ಪ್ರತಿ ಬಾರಿ ಮನೆಯಲ್ಲಿ ಸಿಂಪಲ್ ಕಿಚಡಿ ತಿಂದು ಬೇಜಾರಾಗಿದ್ಯಾ. ವಿಶೇಷ ರೀತಿಯ ಹೋಟೆಲ್ ಸ್ಟೈಲ್ ಟೇಸ್ಟಿ ಸ್ಪೈಸಿ ಬಟರ್ ಖಿಚಡಿ ತಯಾರಿಸುವ ಸಿಂಪಲ್ ವಿಧಾವನ್ನು ಇಲ್ಲಿ ತಿಳಿಸಲಾಗಿದೆ. ಬಟರ್ ಕಿಚಡಿ ಎಂದರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ಖಾದ್ಯ. ಮಳೆಗಾಲದಲ್ಲಿ ಮತ್ತು ಚಳಿಗಾಳದಲ್ಲಿ ಥಟ್ ಅಂಥಾ ಮಾಡಿ ಈ ಬಟರ್ ಕಿಚಿಡಿ ಎಲ್ಲರಿಗೂ ಇಷ್ಟವಾಗುತ್ತದೆ.(Recipe)
ಇದನ್ನು ಓದಿ: Recipe | ಫಟಾಫಟ್ ಮನೆಯಲ್ಲೇ ಮಾಡಿ ಸಿಹಿಗೆಣಸಿನ ಚಾಟ್; ಖ್ಯಾತ ಶೆಫ್ ಅವರ ರೆಸಿಪಿ ನಿಮಗಾಗಿ
ಬಟರ್ ಕಿಚಡಿಗೆ ಬೇಕಾಗುವ ಪದಾರ್ಥಗಳು
- 1 ಕಪ್ ಹೆಸರು ಬೇಳೆ
- 1 ಕಪ್ ಅಕ್ಕಿ
- 2-3 ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ
- 1 ಇಂಚು ತುರಿದ ಶುಂಠಿ
- 1 ಟೀಸ್ಪೂನ್ ಜೀರಿಗೆ
- ಚಿಟಿಕೆ ಇಂಗು
- 1 ಟೀಸ್ಪೂನ್ ಅರಿಶಿನ ಪುಡಿ
- 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
- 1 ಟೀಸ್ಪೂನ್ ಧನಿಯಾ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- 2-3 ಟೇಬಲ್ ಸ್ಪೂನ್ ತುಪ್ಪ
- ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು
- ನಿಂಬೆ ರಸ
ಟೇಸ್ಟಿ ಬಟರ್ ಕಿಚಡಿ ಮಾಡುವ ವಿಧಾನ
ಟೇಸ್ಟಿ ಬಟರ್ ಕಿಚಡಿ ಮಾಡಲು ನೀವು ಮೊದಲು ಹೆಸರು ಬೇಳೆ ಮತ್ತು ಅಕ್ಕಿ ಎರಡನ್ನೂ ಶುದ್ಧ ನೀರಿನಿಂದ ಎರಡರಿಂದ ಮೂರು ಬಾರಿ ತೊಳೆಯಬೇಕು. ಇದರ ನಂತರ ಈ ಎರಡೂ ವಸ್ತುಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿ. ಈಗ ನೆನೆಸಿದ ಉದ್ದಿನಬೇಳೆ ಮತ್ತು ಅಕ್ಕಿಯನ್ನು ಕುಕ್ಕರ್‌ನಲ್ಲಿ ಹಾಕಿ. ಇದರ ನಂತರ ಕುಕ್ಕರ್‌ನಲ್ಲಿ ನಿಮ್ಮ ರುಚಿಗೆ ತಕ್ಕಂತೆ ಅರಿಶಿನ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ, ಉಪ್ಪು ಮತ್ತು ಇತರ ಮಸಾಲೆಗಳನ್ನು ಸೇರಿಸಿ. ಅದರಲ್ಲಿ ನೀರಿನ ಪ್ರಮಾಣ ಸ್ವಲ್ಪ ಹೆಚ್ಚಿರಬೇಕು.
ಕುಕ್ಕರ್‌ನಿಂದ ಮೂರ್ನಾಲ್ಕು ಸೀಟಿಗಳು ಬಂದಾಗ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಅದರಲ್ಲಿ ಜೀರಿಗೆ ಮತ್ತು ಇಂಗು ಸೇರಿಸಿ. ಜೀರಿಗೆ ಚೆನ್ನಾಗಿ ಸಿಡಿಯುವಾಗ ಅದಕ್ಕೆ ಹಸಿಮೆಣಸಿನಕಾಯಿ ಮತ್ತು ತುರಿದ ಶುಂಠಿಯನ್ನು ಸೇರಿಸಿ. ನೀವು ಬಯಸಿದರೆ ನೀವು ಅದರಲ್ಲಿ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಅಥವಾ ಟೊಮೆಟೊಗಳನ್ನು ಕೂಡ ಸೇರಿಸಬಹುದು. ಇದನ್ನು ಈಗ ಕುಕ್ಕರ್‌ನಲ್ಲಿರುವ ಅನ್ನದ ಜತೆಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನೆನಪಿನಲ್ಲಿಡಿ: ಈ ಕಿಚಡಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಮತ್ತು ಬಡಿಸಿ. ಕಿಚಡಿಯನ್ನು ಹೆಚ್ಚು ರುಚಿಕರವಾಗಿಸಲು ನೀವು ಬಯಸಿದರೆ ನಿಮ್ಮ ಆಯ್ಕೆಯ ಪ್ರಕಾರ ನೀವು ಕೆಲವು ತರಕಾರಿಗಳನ್ನು ಸೇರಿಸಬಹುದು. ರುಚಿ ಮತ್ತಷ್ಟು ಹೆಚ್ಚಬೇಕೆಂದರೆ ಮೇಲೆ ತುಪ್ಪ ಅಥವಾ ಬೆಣ್ಣೆಯನ್ನೂ ಹಾಕಬಹುದು.
Recipe | 15 ನಿಮಿಷದಲ್ಲಿ ಮಾಡಿ ಫಟಾಫಟ್ ಶೀರ್ ಖುರ್ಮಾ; ಇಲ್ಲಿದೆ ಸಿಂಪಲ್ ವಿಧಾನ