ಕರ್ಮಾರು ರಸ್ತೆ ಶೀಘ್ರ ದುರಸ್ತಿ : ಉಮಾನಾಥ ಕೋಟ್ಯಾನ್ ಮಾಹಿತಿ

New Project (38)
Published on

ಗುರುಪುರ: ರಾಜ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 60 ಕೋ.ರೂ.ವೆಚ್ಚದಲ್ಲಿ ನಿರ್ಮಿಸಲಾದ ಮಳವೂರು ನೂತನ ಸೇತುವೆ ಹಾಗೂ ಏರ್‌ಪೋರ್ಟ್ ಸಿ.ಸಿ ರಸ್ತೆಯನ್ನು ಶನಿವಾರ ಶಾಸಕ ಉಮಾನಾಥ ಕೋಟ್ಯಾನ್ ಲೋಕಾರ್ಪಣೆಗೊಳಿಸಿದರು.

ಸುಮಾರು 7 ತಿಂಗಳ ಹಿಂದೆ ವಾಹನ ಸಂಚಾರ ಆರಂಭಗೊಂಡಿದ್ದ ನೂತನ ಸೇತುವೆ ಶನಿವಾರ ಅಧಿಕೃತವಾಗಿ ಉದ್ಘಾಟಿಸಿದ ಶಾಸಕ ಕೋಟ್ಯಾನ್ ಮಾತನಾಡಿ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಗೆ ಮೇರೆಗೆ ಸೇತುವೆ ಲೋಕಾರ್ಪಣೆಗೊಳಿಸುತ್ತಿದ್ದೇವೆ. ಹೊಸ ಸೇತುವೆ ಪಕ್ಕದಲ್ಲಿರುವ ಹಳೇ ಸೇತುವೆ ದುರಸ್ತಿ ಕಾರ್ಯಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಅನುದಾನ ಬಿಡುಗಡೆಯಾಗುತ್ತಲೇ ಕಾಮಗಾರಿ ಆರಂಭವಾಗಲಿದೆ. ದುರಸ್ತಿ ಬಳಿಕ ಹಳೇ ಸೇತುವೆಯೂ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದರು.

ಮೂಡುಬಿದಿರೆ ರೈತ ಮೋರ್ಚಾದ ಅಧ್ಯಕ್ಷ ರಾಜೇಶ್ ಅಮೀನ್(ಆರ್‌ಕೆ), ಬಜ್ಪೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ಕೆಂಜಾರು, ಬಿಜೆಪಿ ಪ್ರಮುಖರಾದ ಸುಧಾಕರ ಕಾಮತ್, ಜೋಕಿಂ ಡಿ’ಕ್ರಾಸ್ತ, ದಿನೇಶ್ ಶೆಟ್ಟಿ, ಜಯಂತ್ ತೋಕೂರು, ಲೋಕೇಶ್ ಪೂಜಾರಿ ಬಜ್ಪೆ, ಅಭಿಲಾಷ್ ಶೆಟ್ಟಿ, ಸತೀಶ್ ದೇವಾಡಿಗ, ಸುಮಾ ಬಿ.ಶೆಟ್ಟಿ, ಸುಹಾಸಿನಿ, ಜಿತೇಶ್ ಕೆಂಜಾರು, ಉಮೇಶ್ ಪೂಜಾರಿ, ಪ್ರವೀಣ್ ಶೆಟ್ಟಿ ಕಟ್ಟಪುಣಿ, ಲಕ್ಷ್ಮಣ್ ಬಂಗೇರ ಮತ್ತು ನೂತನ ಸೇತುವೆ ನಿರ್ಮಾಣ ಕಂಪನಿ ಮೊಗರೋಡಿ ಕನ್‌ಸ್ಟ್ರಕ್ಷನ್‌ನ ಪ್ರಧಾನ ಇಂಜಿನಿಯರ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಗಣೇಶ್ ಅರ್ಬಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net