ಕಲ್ಕತ್ತಾ: ಆಗಸ್ಟ್ 09ರಂದು ನಡೆದಿದ್ದ ಆರ್.ಜಿ.ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಯ ಕಿಚ್ಚು ಹೆಚ್ಚುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹ ಕೇಳಿ ಬರುತ್ತಿದೆ. ಇದೆಲ್ಲದರ ನಡುವೆ ಲೈಂಗಿಕ ಕಾರ್ಯಕರ್ತೆಯರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ವೇಳೆ ಕಾರ್ಯಕರ್ತೆಯೊಬ್ಬರು ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ.
ಪಶ್ಚಿಮ ಬಂಗಾಳದ ರಾಜಧಾನಿ ಕಲ್ಕತ್ತಾದ ಸೋನಗಾಚಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಲೈಂಗಿಕ ಕಾರ್ಯಕರ್ತೆಯೊಬ್ಬರು, ನಿಮಗೆ ತಡೆಯೋಕೆ ಆಗದೇ ಇರೋವಷ್ಟು ಕಾಮವಿದ್ದರೇ, ನಿಮಗಾಗಿಯೇ ಕೋಲ್ಕತ್ತಾದಲ್ಲಿ ದೊಡ್ಡ ರೆಡ್ ಲೈಟ್ ಏರಿಯಾ ಇದೆ. ಅಲ್ಲಿಗೆ ಬಂದು ನಿಮ್ ದಾಹ ಕಡಿಮೆ ಮಾಡಿಕೊಳ್ಳಿ. ಅಮಾಯಕ ಹೆಣ್ಣು ಮಕ್ಕಳ ತಂಟೆಗೆ ಹೋಗಬೇಡಿ ಎಂದು ವಿನಂತಿಸಿದ್ದಾರೆ.
ಇದನ್ಣೂ ಓದಿ: ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದಾಕೆ ಇಂದು ಪ್ರಭಾಸ್ ಚಿತ್ರಕ್ಕೆ ನಾಯಕಿ; ಅಷ್ಟಕ್ಕೂ ಯಾರೀ ಚೆಲುವೆ
ಇಲ್ಲಿ 20-50 ರೂಪಾಯಿಗೆ ಹುಡುಗಿಯರು ಸಿಗುತ್ತಾರೆ. ಅದು ಬಿಟ್ಟು ನೀವು ದುಡಿಯುತ್ತಿರುವ ಹೆಣ್ಣು ಮಕ್ಕಳ ಬಾಳನ್ನು ಹಾಳು ಮಾಡಬೇಡಿ. ಇನ್ನೂ ನೀವು ಹಣ ಪಾವತಿಸಿದರೇ ನಿಮ್ಮ ಲೈಂಗಿಕ ಬಯಕೆಗಳನ್ನು ಪೂರೈಸಲು ರೆಡ್ ಲೈಟ್ ಏರಿಯಾದಲ್ಲಿ ನಾವು ಸಿದ್ದರಾಗಿದ್ದೇವೆ. ಹಾಗಿದ್ದಾಗ ಕಾಮೋದ್ವೇಗದಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದಾಗಲಿ ಅಥವಾ ಅತ್ಯಾಚಾರ ಮಾಡುವುದಾಗಲಿ ಏಕೆ ಮಾಡುತ್ತೀರಾ.
ಇತ್ತ ಲೈಂಗಿಕ ಕಾರ್ಯಕರ್ತೆ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಆಕೆಯ ಹೇಳಿಕೆಯನ್ನು ಮೆಚ್ಚಿದ್ದಾರೆ. ಅತ್ಯಾಚಾರಿಗಳೇ ದಯವಿಟ್ಟು ಈಕೆಯಿಂದಾದರೂ ಕನಿಷ್ಠ ಮಾನವೀತೆಯನ್ನು ಕಲಿಯಿರಿ. ಈಕೆ ನಮ್ಮ ಸಮಾಜಕೆ ಹೀರೋ ಇದ್ದಂತೆ ಎಂದು ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.