ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡುತ್ತಿದ್ದಾಕೆ ಇಂದು ಪ್ರಭಾಸ್​ ಚಿತ್ರಕ್ಕೆ ನಾಯಕಿ; ಅಷ್ಟಕ್ಕೂ ಯಾರೀ ಚೆಲುವೆ

Imanvi
Published on

ಹೈದರಾಬಾದ್​: ಕಲ್ಕಿ ಯಶಸ್ಸಿನಲ್ಲಿ ತೇಲುತ್ತಿರುವ ನಟ ಪ್ರಭಾಸ್​ ಅವರ ಹೊಸ ಮೂವಿ ಇತ್ತೀಚಿಗೆ ಸೆಟ್ಟೇರಿದ್ದು, ಈ ಚಿತ್ರಕ್ಕೆ ಸೀತಾ ರಾಮಂ ಖ್ಯಾತಿಯ ಹನು ರಾಘವಪುಡಿ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. 1940ರ ಕಾಲಘಟ್ಟದಲ್ಲಿ ನಡೆಯಲಿರುವ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದ್ದು, ಈ ಚಿತ್ರಕ್ಕೆ ಇನ್​ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಸಾಮಾನ್ಯವಾಗಿ ಪ್ರಭಾಸ್​ ಸಿನಿಮಾ ಸೆಟ್ಟೇರುತ್ತಿದೆ ಎಂದರೆ ಬಾಲಿವುಡ್​, ಟಾಲಿವುಡ್​ನ ಸ್ಟಾರ್​ ಹೀರೋಯಿನ್ಸ್ ಹೆಸರು ಮೊದಲಿಗೆ ಕೇಳಿ ಬರುತ್ತದೆ. ದೀಪಿಕಾ ಪಡುಕೋಣೆ, ಕೃತಿ ಸನೊನ್, ಶ್ರದ್ಧಾ ಕಪೂರ್, ದಿಶಾ ಪಟಾನಿ, ಪೂಜಾ ಹೆಗ್ಡೆ ಇದೇ ಮೊದಲ ಬಾರಿಗೆ ಇನ್​ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಯನ್ನು ನಾಯಕಿಯನ್ನಾಗಿ ಹಾಕಿಕೊಳ್ಳಲಾಗಿದೆ. ಅಂದಹಾಗೆ ಯಾರು ಈ ಯುವತಿ? ಈಕೆಯನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂಬ ವಿಚಾರ ಎಲ್ಲರ ತಲೆಕೆಡಿಸುತ್ತಿದೆ.

ಹನು ರಾಘವಪುಡಿ, ಪ್ರಭಾಸ್​ ಕಾಂಬಿನೇಷನ್​ನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಚೆಲುವೆಯ ಹೆಸರು ಇಮಾನ್ ಇಸ್ಮಾಯಿಲ್ ಅಕಾ ಇಮಾನ್ವಿ ಎಂದು ತಿಳಿದು ಬಂದಿದೆ. ಇಮಾನ್ವಿ ಈ ವರೆಗೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಬಹಳ ಒಳ್ಳೆಯ ಡ್ಯಾನ್ಸರ್ ಆಗಿರುವ ಇಮಾನ್ವಿ, ಇನ್​ಸ್ಟಾಗ್ರಾಂ, ಯೂಟ್ಯೂಬ್​ಗಳಲ್ಲಿ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಅಪ್​ಲೋಡ್ ಮಾಡುತ್ತಿರುತ್ತಾರೆ. ಇದೀಗ ಪ್ರಭಾಸ್​ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿರುವ ಇಮಾನ್ವಿ ಕ್ರೇಜ್​ ಹೆಚ್ಚುತ್ತಿದ್ದು, ಫಾಲೋವರ್ಸ್​ ಸಂಖ್ಯೆ ಏಕಕಾಲದಲ್ಲಿ ಡಬಲ್​ ಆಗಿದೆ.

Prabhas Imanvi

ಇಮಾನ್ವಿ, ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದ ‘ತಾಲ್’ ಸಿನಿಮಾದ ರಮ್ತಾ ಜೋಗಿ, ಎನಿಮಿ ಚಿತ್ರದ ತುಮ್​ ತುಮ್​​ ಹಾಡಿಗೆ ಡ್ಯಾನ್ಸ್ ಮಾಡಿದ್ದ ಅವರ ವಿಡಿಯೋ ಬಹಳ ವೈರಲ್ ಆಗಿತ್ತು. ಸ್ವತಃ ಕೊರಿಯೋಗ್ರಾಫರ್​ ಆಗಿರುವ ಇಮಾನ್ವಿ ಲಾಸ್ ಏಂಜಲ್ಸ್​ನಲ್ಲಿ ಒಂದು ಡ್ಯಾನ್ಸ್​ ಸ್ಕೂಲ್​ ಹಾಗೂ ಟ್ರೂಪ್​ಅನ್ನು ಹೊಂದಿದ್ದಾರೆ. ಭರತನಾಟ್ಯ, ಕುಚುಪುಡಿ ಸೇರಿದಂತೆ ಹಲವು ಮಾದರಿಯ ನೃತ್ಯ ಪ್ರಾಕಾರಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಇದಲ್ಲದೆ ಅವರು ವಿದೇಶಗಳಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಹನು ರಾಘವಪುಡಿ ನಿರ್ದೇಶನದ ಈ ಚಿತ್ರವು 1940ರ ಕಾಲಘಟ್ಟದಲ್ಲಿ ನಡೆಯುತ್ತದೆ ಎಂದು ಹೇಳಲಾಗಿದ್ದು, ಈ ಚಿತ್ರದಲ್ಲಿ ಇಮಾನ್ವಿ ನೃತ್ಯಗಾರ್ತಿ ಆಗಿರುತ್ತಾರೆ. ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡುವ ಮುನ್ನ ಹಲವು ಬಾರಿ ಸ್ಕ್ರೀನ್​ ಟೆಸ್ಟ್​ ಮಾಡಲಾಗಿದ್ದು, ಅಂತಿಮವಾಗಿ ಇಮಾನ್ವಿ ಅವರನ್ನು ನಿರ್ದೇಶಕರು ಓಕೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net