ಭಾರತೀಯ ಆಹಾರವು ಜಗತ್ತಿನಲ್ಲೇ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಲಖನೌ ತನ್ನ ಸೊಬಗು ಮತ್ತು ಸಂಸ್ಕೃತಿಗೆ ಮಾತ್ರ ಪ್ರಸಿದ್ಧವಾಗಿಲ್ಲ, ಜೊತೆಗೆ ಅದರ ಪಾಕಪದ್ಧತಿಯೂ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಅದರಲ್ಲಿ ಒಂದು ಲಕ್ನೋಯಿ ದಮ್ ಆಲೂ, ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ.(Recipe)
ಇದನ್ನು ಓದಿ: ಟೇಸ್ಟಿ ಹೆಸರುಕಾಳಿನ ಕಬಾಬ್ ಮಾಡಲು 15-20 ನಿಮಿಷ ಸಾಕು; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್ ವಿಧಾನ | Recipe
ಈ ಖಾದ್ಯವು ಅದ್ಭುತವಾದ ರುಚಿ ಮಾತ್ರವಲ್ಲ ತಯಾರಿಸಲು ತುಂಬಾ ಸುಲಭವೂ ಆಗಿದೆ. ನೀವು ಲಖನೌದ ಈ ಪ್ರಸಿದ್ಧ ಖಾದ್ಯವನ್ನು ಮನೆಯಲ್ಲಿಯೇ ಮಾಡಲು ಬಯಸಿದರೆ ಇಲ್ಲಿದೆ ಸಂಪೂರ್ಣ ಮಾಹಿತಿ. ಮಧ್ಯಾಹ್ನ ಮತ್ತು ರಾತ್ರಿ ಊಟ ಎರಡಕ್ಕೂ ಸೂಕ್ತವಾದ ಈ ಸುಲಭವಾದ ಲಖನೌ ದಮ್ ಆಲೂ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಲಖನೌ ದಮ್ ಆಲೂ ಮಾಡಲು ಬೇಕಾಗುವ ಪದಾರ್ಥ
- 4-5 ಮಧ್ಯಮ ಗಾತ್ರದ ಆಲೂಗಡ್ಡೆ (ಬೇಯಿಸಿ ಸಿಪ್ಪೆ ತೆಗೆದಿರುವ ಆಲೂಗೆಡ್ಡ)
- 1 ಕಪ್ ಮೊಸರು
- 2 ಚಮಚ ಕಡ್ಲೆಹಿಟ್ಟು
- 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
- 1 ಟೀಸ್ಪೂನ್ ಅರಿಶಿನ ಪುಡಿ
- 1 ಟೀಸ್ಪೂನ್ ಚಿಲ್ಲಿ ಪೌಡರ್
- 1 ಟೀಸ್ಪೂನ್ ಧನಿಯಾ ಪುಡಿ
- 1 ಟೀಸ್ಪೂನ್ ಗರಂ ಮಸಾಲ
- 1 ಟೀಸ್ಪೂನ್ ಜೀರಿಗೆ
- 2-3 ಹಸಿರು ಮೆಣಸಿನಕಾಯಿಗಳು (ಸಣ್ಣಗೆ ಕತ್ತರಿಸಿದ)
- 1 ಚಮಚ ತಾಜಾ ಕೊತ್ತಂಬರಿ ಎಲೆಗಳು (ಕತ್ತರಿಸಿದ)
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ ಅಥವಾ ತುಪ್ಪ
ದಮ್ ಆಲೂ ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆಯಬೇಕು. ಈಗ ಆಲೂಗಡ್ಡೆಯನ್ನು ಮಧ್ಯದಿಂದ ಅರ್ಧದಷ್ಟು ಕತ್ತರಿಸಿ ಸ್ವಲ್ಪ ಚಪ್ಪಟೆಯಾಗುವಂತೆ ಸ್ವಲ್ಪ ಒತ್ತಿರಿ. ಇವುಗಳನ್ನು ಪಕ್ಕಕ್ಕೆ ಇರಿಸಿ. ಬಳಿಕ ಒಂದು ಬಟ್ಟಲಿನಲ್ಲಿ ಮೊಸರು ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು ಸೇರಿಸಿ. ಯಾವುದೇ ಉಂಡೆಗಳಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ,ಚಿಲ್ಲಿ ಪೌಡರ್, ಧನಿಯಾ ಪುಡಿ, ಗರಂ ಮಸಾಲ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪಕ್ಕಕ್ಕೆ ಇರಿಸಿ.
ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ. ಈಗ ಆಲೂಗಡ್ಡೆ ತುಂಡುಗಳನ್ನು ಸ್ವಲ್ಪ ಉಪ್ಪು ಹಾಕಿ ಹುರಿಯಿರಿ. ಆಲೂಗಡ್ಡೆಯನ್ನು ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿ ಮತ್ತು ನಂತರ ತೆಗೆದು ಪಕ್ಕಕ್ಕೆ ಇರಿಸಿ. ಅದೇ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಉಳಿಸಿ ಜೀರಿಗೆ ಹಾಕಿ ಹುರಿಯಿರಿ. ಜೀರಿಗೆ ಸಿಡಿಯಲು ಪ್ರಾರಂಭಿಸಿದಾಗ, ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಲಘುವಾಗಿ ಹುರಿಯಿರಿ. ಈಗ ಮೊಸರು ಮಿಶ್ರಣವನ್ನು ಬಾಣಲೆಗೆ ಸುರಿಯಿರಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಿ. ಮೊಸರು ಗಟ್ಟಿಯಾಗದಂತೆ ನಿರಂತರವಾಗಿ ಬೆರೆಸಿ.
ಮೊಸರು ಮಿಶ್ರಣ ಚೆನ್ನಾಗಿ ಬೆಂದಾಗ ಮತ್ತು ಎಣ್ಣೆ ಬೇರ್ಪಡಲು ಪ್ರಾರಂಭಿಸಿದಾಗ ಅದಕ್ಕೆ ಹುರಿದ ಆಲೂಗಡ್ಡೆಯನ್ನು ಸೇರಿಸಿ. ಆಲೂಗಡ್ಡೆಯನ್ನು ಮಸಾಲೆಗಳೊಂದಿಗೆ ಚೆನ್ನಾಗಿ ಲೇಪಿಸಿ ಮತ್ತು ಕಡಿಮೆ ಉರಿಯಲ್ಲಿ 10-15 ನಿಮಿಷ ಬೇಯಿಸಿ. ಈ ಸಮಯದಲ್ಲಿ ಆಲೂಗಡ್ಡೆ ಮಸಾಲೆಗಳ ಪರಿಮಳವನ್ನು ಚೆನ್ನಾಗಿ ಹೀರಿಕೊಳ್ಳುವಂತೆ ಪ್ಯಾನ್ ಅನ್ನು ಮುಚ್ಚಿ. ಆಲೂಗಡ್ಡೆ ಸಂಪೂರ್ಣವಾಗಿ ಬೇಯಿಸಿದಾಗ ಮತ್ತು ಮಸಾಲಾ ದಪ್ಪಗಾದಾಗ ಗ್ಯಾಸ್ ಆಫ್ ಮಾಡಿ. ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದ ಲಖನೌ ದಮ್ ಆಲೂವನ್ನು ಬಿಸಿಯಾಗಿ ಬಡಿಸಿ. ಇದನ್ನು ನಾನ್, ರೋಟಿ ಅಥವಾ ಪರಾಠ, ಚಪಾತಿಯೊಂದಿಗೆ ತಿನ್ನಬಹುದು.
ಮನೆಯಲ್ಲೇ ಮಾಡಿ ಸ್ಪೈಸಿ ಟೇಸ್ಟಿ ಸಮೋಸಾ; ಇಲ್ಲಿದೆ ತಯಾರಿಸುವ ವಿಧಾನ | Recipe