ಬೀಟ್ರೂಟ್ ಆರೋಗ್ಯಕ್ಕೆ ಉತ್ತಮ ತರಕಾರಿಯಾಗಿದೆ. ಆದರೆ ಮಕ್ಕಳು ಬೀಟ್ರೂಟ್ ನೋಡಿದರೆ ಸಾಕು ಮೂಗು ಮುರಿಯುತ್ತಾರೆ. ಚಿಕ್ಕವರಿಂದ ಹಿರಿಯರವೆರೆಗೆ ಇಷ್ಟು ಪಟ್ಟು ಸೇವಿಸಬಹುದಾದ ಬೀಟ್ರೂಟ್ನಿಂದ ಮಾಡಬಹುದಾದ ಬೀಟ್ರೂಟ್ ಪುಡಿಂಗ್ ರೆಸಿಪಿಯನ್ನು(Recipe) ಇಲ್ಲಿ ತಿಳಿಸಲಾಗಿದೆ. ಬೀಟ್‌ರೂಟ್‌ನ ಆಕರ್ಷಕ ಬಣ್ಣದಿಂದಾಗಿ ಮಕ್ಕಳು ಈ ಸಿಹಿಯನ್ನು ಖುಷಿಯಿಂದ ತಿನ್ನುತ್ತಾರೆ. ಈ ರೆಸಿಪಿಯನ್ನು ಬಿಸಿಬಿಸಿಯಾಗಿ ಬಡಿಸಿದರೆ ಅದು ಇನ್ನಷ್ಟು ರುಚಿಕರವಾಗಿರುತ್ತದೆ.
ಇದನ್ನು ಓದಿ: ಫಟಾಫಟ್ ಮನೆಯಲ್ಲೆ ಮಾಡಿ ಗರಿಗರಿಯಾದ ಜಿಲೇಬಿ; ಇಲ್ಲಿದೆ ಸಿಂಪಲ್ ವಿಧಾನ | Recipe
ಇದಲ್ಲದೆ ನೀವು ತಣ್ಣನೆಯ ಆಹಾರವನ್ನು ಇಷ್ಟಪಡುತ್ತಿದ್ದರೆ ಅದನ್ನು ರೆಫ್ರಿಜರೇಟರ್‌ನಲ್ಲಿ ಇರಿಸುವ ಮೂಲಕವೂ ಬಳಸಬಹುದು. ಅಲ್ಲದೆ ನೀವು ಬಯಸಿದರೆ ನೀವು ಅದನ್ನು 4 ರಿಂದ 5 ದಿನಗಳವರೆಗೆ ರೆಫ್ರಿಜರೇಟರ್‌ನಲ್ಲಿ ಸುರಕ್ಷಿತವಾಗಿ ಇರಿಸುವ ಮೂಲಕ ಬಳಸಬಹುದು. ಬೀಟ್ರೂಟ್ ಪುಡಿಂಗ್ ಅನ್ನು ನೀವು ಮನೆಯಲ್ಲಿಯೇ ಹೇಗೆ ಸುಲಭವಾಗಿ ತಯಾರಿಸಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಬೀಟ್ರೂಟ್ ಪುಡಿಂಗ್ ಮಾಡಲು ಬೇಕಾಗುವ ಪದಾರ್ಥಗಳು
- 4 ಬೀಟ್ರೂಟ್
- ಗೋಡಂಬಿ
- 1 ಕಪ್ ಹಾಲು
- 1 ಕಪ್ ತುಪ್ಪ
- 3/4 ಕಪ್ ಸಕ್ಕರೆ
ಬೀಟ್ರೂಟ್ ಪುಡಿಂಗ್ ಮಾಡುವ ವಿಧಾನ
ಮೊದಲಿಗೆ ಒಂದು ಪ್ಯಾನ್ ಅನ್ನು ತೆಗೆದುಕೊಂಡು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ತುಪ್ಪ ಚೆನ್ನಾಗಿ ಬಿಸಿಯಾದಾಗ ಅದಕ್ಕೆ ಸಣ್ಣಗೆ ಕತ್ತರಿಸಿದ ಗೋಡಂಬಿಯನ್ನು ಸೇರಿಸಿ. ಗೋಡಂಬಿ ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಅದಕ್ಕೆ ತುರಿದ ಬೀಟ್ರೂಟ್ ಸೇರಿಸಿ ಎಲ್ಲವನ್ನು ಮಿಕ್ಸ್ ಮಾಡಿ. ಮಿಕ್ಸ್ ಮಾಡಿದ ಬಳಿಕ ಉಳಿದ ತುಪ್ಪವನ್ನು ಸೇರಿಸಿ, ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ. 5 ನಿಮಿಷಗಳ ಕಾಲ ಬೇಯಿಸಿದ ನಂತರ ಹಾಲು ಸೇರಿಸಿ ಮಿಕ್ಸ್ ಮಾಡಿದ ಬಳಿಕ 15 ನಿಮಿಷಗಳ ಕಾಲ ಬೇಯಿಸಿ. ಮಿಶ್ರಣವು ತುಂಬಾ ದಪ್ಪವಾಗಿದ್ದರೆ ಅಗತ್ಯಕ್ಕೆ ಅನುಗುಣವಾಗಿ ಸ್ವಲ್ಪ ಹೆಚ್ಚು ಹಾಲು ಸೇರಿಸಬಹುದು.
ಎಲ್ಲಾ ಪದಾರ್ಥಗಳು ಚೆನ್ನಾಗಿ ಬೇಯಿಸಿದ ನಂತರ ಬೀಟ್ರೂಟ್ ಮೃದುವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಬೀಟ್ರೂಟ್ ಸಂಪೂರ್ಣವಾಗಿ ಮೃದುವಾಗಿದ್ದರೆ ಅದರಲ್ಲಿ ಮೂರು-ನಾಲ್ಕು ಕಪ್ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಸಕ್ಕರೆ ಸೇರಿಸಿದ ನಂತರ ನೀವು 5 ರಿಂದ 7 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಬೇಕು. ಬಳಿಕ ಗ್ಯಾಸ್ ಆಫ್ ಮಾಡಿ. ಈಗ ಬೀಟ್ರೂಟ್ ಪುಡಿಂಗ್ ಸಿದ್ಧವಾಗಿದೆ, ಅದನ್ನು ಅಲಂಕರಿಸಲು ಬೇಕಿದ್ದರೆ ನೀವು ಗೋಡಂಬಿ ಬಳಸಬಹುದು.
ಮನೆಯಲ್ಲೇ ಮಾಡಿ ಡ್ರೈಫ್ರೂಟ್ ಗುಲಾಬ್ ಜಾಮೂನ್; ಇಲ್ಲಿದೆ ಸಿಂಪಲ್ ರೆಸಿಪಿ | Recipe