ಸಿಹಿ ತಿಂಡಿ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ. ಚಿಕ್ಕವರಿಂದ ಹಿರಿಯರವರೆಗೂ ಖುಷಿ ಪಟ್ಟು ಸೇವಿಸುತ್ತಾರೆ. ಬಹಳ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಸಿಹಿ ಖಾದ್ಯದ ಕುರಿತು ಇಲ್ಲಿ ತಿಳಿಸಲಾಗಿದೆ. ಶೀರ್ ಖುರ್ಮಾ ಪರ್ಷಿಯನ್ ಭಾಷೆಯಲ್ಲಿ ಹಾಲನ್ನು ಶೀರ್ ಎಂದು ಖರ್ಜೂರವನ್ನು ಖುರ್ಮಾ ಎಂದು ಕರೆಯಲಾಗುತ್ತದೆ.
ಇದನ್ನು ಓದಿ: ಬ್ರೆಡ್ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್; ಇಲ್ಲಿದೆ ಸಿಂಪಲ್ ವಿಧಾನ | Recipe
ಇದನ್ನು ತಯಾರಿಸಲು ನೀವು ಹೆಚ್ಚು ಶ್ರಮಪಡಬೇಕಾಗಿಲ್ಲ. ಡ್ರೈಫ್ರೂಟ್ಸ್, ಸಕ್ಕರೆ, ಶಾವಿಗೆ ಮತ್ತು ಹಾಲಿದ್ದರೆ ಸಾಕು. 15 ನಿಮಿಷದಲ್ಲಿ ಶೀರ್ ಖುರ್ಮಾ ತಯಾರಿಸಬಹುದು ಪಾಕ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಶೀರ್ ಖುರ್ಮಾ ಮಾಡಲು ಬೇಕಾಗುವ ಪದಾರ್ಥಗಳು
- 50 ಗ್ರಾಂ ಶಾವಿಗೆ
- 1/2 ಲೀಟರ್ ಹಾಲು
- 1/4 ಕಪ್ ಸಕ್ಕರೆ
- ದ್ರಾಕ್ಷಿ, ಗೋಡಂಬಿ
- 1 ಅಗತ್ಯವಿರುವಷ್ಟು ಬಾದಾಮಿ
- 3 ಟೀಸ್ಪೂನ್ ಗಸಗಸೆ
ಶೀರ್ ಖುರ್ಮಾ ಮಾಡುವ ವಿಧಾನ
ಶೀರ್ ಖುರ್ಮಾ ಮಾಡಲು ಮೊದಲು ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಬಿಸಿ ಮಾಡಿ. ತುಪ್ಪವನ್ನು ಬಿಸಿ ಮಾಡಿದ ನಂತರ ಗಸಗಸೆ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿ ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಫ್ರೈ ಮಾಡಿ. 2 ರಿಂದ 3 ನಿಮಿಷಗಳ ನಂತರ ಮತ್ತೊಂದು ಬಾಣಲೆಯಲ್ಲಿ ಶಾವಿಗೆಯನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಫ್ರೈ ಮಾಡಿ. ಶಾವಿಗೆ ಉರಿದ ನಂತರ ಸ್ವಲ್ಪ ಬಿಸಿನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಈಗ ಅಗತ್ಯಕ್ಕೆ ತಕ್ಕಂತೆ ಹಾಲು ಸೇರಿಸಿ ಮತ್ತು ಏಲಕ್ಕಿ ಪುಡಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮಧ್ಯಮ ಉರಿಯಲ್ಲಿ 4 ರಿಂದ 5 ನಿಮಿಷಗಳ ಕಾಲ ಬೇಯಿಸಿ. ಈಗ ಶೀರ್ ಖುರ್ಮಾ ಸಿದ್ಧವಾಗಿದೆ. ನಿಮ್ಮ ಆಯ್ಕೆಯ ಡ್ರೈಫ್ರೂಟ್ಸ್ಗಳನ್ನು ಸೇರಿಸಿ. ಈ ವಿಶೇಷ ಸಿಹಿ ಖಾದ್ಯ ಸವಿಯಲು ಸಿದ್ಧ.
15 ನಿಮಿಷ.. 5 ಪದಾರ್ಥಗಳನ್ನು ಬಳಸಿ ಮಾಡಿ ಟೇಸ್ಟಿ ಬೀಟ್ರೂಟ್ ಪುಡಿಂಗ್; ಇಲ್ಲಿದೆ ಸಿಂಪಲ್ ವಿಧಾನ | Recipe