ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ; ಖಳನಾಯಕ ಪಾತ್ರಕ್ಕೆ 200 ಕೋಟಿ ಸಂಭಾವನೆ ಪಡೆದ ಕನ್ನಡದ ನಟ!

dk (17) (1)
Published on

ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಖಳನಾಯಕ ಪಾತ್ರಕ್ಕಾಗಿ ಮೊದಲ ಬಾರಿಗೆ ಬರೊಬ್ಬರಿ 200 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ಕನ್ನಡದ ಸ್ಟಾರ್​ ಇದೀಗ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಚಿತ್ರರಂಗದಲ್ಲಿ ಸಾಮಾನ್ಯವಾಗಿ ಬಿ-ಟೌನ್​​ ಮಂದಿಯೇ ಅತಿಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಬಳಿಕ ಸೌತ್​ ಸ್ಟಾರ್​ಗಳಾದ ರಜನಿಕಾಂತ್​, ಕಮಲ್​ ಹಾಸನ್​​ ಮತ್ತು ಪ್ರಭಾಸ್​ ಸೇರಿದಂತೆ ಹಲವು ನಟರು ದುಪಟ್ಟು ಸಂಭಾವನೆ ಪಡೆಯುತ್ತಿರುವುದು ವರದಿಯಾಗಿದೆ. ಇದೀಗ ಬಾಲಿವುಡ್​ನ ಶಾರುಖ್​ ಖಾನ್​, ಸಲ್ಮಾನ್​, ರಣಬೀರ್ ಕಪೂರ್​ ಸೇರಿದಂತೆ ದಕ್ಷಿಣ ನಟರ ಸಂಭಾವಯನ್ನು ಮೀರಿಸಿ ನಮ್ಮ ಕನ್ನಡ ನಟ ಇತಿಹಾಸ ಬರೆದಿದ್ದಾರೆ.

ಹೌದು, ಅವರು ಬೇರೆ ಯಾರು ಅಲ್ಲ, ನಮ್ಮ ಚಿತ್ರರಂಗದ ಖ್ಯಾತಿಯನ್ನು ವಿಶ್ವಾದ್ಯಂತ ಪಸರಿಸಿದ ಕೆಜಿಎಫ್​ ಖ್ಯಾತಿ ರಾಕಿಂಗ್​ಸ್ಟಾರ್​ ಯಶ್​. ಬಾಲಿವುಡ್​ನ ನಿತೇಶ್​ ತಿವಾರಿ ನಿರ್ದೇಶದಲ್ಲಿ ಮೂಡಿ ಬರುತ್ತಿರುವ ರಾಮಾಯಣದಲ್ಲಿ ಚಿತ್ರದಲ್ಲಿ ಯಶ್​ ಖಳನಾಯಕನ(ರಾವಣ) ಪಾತ್ರ ನಿರ್ವಹಿಸುತ್ತಿದ್ದು, ಈ ಪಾತ್ರಕ್ಕೆ ಬರೊಬ್ಬರಿ 200 ಕೋಟಿ ರೂ. ಸಂಭಾವನೆ(ವಿತರಣೆಯ ಪಾಲು ಮತ್ತು ಸಿನಿಮಾದ ಶುಲ್ಕ) ಇದೆ ಎಂದು ವರದಿಯಾಗಿದೆ. ಅಲ್ಲದೇ, ಈ ಚಿತ್ರದಲ್ಲಿನ ರಾಮನ ಪಾತ್ರಧಾರಿ ರಣಬೀರ್​ ಕಪೂರ್​ಗಿಂತ ದುಪಟ್ಟು ಎಂದು ಹೇಳಲಾಗುತ್ತಿದೆ.

ಪ್ರಭಾಸ್​ ನಟನೆಯ ಕಲ್ಕಿ 2898AD ಚಿತ್ರದಲ್ಲಿ ಕಮಲ್​ ಹಾಸನ್ ಅತಿಥಿ ಪಾತ್ರಕ್ಕೆ 25ರಿಂದ 40 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

200 ಕೋಟಿ. ರೂ ಗಡಿದಾಟಿದ ಯಶ್​!

ಭಾರತೀಯ ಚಿತ್ರರಂಗದಲ್ಲಿ ಒಂದೇ ಚಿತ್ರಕ್ಕೆ ಮೂವರೂ ನಟರಾದ ಅಲ್ಲು ಅರ್ಜುನ್​, ರಜನಿಕಾಂತ್​​ ಮತ್ತು ವಿಜಯ್​ 200 ಕೋಟಿ ರೂ ಪಡೆದಿದ್ದಾರೆ. ಆದರೆ, ಖಳನಾಯಕ ಪಾತ್ರಕ್ಕೆ ಇದೇ ಮೊದಲ ಬಾರಿಗೆ 200 ಕೋಟಿ ರೂ. ಮೊತ್ತ ಯಶ್​ ಪಡೆಯುತ್ತಿದ್ದಾರೆ. ಇನ್ನು ಬಿ-ಟೌನ್​ ವಿಷಯಕ್ಕೆ ಬರುವುದಾರೆ ಜವಾನ್​ ಚಿತ್ರದ ಬಳಿಕ ಶಾರುಖ್​ ಖಾನ್​ ಪ್ರತಿಚಿತ್ರಕ್ಕೆ 150 ಕೋಟಿ ರೂ. ಪಡೆಯುತ್ತಿದ್ದಾರೆ. ಸಲ್ಮಾನ್​ ಖಾನ್​ ಕೂಡ ಇದೇ ಮೊತ್ತವನ್ನು ಪಡೆಯುತ್ತಿದ್ದಾರೆ. 2017ರಿಂದ ಅಮೀರ್​ ಖಾನ್​ ಕೂಡ 200 ಕೋಟಿ ರೂ.ಗಡಿ ದಾಟುತ್ತಿಲ್ಲ. ಇತ್ತ ಸೌತ್​ ಸ್ಟಾರ್​ ಪ್ರಭಾಸ್​ ಕೂಡ 120-150 ಕೋಟಿ ರೂ. ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net