ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು ಇಷ್ಟಪಡುವುದು ಸಹಜ. ಅದೇ ಹೋಟೆಲ್ ಮಾದರಿಯೇ ಡಿಫರೆಂಟ್ ಟೇಸ್ಟಿ ರೆಸಿಪಿ ಮನೆಯಲ್ಲೇ ಮಾಡಿದರೆ ಎಲ್ಲರೂ ಸಂತೋಷದಿಂದ ಸವಿಯುತ್ತಾರೆ. ಪನೀರ್ ಕುರಿತು ಹೇಳುವ ಅಗತ್ಯವೇ ಇಲ್ಲ, ಕಿರಿಯರಿಂದ ಹಿರಿಯರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. (Recipe)
ಇದನ್ನು ಓದಿ: ಕ್ಯಾರೆಟ್ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್ ವಿಧಾನ | Recipe
ಪನೀರ್ ಬಿರಿಯಾನಿ, ಪನೀರ್ ಫ್ರೈ, ಪನೀರ್ ತಡಕಾ ಮಾಡಿರುತ್ತೀರಿ. ಇಲ್ಲಿ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಪನೀರ್ ಅಮೃತಸರಿ ಮಾಡುವುದೇಗೆ ಎಂಬುದನ್ನು ತಿಳಿಸಿದ್ದೇವೆ. ಇದು ರುಚಿಕರವಾದ ಹಾಗೂ ಕಡಿಮೆ ಸಮಯದಲ್ಲಿ ಸಿದ್ಧವಾಗುತ್ತದೆ. ಅಷ್ಟೇ ಅಲ್ಲ ಇದರ ರುಚಿ ಹೋಟೆಲ್ ಮಾದರಿಯಲ್ಲೇ ಇರುತ್ತದೆ. ಆದರೆ ಅದನ್ನು ಮಾಡುವ ಸರಿಯಾದ ಮಾರ್ಗ ತಿಳಿದಿರಬೇಕು ಅಷ್ಟೆ.
ಪನೀರ್ ಅಮೃತಸರಿ ಮಾಡಲು ಬೇಕಾಗುವ ಪದಾರ್ಥಗಳು
- 250 ಗ್ರಾಂ ಪನೀರ್
- ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ
- ಎರಡು ಟೊಮೆಟೊ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಹಸಿರು ಮೆಣಸಿನಕಾಯಿಗಳು
- ಗೋಡಂಬಿ
- ಒಣದ್ರಾಕ್ಷಿ
- ಅರಿಶಿನ ಪುಡಿ
- ಚಿಲ್ಲಿ ಪೌಡರ್
- ಗರಂ ಮಸಾಲ
- ಧನಿಯಾ ಪುಡಿ
- ನಿಮ್ಮ ಆಯ್ಕೆಯ ಪ್ರಕಾರ ಮಸಾಲೆಗಳು
- ಮೂರು ಚಮಚ ಅಡುಗೆ ಎಣ್ಣೆ
- ಒಂದು ಚಮಚ ತುಪ್ಪ,
- ಕತ್ತರಿಸಿದ ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಷ್ಟು ಉಪ್ಪು
ಪನೀರ್ ಅಮೃತಸರಿ ಮಾಡುವ ವಿಧಾನ
ಪನೀರ್ ಅಮೃತಸರಿ ಮಾಡಲು ಮೊದಲಿಗೆ ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಬೇಕು. ಕಾದಿರುವ ಎಣ್ಣೆಗೆ ಈರುಳ್ಳಿ ಹಾಕಿ ತಿಳಿ ಚಿನ್ನದ ಬಣ್ಣಕ್ಕೆ ತಿರುಗಿದಾಗ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷ ಚೆನ್ನಾಗಿ ಹುರಿಯಿರಿ. ಈಗ ಟೊಮೆಟೊ, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಚಿಲ್ಲಿ ಪೌಡರ್, ಧನಿಯಾ ಪುಡಿ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಟೊಮೆಟೊ ಮೃದುವಾಗುವವರೆಗೆ ಬೇಯಿಸಿ.
ಈಗ ಅದಕ್ಕೆ ಗೋಡಂಬಿ ಮತ್ತು ಒಣದ್ರಾಕ್ಷಿ ಸೇರಿಸಿ 2 ನಿಮಿಷ ಹುರಿಯಿರಿ. ನಿಮ್ಮ ಗ್ರೇವಿ ಸಿದ್ಧವಾದ ತಕ್ಷಣ ಪನೀರ್ ತುಂಡುಗಳು, ಗರಂ ಮಸಾಲ ಮತ್ತು ನಿಮ್ಮ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಿಡಿ. ಮೂರ್ನಾಲ್ಕು ನಿಮಿಷಗಳ ನಂತರ ಪನೀರ್ ಮೃದುವಾದಾಗ ಅದಕ್ಕೆ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ನೀವು ಅದನ್ನು ಒಂದು ಬಟ್ಟಲಿನಲ್ಲಿ ತೆಗೆದು ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬಡಿಸಬಹುದು.
ಬಿಸಿ ರೋಟಿ, ಪರಾಠ ಅಥವಾ ನಾನ್ ಜತೆ ಇದನ್ನು ತಿನ್ನಬಹುದು. ಇದರ ರುಚಿ ನಿಮಗೆ ಹೋಟೆಲ್‌ನಂತೆ ಭಾಸವಾಗುತ್ತದೆ. ಇಷ್ಟು ಮಾತ್ರವಲ್ಲದೆ ಮನೆಗೆ ಅತಿಥಿಗಳು ಬಂದಿದ್ದರೂ ಸಹ ನೀವು ಈ ರೆಸಿಪಿಯನ್ನು ಅನುಸರಿಸಿ ಇದನ್ನು ತಯಾರಿಸಿ ಅವರಿಗೆ ಬಡಿಸಬಹುದು.
ಮನೆಯಲ್ಲೇ ಥಟ್ ಅಂಥಾ ಮಾಡಿ ರಾಜಸ್ಥಾನಿ ಮಿರ್ಚಿ ವಡಾ; ಇಲ್ಲಿದೆ ಸಿಂಪಲ್ ವಿಧಾನ | Recipe