಾವಿನ ಸ್ಥಿತಿಯನ್ನು ಗಮನಿಸಿದ ಸ್ಥಳೀಯರಾದ ರತ್ನಾಕರ ಹೆಬ್ಬಾರ್ ಮತ್ತಿತರರು ಉಜಿರೆಯ ಉರಗ ತಜ್ಞ ಸ್ನೆಕ್ ಜಾಯ್ ಅವರನ್ನು ಸಂಪರ್ಕಿಸಿದರು. ತಕ್ಷಣ ಸ್ಪಂದಿಸಿದ ಅವರು ಹಾವನ್ನು ರಕ್ಷಣೆ ಮಾಡಿದ್ದಾರೆ.