ಜಿಲೇಬಿಯು ಪ್ರಸಿದ್ಧ ಭಾರತೀಯ ಸಿಹಿ ತಿಂಡಿಯಾಗಿದೆ. ಇದನ್ನು ಪ್ರತಿಯೊಬ್ಬರೂ ತಿನ್ನಲು ಇಷ್ಟಪಡುತ್ತಾರೆ. ಈ ಸಿಹಿ ಖಾದ್ಯವನ್ನು ಮನೆಯಲ್ಲಿ ತಯಾರಿಸುವುದು ಹೇಗೆ ಎಂಬುದ ಹಲವರ ಯೋಚನೆ. ಇನ್ನು ಕೆಲವರಿಗೆ ಮನೆಯಲ್ಲಿ ಜಿಲೇಬಿ ಮಾಡಿದರೂ ಗರಿಗರಿಯಾಗುವುದಿಲ್ಲ ಎಂಬ ಚಿಂತೆ. ಮಳಿಗೆಗಳಲ್ಲಿ ಸಿಗುವಂತೆ ಮನೆಯಲ್ಲಿ ಜಿಲೇಬಿ ಮಾಡುವುದು ಹೇಗೆ ಎಂದು ಆಲೋಚಿಸುತ್ತಿದ್ದೀರಾ. ನಿಮಗಾಗಿಯೇ ಮನೆಯಲ್ಲೇ ಸುಲಭವಾಗಿ ಜಿಲೇಬಿ ಮಾಡಬಹುದಾದ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಮನೆಯಲ್ಲೇ ಮಾಡಿ ಡ್ರೈಫ್ರೂಟ್ ಗುಲಾಬ್ ಜಾಮೂನ್; ಇಲ್ಲಿದೆ ಸಿಂಪಲ್ ರೆಸಿಪಿ | Recipe
ಜಿಲೇಬಿ ಮಾಡಲು ಬೇಕಾಗುವ ಪದಾರ್ಥಗಳು
- 1/2 ಕಪ್ ಮೈದಾ ಹಿಟ್ಟು
- ಅಡುಗೆ ಎಣ್ಣೆ
- ಹತ್ತಿ ಬಟ್ಟೆ
- 1/2 ಟೇಬಲ್ಸ್ಪೂನ್ ಬೇಕಿಂಗ್ ಪೌಡರ್
- ಮೊಸರು
- 2 ಕಪ್ ನೀರು
- 1 ಪಿಂಚ್ ಹಳದಿ ಬಣ್ಣ
- 1 ಚಮಚ ಕಾರ್ನ್ ಹಿಟ್ಟು
- ಸಕ್ಕರೆ
- ಏಲಕ್ಕಿ ಪುಡಿ
ಜಿಲೇಬಿ ಮಾಡುವ ವಿಧಾನ
- ಮೊದಲು ಒಂದು ಪಾತ್ರೆಯಲ್ಲಿ ಮೈದಾ, ಅಡಿಗೆ ಸೋಡಾ, ಕಾರ್ನ್ ಫ್ಲೋರ್ ಅನ್ನು ಹಾಕಿ ಅದಕ್ಕೆ ನೀರನ್ನು ಸೇರಿಸಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಈಗ ಈ ಮಿಶ್ರಣಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ತೆಳುವಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ, ಏಕೆಂದರೆ ಜಿಲೇಬಿ ಚೆನ್ನಾಗಿ ಬರುವುದಿಲ್ಲ. ಈಗ ಆ ಮಿಶ್ರಣದಕ್ಕೆ ಹಳದಿ ಬಣ್ಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು 4ರಿಂದ5 ಗಂಟೆಗಳ ಕಾಲ ಮುಚ್ಚಿಡಿ.
- ಜಿಲೇಬಿಗಾಗಿ ಸಕ್ಕರೆ ಪಾಕವನ್ನು ತಯಾರಿಸಲು ಮತ್ತೊಂದು ಕಡಾಯಿಯಲ್ಲಿ 2 ಕಪ್ ನೀರನ್ನು ತೆಗೆದುಕೊಂಡು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿ. ನೀರು ಸ್ವಲ್ಪ ಬಿಸಿಯಾದಾಗ ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಕುದಿಸಿ. ಈ ಸಕ್ಕರೆ ಪಾಕ ತುಂಬಾ ದಪ್ಪವಾಗಿರಬಾರದು ಅಥವಾ ತುಂಬಾ ತೆಳುವಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.
- ಇದಾದ ಬಳಿಕ, ಮತ್ತೊಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಗ್ಯಾಸ್ ಮೇಲಿಟ್ಟು ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಸಿದ್ದಪಡಿಸಿರುವ ಮಿಶ್ರಣವನ್ನು ಹತ್ತಿ ಬಟ್ಟೆಯಲ್ಲಿ ಹಾಕಿ ಅದನ್ನು ಕೈಗಳಿಂದ ಒತ್ತಿ ಜಿಲೇಬಿಯ ಆಕಾರವನ್ನು ನೀಡಿ. ನಿಮಗಿಷ್ಟವಾದರೆ ಹತ್ತಿ ಬಟ್ಟೆಯ ಬದಲಿಗೆ ಸಾಸ್ ಬಾಟಲಿಯನ್ನು ಸಹ ಬಳಸಬಹುದು. ಜಿಲೇಬಿ ಎಣ್ಣೆಯಲ್ಲಿ ಒಂದು ಕಡೆ ಬೆಂದ ಬಳಿಕ ಮತ್ತೊಂದು ಬದಿಗೆ ತಿರುಗಿಸಿ. ಎರಡು ಕಡೆ ಬೆಂದ ಬಳಿಕ ಅದನ್ನು ಸಕ್ಕರೆ ಪಾಕದಲ್ಲಿ ಹಾಕಿ ಸ್ವಲ್ಪ ಸಮಯ ಬಿಡಿ. ನಂತರ ಬಿಸಿ ಬಿಸಿ ಜಿಲೇಬಿಯನ್ನು ಸವಿಯಲು ನೀಡಿ.
15 ನಿಮಿಷದಲ್ಲಿ ತಯಾರಿಸಿ ರುಚಿಕರ ಆಲೂ ದಹಿ ಕರಿ; ಇಲ್ಲಿದೆ ಸಿಂಪಲ್ ರೆಸಿಪಿ | Recipe