ನವದೆಹಲಿ : ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಹೆಸರನ್ನು ಬದಲಾಯಿಸುವ ಚೀನಾದ ಕ್ರಮವನ್ನು ಭಾರತ ಇಂದು (14) ತಿರಸ್ಕರಿಸಿದೆ. ಇಂತಹ ಯಾವುದೇ ಪ್ರಯತ್ನಗಳು ಸಫಲವಾಗುವುದಿಲ್ಲ. ಅರುಣಾಚಲ ಪ್ರದೇಶ ರಾಜ್ಯವು ನಮ್ಮ ಜೊತೆ ಇದೆ ಮತ್ತು ಎಂದಿಗೂ ಇರುತ್ತದೆ, ಈ ವಾಸ್ತವವನ್ನು ಬದಲಾಯಿಸಲಾಗದು ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಪ್ರಮುಖ ಸಚಿವ ಸಂಪುಟ ಸಭೆ; ಭದ್ರತೆ ಕುರಿತು ಚರ್ಚೆ| CCS
ಬೀಜಿಂಗ್ ದಕ್ಷಿಣ ಟಿಬೆಟ್‌ನ ಭಾಗವೆಂದು ಹೇಳಿಕೊಳ್ಳುವ ಪ್ರದೇಶವಾದ ಅರುಣಾಚಲ ಪ್ರದೇಶದ ಹಲವಾರು ಸ್ಥಳಗಳಿಗೆ ಚೀನಾದ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ನವದೆಹಲಿ ಈ ರೀತಿ ಪ್ರತಿಕ್ರಿಯೆ ನೀಡಿದೆ.
ಇದನ್ನೂ ಓದಿ: ಬೈಕ್ನಲ್ಲಿ 2 ವರ್ಷದ ಮಗಳನ್ನು ಕೂರಿಸಿಕೊಂಡು ಸುತ್ತಾಟ: ಈ ಡೆಲಿವರಿ ಏಜೆಂಟ್ ಕತೆ ಕೇಳಿದ್ರೆ ಮನಕಲಕುತ್ತೆ! Delivery agent
ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುವ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿದ್ದು, ಭಾರತದ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಹೆಸರಿಡಲು ಚೀನಾ ವ್ಯರ್ಥ ಮತ್ತು ಅಸಂಬದ್ಧ ಪ್ರಯತ್ನಗಳನ್ನು ಮುಂದುವರಿಸಿರುವುದನ್ನು ನಾವು ಗಮನಿಸಿದ್ದೇವೆ, ನಮ್ಮ ತತ್ವಬದ್ಧ ನಿಲುವಿಗೆ ಅನುಗುಣವಾಗಿ, ನಾವು ಅಂತಹ ಪ್ರಯತ್ನಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ ಎಂದು ಅವರು ಹೇಳಿದರು.
(ಏಜೆನ್ಸೀಸ್)
ಈ ದಿನಾಂಕಗಳಂದು ಜನಿಸಿದ ಮಹಿಳೆಯರು ತಮ್ಮ ಗಂಡಂದಿರಿಗೆ ಅದೃಷ್ಟ ತರುವ ದೇವತೆಯರಂತೆ! Numerology