ಕ್ಯಾರೆಟ್ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ ಸವಿಯುತ್ತಾರೆ. ಈಗ ಫೆಬ್ರವರಿ ತಿಂಗಳ ಅರ್ಧ ಭಾಗ ಕಳೆದು ಹೋಗುತ್ತಿದ್ದು ಕೆಲವೇ ದಿನಗಳಲ್ಲಿ ಬಿಸಿಲು ಹೆಚ್ಚಾಗಲು ಆರಂಭವಾಗುತ್ತದೆ. ಕ್ಯಾರೆಟ್ ಸೀಸನ್ ಮುಗಿಯುವ ಮೊದಲೇ ನೀವು ಹಲ್ವಾ ಮಾಡುವ ಆಲೋಚನೆಯಲ್ಲಿರುಬೇಕು. ಅದಕ್ಕಾಗಿಯೇ ನಿಮಗಾಗಿಯೇ ಹೊರ ರೆಸಿಪಿಯನ್ನು ಇಲ್ಲಿ ತಿಳಿಸುತ್ತಿದ್ದೇವೆ.(Recipe)
ಇದನ್ನು ಓದಿ: ಫಟಾಫಟ್ ಮಾಡಿ ರುಚಿಕರ ದಮ್ ಆಲೂ; ಇಲ್ಲಿದೆ ಲಖನೌನ ಈ ವಿಶೇಷ ಖಾದ್ಯ ಮಾಡುವ ವಿಧಾನ | Recipe
ಅಂದ್ಹಾಗೆ ನಿಮಗೆ ಕ್ಯಾರೆಟ್ ಹಲ್ವಾ ತಿಂದು ಬೇಸರವಾಗಿದ್ದರೆ ಅದರ ಬರ್ಫಿ ಮಾಡಿ ಸವಿಯಬಹುದು. ಕ್ಯಾರೆಟ್ ಬರ್ಫಿಯನ್ನು ತಯಾರಿಸುವುದು ಸಹ ಬಹಳ ಸುಲಭ. ಮನೆಯಲ್ಲಿಯೇ ರುಚಿಕರ ಕ್ಯಾರೆಟ್ ಬರ್ಫಿ ಮಾಡಬಹುದು. ಈ ಅದ್ಭುತ ಸಿಹಿ ಬಾಯಿಗೆ ಬಂದ ಕೂಡಲೇ ಕರಗುತ್ತದೆ. ರುಚಿಕರವಾಗಿರುವುದರ ಜತೆಗೆ ಇದು ತುಂಬಾ ಆರೋಗ್ಯಕರವೂ ಆಗಿದೆ. ಅದಕ್ಕಾಗಿಯೇ ಈ ರೆಸಿಪಿಯನ್ನು ಇಲ್ಲಿ ನಿಮಗಾಗಿ ಹಂಚಿಕೊಳ್ಳುತ್ತಿದ್ದೇವೆ.
ಕ್ಯಾರೆಟ್ ಬರ್ಫಿ ಮಾಡಲು ಬೇಕಾಗುವ ಪದಾರ್ಥಗಳು
- ಒಂದು ಕಪ್ ಖೋವಾ
- 1/2 ಕಪ್ ಸಕ್ಕರೆ
- 2 ಚಮಚ ತುಪ್ಪ
- 2 ಚಮಚ ಹಾಲು
- 2 ಕಪ್ ತುರಿದ ಕ್ಯಾರೆಟ್
- 1/2 ಟೀಸ್ಪೂನ್ ಏಲಕ್ಕಿ ಪುಡಿ
- 2 ಚಮಚ ಸಣ್ಣಗೆ ಹೆಚ್ಚಿದ ನಿಮಗಿಷ್ಟದ ಡ್ರೈಫ್ರೂಟ್ಸ್
ಕ್ಯಾರೆಟ್ ಬರ್ಫಿ ಮಾಡುವ ವಿಧಾನ
ಬರ್ಫಿ ಮಾಡಲು ಮೊದಲು ಒಂದು ಪ್ಯಾನ್‌ಗೆ ತುಪ್ಪ ಹಾಕಿ ಮತ್ತು ಅದರಲ್ಲಿ ತುರಿದ ಕ್ಯಾರೆಟ್‌ಗಳನ್ನು ಕಡಿಮೆ ಉರಿಯಲ್ಲಿ ಬೇಯಿಸಿ. ಕ್ಯಾರೆಟ್ ಮೃದುವಾಗುವವರೆಗೆ ಮತ್ತು ತಿಳಿ ಚಿನ್ನದ ಬಣ್ಣ ಬರುವವರೆಗೆ ನೀವು ಬೇಯಿಸಬೇಕು. ಇದನ್ನು ಚೆನ್ನಾಗಿ ಬೇಯಿಸಲು ನಿಮಗೆ 10 ನಿಮಿಷಗಳು ಬೇಕಾಗುತ್ತದೆ. ನಿಗದಿತ ಸಮಯದ ನಂತರ ಅದಕ್ಕೆ ಸಕ್ಕರೆ ಮತ್ತು ಹಾಲು ಸೇರಿಸಿ ನಿರಂತರವಾಗಿ ಬೆರೆಸಿ ಬೇಯಿಸಿ. ಹಾಲು ಮತ್ತು ಸಕ್ಕರೆ ಕ್ಯಾರೆಟ್‌ನೊಂದಿಗೆ ಸಂಪೂರ್ಣವಾಗಿ ಮಿಶ್ರಣವಾಗುವವರೆಗೆ ಬೆರೆಸಿ.
ನಂತರ ಕ್ಯಾರೆಟ್ ಮೃದುವಾದಾಗ ಮತ್ತು ಮಿಶ್ರಣವು ಸ್ವಲ್ಪ ದಪ್ಪವಾದಾಗ ಖೋವಾವನ್ನು ಸೇರಿಸಬಹುದು. ಚೆನ್ನಾಗಿ ಬೆರೆಸಿದ ನಂತರ ಸುಮಾರು 10 ರಿಂದ 20 ನಿಮಿಷಗಳ ಕಾಲ ಬೆರೆಸಿ ಬೇಯಿಸಬೇಕು. ಈ ಮಿಶ್ರಣವು ಪ್ಯಾನ್‌ನಿಂದ ಹೊರಬರಲು ಪ್ರಾರಂಭಿಸುವವರೆಗೆ ಬೇಯಿಸಿ. ಈಗ ಏಲಕ್ಕಿ ಪುಡಿ ಮತ್ತು ಕತ್ತರಿಸಿದ ಡ್ರೈಫ್ರೂಟ್ಸ್ ಸೇರಿಸಿ.
ಬರ್ಫಿ ತಯಾರಿಸಲು ಮಿಶ್ರಣ ಸಿದ್ಧವಾದ ನಂತರ ಅದನ್ನು ತುಪ್ಪ ಲೇಪಿತ ತಟ್ಟೆಯಲ್ಲಿ ತೆಗೆದು ಸಮವಾಗಿ ಹರಡಿ. ಇದನ್ನು ಒಣಗಿದ ಹಣ್ಣುಗಳಿಂದ ಅಲಂಕರಿಸಿ. ನಂತರ ಅದನ್ನು ತಣ್ಣಗಾಗಲು ಫ್ರಿಜ್‌ನಲ್ಲಿ ಇರಿಸಿ. ಇದಾದ ನಂತರ ಅದನ್ನು ಬರ್ಫಿಯ ಆಕಾರದಲ್ಲಿ ಕತ್ತರಿಸಿ. ಈಗ ನೀವು ಕ್ಯಾರೆಟ್ ಬರ್ಫಿ ಸವಿಯಲು ಸಿದ್ಧವಾಗಿದೆ. ಇದನ್ನು ಒಂದು ವಾರ ಸೇವಿಸಬಹುದು.
ಮನೆಯಲ್ಲೇ ಮಾಡಿ ಸ್ಪೈಸಿ ಟೇಸ್ಟಿ ಸಮೋಸಾ; ಇಲ್ಲಿದೆ ತಯಾರಿಸುವ ವಿಧಾನ | Recipe