

ಭಾರತದಲ್ಲಿ ಪ್ರತಿ ಹಬ್ಬದಂದು ಸಿಹಿತಿಂಡಿಗಳನ್ನು ಮಾಡುವ ಅಭ್ಯಾಸವಿದೆ. ಸಿಹಿತಿಂಡಿಗಳನ್ನು ಇಷ್ಟಪಡುವ ಜನರು ಪ್ರತಿ ಬಾರಿ ಹೊಸ ಮತ್ತು ವಿಶೇಷವಾದದ್ದನ್ನು ತಯಾರಿಸಲು ಇಷ್ಟ ಪಡುತ್ತಾರೆ. ಆದ್ದರಿಂದ ಈ ದೀಪಾವಳಿ ಪ್ರಯುಕ್ತ ನಾವು ನಿಮಗೆ ವಿಶೇಷ ಬರ್ಫಿ ಮಾಡುವುದೇಗೆ ಎಂಬುದನ್ನು ಇಲ್ಲಿ ತಿಳಿಸಿದ್ದೇವೆ. ಪದಾರ್ಥಗಳು ಹೆಚ್ಚು ಬೇಕಿಲ್ಲ, ಮನೆಯಲ್ಲೆ ಮಾಡಬಹುದಾದ ಸಿಂಪಲ್ ರೆಸಿಪಿ. (Bharfi Recipe)
ಮೊದಲಿಗೆ ದಪ್ಪ ತಳವಿರುವ ಪಾತ್ರೆಯನ್ನು ತೆಗೆದುಕೊಳ್ಳಿ. ಅದಕ್ಕೆ 2 ಚಮಚ ನೀರನ್ನು ಹಾಕಿ. ನಂತರ 3 ಲೀಟರ್ ಹಾಲನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಹಾಲನ್ನು ಕಾಯಿಸಿ. ಹಾಲು ಕುದಿಯುವಾಗ ಕೆನೆ ರೂಪುಗೊಳ್ಳದಂತೆ ಗಮನ ಹರಿಸಿ. ಹಾಲು ಚೆನ್ನಾಗಿ ಕುದಿಯಲು ಪ್ರಾರಂಭಿಸಿದಾಗ ಸಕ್ಕರೆ ಸೇರಿಸಬೇಕು. ಈ ಸಮಯದಲ್ಲಿ ಸೇರಿಸುವುದರಿಂದ ಸಕ್ಕರೆ ಚೆನ್ನಾಗಿ ಕರಗುತ್ತದೆ. ಕೆನೆಯಾಗದಂತೆ ಎಚ್ಚರ ವಹಿಸಬೇಕು. ಒಂದರಿಂದ ಒಂದೂವರೆ ಗಂಟೆಯ ನಂತರ ಕುದಿಯುವ ಕಾರಣ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಲು ಹಳದಿ ಬಣ್ಣದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈಗ 3 ಚಮಚ ದೇಸಿ ತುಪ್ಪ ಮತ್ತು ಒಂದು ಚಮಚ ಏಲಕ್ಕಿ ಪುಡಿಯನ್ನು ಸೇರಿಸಬೇಕು. ಇದನ್ನು ಹಾಲಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಹಾಲನ್ನು ಕುದಿಯಲು ಬಿಡಿ. ಅಂತಿಮಾವಾಗಿ ಅದು ಮಿಠಾಯಿ ನೋಡಿದ್ದಿರಲ್ಲಾ ಅಷ್ಟು ಗಟ್ಟಿಯಾಗುತ್ತದೆ. ತಕ್ಷಣ ಅದನ್ನು ಒಂದು ಅಗಲವಾದ ತಟ್ಟೆಯನ್ನು ತುಪ್ಪದಿಂದ ಗ್ರೀಸ್ ಮಾಡಿ ಅದರಲ್ಲಿ ಮಿಶ್ರಣವನ್ನು ಹಾಕಿ. ಅಲಂಕಾರಕ್ಕಾಗಿ ಮಿಶ್ರಣದ ಮೇಲೆ ಬಾದಾಮಿ ಮತ್ತು ಪಿಸ್ತಾವನ್ನು ಹಾಕಿ. ನಂತರ ಬರ್ಫಿ ಆಕಾರದಲ್ಲಿ ಕತ್ತರಿಸಿ.