ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಆಹಾರದ ರುಚಿಯ ಜತೆಗೆ ಆರೋಗ್ಯಕವೂ ಆಗಿರುವ ಉಪ್ಪಿನಕಾಯಿ ಮಾಡಿದರೆ ಎಲ್ಲರೂ ಖುಷಿಯಿಂದ ಸವಿಯುತ್ತಾರೆ. ಉಪ್ಪಿನಕಾಯಿಯಲ್ಲಿ ಹಲವು ವಿಧಗಳಿದ್ದರೂ ಇಲ್ಲಿ ತಿಳಿಸಿರುವುದು ವಿಶೇಷವಾಗಿದೆ. (Recipe)
ಇದನ್ನು ಓದಿ: Recipe | ಫಟಾಫಟ್ ಮನೆಯಲ್ಲೆ ಮಾಡಿ ಬನಾರಸ್ನ ಫೇಮಸ್ ಟೊಮೆಟೊ ಚಾಟ್; ಇಲ್ಲಿದೆ ಸಿಂಪಲ್ ವಿಧಾನ
ಅಷ್ಟೇ ಅಲ್ಲ ಈ ಉಪ್ಪಿನಕಾಯಿ ಸೇವನೆಯು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಉಪ್ಪಿನಕಾಯಿ ತುಂಬಾ ರುಚಿಯಾಗಿರುತ್ತದೆ ಕೆಲವರು ಇದನ್ನು ನೇರವಾಗಿ ಆಹಾರದೊಂದಿಗೆ ತಿನ್ನುತ್ತಾರೆ. ನಾವಿಲ್ಲಿ ಹೇಳುತ್ತಿರುವುದು ಹಾಗಲಕಾಯಿ ಉಪ್ಪಿನಕಾಯಿ ಬಗ್ಗೆ. ಹಾಗಲಕಾಯಿ ಎಂದರೆ ಮೂಗು ಮುರಿಯುವವರೆ ಹೆಚ್ಚು, ಹಾಗಲಕಾಯಿಯನ್ನು ತಿನ್ನಲು ತುಂಬಾ ಕಹಿಯಾಗಿರುತ್ತದೆ. ಆದರೆ ಇದರ ಉಪ್ಪಿನಕಾಯಿ ಆಹಾರವನ್ನು ರುಚಿಕರವಾಗಿ ಮಾಡುತ್ತದೆ. ಮಧುಮೇಹಿಗಳು ಹಾಗಲಕಾಯಿ ಉಪ್ಪಿನಕಾಯಿಯನ್ನು ಸೇವಿಸಿದರೆ ಅವರ ಸಕ್ಕರೆಯ ಮಟ್ಟವು ಸಮನಾಗಿ ಉಳಿಯುತ್ತದೆ. ಹಾಗಲಕಾಯಿ ಉಪ್ಪಿನಕಾಯಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಿದ್ದೇವೆ.
ಹಾಗಲಕಾಯಿ ಉಪ್ಪಿನಕಾಯಿ ಮಾಡಲು ಬೇಕಾಗುವ ಪದಾರ್ಥಗಳು
- 1 ಕೆಜಿ ಹಾಗಲಕಾಯಿ (ಸಣ್ಣ ತುಂಡುಗಳಾಗಿ ಕತ್ತರಿಸಿ)
- ಎರಡು ಕಪ್ ಸಾಸಿವೆ ಎಣ್ಣೆ
- ಒಂದು ಕಪ್ ಮೆಂತ್ಯ ಕಾಳು
- ಒಂದು ಕಪ್ ಸಾಸಿವೆ
- ಕೆಂಪು ಮೆಣಸಿನ ಪುಡಿ
- ಒಂದು ಚಮಚ ಜೀರಿಗೆ
- ಕೊತ್ತಂಬರಿ ಸೊಪ್ಪು
- ಚಿಟಿಕೆ ಇಂಗು
- ರುಚಿಗೆ ತಕ್ಕಂತೆ ಉಪ್ಪು
- ಒಂದು ಕಪ್ ನಿಂಬೆ ರಸ
- ಎರಡರಿಂದ ಮೂರು ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ
ಹಾಗಲಕಾಯಿ ಉಪ್ಪಿನಕಾಯಿ ಮಾಡುವ ವಿಧಾನ
ಹಾಗಲಕಾಯಿ ಉಪ್ಪಿನಕಾಯಿ ಮಾಡಲು ನೀವು ಮೊದಲು ಮಸಾಲೆಗಳನ್ನು ತಯಾರಿಸಬೇಕು. ಇದಕ್ಕಾಗಿ ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಮೆಂತ್ಯ, ಸಾಸಿವೆ, ಜೀರಿಗೆ, ಕೊತ್ತಂಬರಿ ಸೊಪ್ಪು ಹಾಕಿ ಹೊಂಬಣ್ಣಕ್ಕೆ ಬರಲು ಬಿಡಿ. ಈಗ ಹುರಿದ ಮಸಾಲೆಯನ್ನು ತಣ್ಣಗಾಗಿಸಿ ಮತ್ತು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ಉಪ್ಪಿನಕಾಯಿ ಮಿಶ್ರಣವನ್ನು ತಯಾರಿಸಿ, ಇದಕ್ಕಾಗಿ ನೀವು ದೊಡ್ಡ ಬಟ್ಟಲಿನಲ್ಲಿ ಕತ್ತರಿಸಿದ ಹಾಗಲಕಾಯಿಯನ್ನು ತೆಗೆದುಕೊಂಡು, ಉಪ್ಪು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಇಂಗು, ನಿಂಬೆ ರಸ ಹಾಕಿ ಜತೆಗೆ ಮಿಕ್ಸಿಯಲ್ಲಿ ರುಬ್ಬಿದ ಮಿಶ್ರಣವನ್ನು ಸೇರಿಸಿ ಎಲ್ಲಾ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದೆಲ್ಲವೂ ಚೆನ್ನಾಗಿ ಮಿಶ್ರಣವಾದಾಗ ಅದನ್ನು ಶುದ್ಧ ಗಾಜಿನ ಜಾರ್ನಲ್ಲಿ ಸಂಗ್ರಹಿಸಿ. ಆ ಗಾಜಿನ ಜಾರ್ ಅನ್ನು 2 ರಿಂದ 3 ದಿನಗಳವರೆಗೆ ಸೂರ್ಯನ ಬೆಳಕಿನಲ್ಲಿ ಇರಿಸಬಹುದು. ಈಗ ನಿಮ್ಮ ಹಾಗಲಕಾಯಿ ಉಪ್ಪಿನಕಾಯಿ ಸವಿಯಲು ಸಿದ್ಧವಾಗಿದೆ.
ಮನೆಯಲ್ಲೇ ಮಾಡಿ ಟೇಸ್ಟಿ ಸ್ಪೈಸಿ ಬಟರ್ ಕಿಚಡಿ; ಇಲ್ಲಿದೆ ಸಿಂಪಲ್ ವಿಧಾನ | Recipe