ಅನೇಕರು ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಾರೆ. ಹೀಗಿರುವಾಗ ಮಳೆಗಾಲದಲ್ಲಿ ಸಾಯಂಕಾಲ ಚಹಾದ ಜತೆ ಏನಾದರೂ ಖಾರ ಸಿಕ್ಕರೆ ಮಜಾ. ನೀವು ಸಹ ಇದೇ ರೀತಿಯ ಏನನ್ನಾದರೂ ಮಾಡಲು ಯೋಚಿಸುತ್ತಿದ್ದರೆ ಇಲ್ಲಿದೆ ಸ್ಪೆಷಲ್ ರಾಜಾಸ್ತಾನಿ ರೆಸಿಪಿ(Recipe).
ಇದನ್ನು ಓದಿ: ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್ ವಿಧಾನ | Recipe
ರಾಜಸ್ಥಾನಿ ಮಿರ್ಚಿ ವಡಾ, ತಿನ್ನಲು ತುಂಬಾ ರುಚಿಯಾಗಿದೆ, ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತದೆ. ಅಂತಹ ವಿಶೇಷವಾದ ರೆಸಿಪಿಯನ್ನು ಇಲ್ಲಿ ಹೇಳುತ್ತಿದ್ದೇವೆ. ನೀವು ಸಂಜೆ ಚಹಾದೊಂದಿಗೆ ತಯಾರಿಸಬಹುದು. ನಿಮ್ಮ ಅತಿಥಿಗಳಿಗೂ ಬಹಳ ಇಷ್ಟವಾಗುವಂತ ತಿನಿಸು ಇದುರ. ಇಲ್ಲಿದೆ ಅದನ್ನು ಮಾಡುವ ಸಿಂಪಲ್ ವಿಧಾನ.
ರಾಜಸ್ಥಾನಿ ಮಿರ್ಚಿ ವಡಾ ಮಾಡಲು ಬೇಕಾಗುವ ಪದಾರ್ಥಗಳು
- 10 ರಿಂದ 12 ಉದ್ದದ ಹಸಿರು ಮೆಣಸಿನಕಾಯಿಗಳು
- ಎರಡು ಬೇಯಿಸಿದ ಆಲೂಗಡ್ಡೆ
- ಎರಡು ಕಪ್ ಕಡ್ಲೆಹಿಟ್ಟು
- ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
- ಮೆಂತೆ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಇಂಗು
- ಸಣ್ಣಗೆ ಹಚ್ಚಿದ ಹಸಿರು ಮೆಣಸಿನಕಾಯಿಗಳು
- ಕೆಂಪು ಮೆಣಸಿನ ಪುಡಿ
- ಧನಿಯಾ ಪುಡಿ
- ಅರಿಶಿನ ಪುಡಿ
- ಗರಂ ಮಸಾಲ
- ರುಚಿಗೆ ತಕ್ಕಷ್ಟು ಉಪ್ಪು
- ಕರಿಯಲು ಅಡುಗೆ ಎಣ್ಣೆ
ರಾಜಸ್ಥಾನಿ ಮಿರ್ಚಿ ವಡಾ ಮಾಡುವ ವಿಧಾನ
ರಾಜಸ್ಥಾನಿ ಮಿರ್ಚಿ ವಡಾ ಮಾಡಲು ನೀವು ಮೊದಲು ಹಸಿರು ಮೆಣಸಿನಕಾಯಿಯನ್ನು ತೊಳೆದು ಮಧ್ಯದಲ್ಲಿ ಸೀಳು ಮಾಡಬೇಕು. ಈಗ ಅದರೊಳಗಿರುವ ಬೀಜಗಳನ್ನು ಹೊರತೆಗೆಯಿರಿ. ಈಗ ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು ತೆಗೆದುಕೊಂಡು ಅದಕ್ಕೆ ಬೇಯಿಸಿದ ಆಲೂಗಡ್ಡೆ, ಹಸಿರು ಕೊತ್ತಂಬರಿ ಸೊಪ್ಪು, ಪುದೀನಾ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಮಸಾಲೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್‌ನ ಸಹಾಯದಿಂದ ಸಣ್ಣ ಟಿಕ್ಕಿಗಳನ್ನು ಮಾಡಿ ಅದನ್ನು ಹಸಿರು ಮೆಣಸಿನಕಾಯಿ ಒಳಗೆ ತುಂಬಿಸಿ.
ಇದರ ನಂತರ ಕಡ್ಲೆಹಿಟ್ಟನ್ನು ತೆಗೆದುಕೊಳ್ಳಿ, ಸ್ವಲ್ಪ ಸಣ್ಣಗೆ ಕತ್ತರಿಸಿದ ಚಿಲ್ಲಿ ಪೌಡರ್, ಉಪ್ಪು, ಚಿಟಿಕೆ ಅರಿಶಿನ, ಒಂದು ಚಮಚ ಎಣ್ಣೆ ಮತ್ತು ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಸಿದ್ಧಪಡಿಸಕೊಳ್ಳಿ. ಈಗ ತುಂಬಿದ ಮೆಣಸಿನಕಾಯಿಯನ್ನು ಅದರೊಳಗೆ ಅದ್ದಿ ಬಾಣಲೆಯಲ್ಲಿ ಬಿಸಿಯಾಗಿರುವ ಎಣ್ಣೆಗೆ ಹಾಕಿ ಫ್ರೈ ಮಾಡಿ. ಇದು ಗೋಲ್ಡನ್ ಆಗಲು ಪ್ರಾರಂಭಿಸಿದಾಗ, ಅದನ್ನು ಎಣ್ಣೆಯಿಂದ ಹೊರತೆಗೆಯಿರಿ, ತಟ್ಟೆಯಲ್ಲಿ ಇರಿಸಿ ಮತ್ತು ಚಟ್ನಿ ಅಥವಾ ಮೊಸರಿನೊಂದಿಗೆ ಬಡಿಸಿ. ಆದರೆ ಈ ರಾಜಸ್ಥಾನಿ ಮಿರ್ಚಿ ವಡಾವನ್ನು ಮಸಾಲೆ ಇಷ್ಟಪಡುವವರಿಗೆ ಮಾತ್ರ ಬಡಿಸಬೇಕು ಎಂಬುದನ್ನು ನೆನಪಿನಲ್ಲಿಡಿ.
ಮನೆಯಲ್ಲಿಯೇ ಮಾಡಿ ರುಚಿಕರ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ತಯಾರಿಸುವ ವಿಧಾನ | Recipe