Bread Rasmalai Recipe | ದೀಪಾವಳಿಗೆ ವಿಶೇಷ ಖಾದ್ಯ ಬ್ರೆಡ್ ರಸಮಲೈ; 15 ನಿಮಿಷಗಳಲ್ಲಿ ಮಾಡಬಹುದಾದ ಸಿಂಪಲ್​ ರೆಸಿಪಿ

Untitled design - 2024-10-29T213205.215
Published on

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೆರಡು ದಿನ ಬಾಕಿ ಇದೆ. ಹಬ್ಬಕ್ಕೆ ಮನೆಯಲ್ಲಿ ವಿಶೇಷವಾದ ಸಿಹಿ ತಿಂಡಿಯನ್ನು ತಯಾರಿಸಬೇಕು ಎಂದು ಆಲೋಚಿಸುತ್ತಿದ್ದೀರಾ. ಅತಿಥಿಗಳಿಗೆ ವಿಶೇಷವಾದ ಸಿಹಿ ನೀಡಲು ಇಚ್ಛಿಸಿದರೆ ನಿಮಗಾಗಿಯೆ ಈ ರೆಸಿಪಿ. ಮನೆಯಲ್ಲೆ 15 ನಿಮಿಷಗಳಲ್ಲಿ ಸಿದ್ಧಪಡಿಸಬಹುದಾದ ಬ್ರೆಡ್​ ರಸಮಲೈ(Bread Rasmalai ) ರೆಸಿಪಿಯನ್ನು ಇಲ್ಲಿ ತಿಳಿಸಲಾಗಿದೆ.

ಬ್ರೆಡ್ ರಸಮಲೈ ಮಾಡಲು ಬೇಕಾಗುವ ಪದಾರ್ಥಗಳು

  • ಸ್ಯಾಂಡ್​ವಿಚ್​ ಬ್ರೆಡ್​
  • ಹಾಲು
  • ಸಕ್ಕರೆ
  • ಹಾಲಿನ ಪುಡಿ
  • ಕೇಸರಿ
  • ಏಲಕ್ಕಿ ಪುಡಿ
  • ಸಣ್ಣದಾಗಿ ಹಚ್ಚಿದ ಬಾದಾಮಿ ಮತ್ತು ಪಿಸ್ತಾ

ಮಾಡುವ ವಿಧಾನ

  • ಮೊದಲನೆಯದಾಗಿ ಸ್ಯಾಂಡ್​ವಿಚ್​ ಬ್ರೆಡ್​​ನ ಅಂಚನ್ನು ಕತ್ತರಿಸಿ. ಬ್ರೆಡ್​ ಅನ್ನು ರೌಂಡ್​​ ಆಕಾರದಲ್ಲಿ ಕತ್ತರಿಸಿ.
  • ಬಾಣೆಲೆಯಲ್ಲಿ ಹಾಲನ್ನು ತೆಗೆದುಕೊಂಡು ಕುದಿಸಿ, ಪಾತ್ರೆಗೆ ಅಂಟಿಕೊಳ್ಳದ್ದಂತೆ ಎಚ್ಚರ ವಹಿಸಿ. ಮೂರನೇ ಒಂದು ಭಾಗ ಆಗುವವರೆಗೂ ಚೆನ್ನಾಗಿ ಕುದಿಸಿ. ಬಳಿಕ ಅಗತ್ಯಕ್ಕೆ ತಕ್ಕಂತೆ ಸಕ್ಕರೆ ಸೇರಿಸಿ ಮತ್ತು ಹಾಲಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ ಹಾಲಿನ ಪುಡಿ ಮಿಶ್ರಣ ಮಾಡಿ
  • ನಂತರ ಈ ಮಿಶ್ರಣಕ್ಕೆ ಕೇಸರಿ, ಏಲಕ್ಕಿ ಪುಡಿ, ಸಣ್ಣದಾಗಿ ಹಚ್ಚಿದ ಬಾದಾಮಿ ಮತ್ತು ಪಿಸ್ತಾ ಸೇರಿಸಿ ಮಿಶ್ರಣ ಮಾಡಿ. ಈ ಎಲ್ಲಾ ಪದಾರ್ಥಗಳನ್ನು ಸೇರಿಸಿದ ನಂತರ ಸಂಪೂರ್ಣ ಮಿಶ್ರಣವನ್ನು 4 ರಿಂದ 5 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿ. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೂ ಎಂಬುದನ್ನು ನೆನಪಿನಲ್ಲಿಡಿ.
  • ಈಗ ಕತ್ತರಿಸಿದ ಬ್ರೆಡ್ ಅನ್ನು ಸರ್ವಿಂಗ್ ಪ್ಲೇಟ್‌ನಲ್ಲಿ ಇರಿಸಿ ಮತ್ತು ಅದರ ಮೇಲೆ ತಯಾರಿಸಿದ ಮಿಶ್ರಣ ಹಾಕಿ. ಅಲಂಕಾರಕ್ಕೆ ಹಚ್ಚಿದ ಬಾದಾಮಿ ಮತ್ತು ಪಿಸ್ತಾವನ್ನು ಸೇರಿಸಿ. ಈಗ ರುಚಿಕರವಾದ ಬ್ರೆಡ್​ ರಸಮಲೈ ಸವಿಯಲು ಸಿದ್ಧ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net