

ಪ್ರತಿದಿನ ಮನೆಯಲ್ಲಿ ರುಚಿಕರ ಆಹಾರ ಸೇವಿಸಿವುದೇ ಒಂದು ರೀತಿಯ ಮಜಾ. ಪಲ್ಯ, ಸಾಂಬಾರ್, ರಸಂ, ಅನ್ನ, ಸಂಡಿಗೆಯು ಮೃಷ್ಟಾನ್ನ ಭೋಜನ. ವೆರೈಟಿ ಸಾಂಬಾರ್ ಮತ್ತು ರಸಂ ಮಾಡುವುದೆಂದರೆ ಹೆಂಗಳೆಯರಿಗೆ ಆಸಕ್ತಿ ಜಾಸ್ತಿ. ಅವರಿಗಾಗಿ ಇಲ್ಲಿ ರೆಸ್ಟೋರೆಂಟ್ ಶೈಲಿಯ ಟೊಮೆಟೊ ರಸಂ(Tomato Rasam) ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ಥಟ್ ಅಂತಾ ಹತ್ತೇ ನಿಮಿಷದಲ್ಲಿ ಮಾಡಬಹುದಾದ ರೆಸಿಪಿ ಇದಾಗಿದೆ.
ಮೊದಲು ಟೊಮೆಟೊ, ಜೀರಿಗೆ, ಮೆಣಸು, ಧನಿಯಾಪುಡಿ, ಹುಣಸೆಹಣ್ಣು ಮತ್ತು ಕೆಂಪುಮೆಣಸಿಕಾಯಿ ಹಾಕಿ ರುಬ್ಬಿಕೊಳ್ಳಿ. ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ ಹಚ್ಚಿದ ಟೊಮೊಟೊವನ್ನು ಸೇರಿಸಿ. ಬಳಿಕ ಜೀರಿಗೆ, ಬೆಳ್ಳುಳ್ಳಿ, ಕರಿಬೇವು, ಇಂಗು ಸೇರಿಸಿ ಫ್ರೈ ಮಾಡಿ. ನಂತರ ರುಬ್ಬಿರುವ ಮಸಾಲೆ ಮಿಶ್ರಣವನ್ನು ಸೇರಿಸಿ ನೀರು ಹಾಕಿ 2 ನಿಮಿಷ ಬೇಯಿಸಿ. ನಂತರ ತುರಿದ ತೆಂಗಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಈಗ ಸವಿಯಲು ರುಚಿಕರ ಟೊಮೊಟೊ ರಸಂ ಸಿದ್ಧ.