

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆ ಉಳಿವು, ಈ ನಿಟ್ಟಿನಲ್ಲಿ ಎರಡೂ ಶಾಲೆಗಳ ಶಿಕ್ಷಕರು, ಹಳೇ ವಿದ್ಯಾರ್ಥಿಗಳು ಭೇದವಿಲ್ಲದೆ ಪ್ರಾಥಮಿಕ ಶಾಲೆ ಬಗ್ಗೆ ಮುತುವರ್ಜಿ ವಹಿಸಬೇಕು. ವಿದ್ಯಾರ್ಥಿಗಳನ್ನು ಬಲಿಷ್ಠಗೊಳಿಸುವುದು ಅಗತ್ಯ, ಶಿಕ್ಷಕ ವರ್ಗ, ದಾನಿಗಳ ನೆರವಿನಿಂದ ಶಾಲೆಗೆ ಬೇಕಾದ ವ್ಯವಸ್ಥೆ ಮಾಡಿ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಾಜ ಮತ್ತು ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಬಬ್ಬುಕಟ್ಟೆ ಸರ್ಕಾರಿ ಪ್ರೌಢಶಾಲಾ ಅಂಗಳಕ್ಕೆ ದಾನಿಗಳ ನೆರವಿನಿಂದ ಅಳವಡಿಸಲಾದ ಇಂಟರ್‌ಲಾಕ್ ಸಹಿತ ವಿವಿಧ ಕಾಮಗಾರಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ದಾನಿಗಳಾದ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ನಿವೃತ್ತ ಮುಖ್ಯಶಿಕ್ಷಕಿ ಶಕೀಲಾ ಹಾಗೂ ಸಮಾಜ ಸೇವಕಿ ಸುಹಾಸಿನಿ ಬಬ್ಬುಕಟ್ಟೆ, ಕೆಲಸ ನಿರ್ವಹಿಸಿದ ರೋನಿ ಮತ್ತು ಇಮ್ತಿಯಾಝ್ ಅವರನ್ನು ಸನ್ಮಾನಿಸಲಾಯಿತು. ವಾಲಿಬಾಲ್ ಹೋಬಳಿ ಮಟ್ಟದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಬಾಲಕಿಯರ ತಂಡ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಕುಲಾಲ್ ಅವರನ್ನು ಅಭಿನಂದಿಸಲಾಯಿತು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿವೇಕಾನಂದ ಎಲ್.ಸನಿಲ್, ಉಳ್ಳಾಲ ಮೆಸ್ಕಾಂ ಶಾಖಾಧಿಕಾರಿ ನಿತೇಶ್ ಹೊಸಗದ್ದೆ, ನಿವೃತ್ತ ಶಿಕ್ಷಕಿ ಶಕಿಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯ್ಸ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಖೈರುನ್ನಿಸಾ, ಮಾಜಿ ಅಧ್ಯಕ್ಷರಾದ ಅಬ್ಬಾಸ್ ಪಿಲಾರ್, ಅಬ್ದುಲ್ ರಹಿಮಾನ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶಾರದಾ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಸವಿತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ದುರ್ಗಲತಾ ಸನ್ಮಾನಿತರ ಹೆಸರು ವಾಚಿಸಿದರು. ಜಯಲಕ್ಷ್ಮೀ ವಂದಿಸಿದರು. ಶಾಂತಾ ಕಾರ್ಯಕ್ರಮ ನಿರೂಪಿಸಿದರು.
ಈ ವರ್ಷ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲಮಾಧ್ಯಮ ತರಗತಿ ಇರುವುದರಿಂದ ಎಂಟನೇ ತರಗತಿಯಲ್ಲೂ ಆಂಗ್ಲಮಾಧ್ಯಮ ಶಿಕ್ಷಣ ಅನಿವಾರ್ಯ. ಆದರೆ ಕೊಠಡಿಗಳ ಕೊರತೆ ಇದೆ, ಈ ನಿಟ್ಟಿನಲ್ಲಿ ಹೊಸ ಶೌಚಗೃಹ ನಿರ್ಮಾಣಗೊಂಡರೆ ಹಳೇ ಶೌಚಗೃಹವನ್ನು ತರಗತಿ ಕೊಠಡಿಯಾಗಿ ಬಳಸಲಾಗುವುದು. ಶೀಟ್ ಅಳವಡಿಸಿದರೆ ಅಕ್ಷರದಾಸೋಹಕ್ಕೆ ಸಹಕಾರಿ. ಸವಿತಾ ನಾಯಕ್ ಮುಖ್ಯಶಿಕ್ಷಕಿ, ಬಬ್ಬುಕಟ್ಟೆ ಸರ್ಕಾರಿ ಪ್ರೌಢಶಾಲೆ https://www.vijayavani.net/narayana-guru-jayanti-7 https://www.vijayavani.net/blood-donation-camp-at-farangipete